LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೈತರಿಗೆ ಬಿಗ್ ಅಲರ್ಟ್..! ಪಾರಾಕ್ವಾಟ್ ಕಳೆನಾಶಕ ಮಾರಾಟಕ್ಕೆ ಕೇಂದ್ರದಿಂದ ಬ್ರೇಕ್

ರೈತರು ಹಾಗೂ ಗ್ರಾಮೀಣ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ತೀವ್ರ ವಿಷಕಾರಿ ಎಂದು ಆತಂಕ ವ್ಯಕ್ತವಾಗಿದ್ದ ಪಾರಾಕ್ವಾಟ್ ಡೈಕ್ಲೋರೈಡ್ ಕಳೆನಾಶಕದ ಹೊಸ ನೋಂದಣಿಗೆ ನಿಷೇಧ ಹೇರಲಾಗಿದ್ದು, ಈಗಾಗಲೇ ನೀಡಲಾಗಿರುವ ನೋಂದಣಿ ಪ್ರಮಾಣಪತ್ರಗಳನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಆದೇಶಿಸಿದೆ. ಸೆಪ್ಟೆಂಬರ್ 22ರಂದು ಹೊರಡಿಸಿದ ಗೆಜೆಟ್ ಅಧಿಸೂಚನೆಯ ಮೂಲಕ ಈ ಕ್ರಮವನ್ನು ಪ್ರಕಟಿಸಲಾಗಿದೆ.

ರೈತರು ಹಾಗೂ ಗ್ರಾಮೀಣ ಜನರ ಜೀವಕ್ಕೆ ಅಪಾಯಕಾರಿಯಾಗಿರುವ ಪಾರಾಕ್ವಾಟ್ ಡೈಕ್ಲೋರೈಡ್ ಕಳೆನಾಶಕದ ಹೊಸ ನೋಂದಣಿಗೆ ನಿಷೇಧ ಹೇರಲಾಗಿದೆ.

ಈಗಾಗಲೇ ನೀಡಲಾಗಿರುವ ನೋಂದಣಿ ಪ್ರಮಾಣಪತ್ರಗಳನ್ನು ಕೂಡ ರದ್ದುಗೊಳಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಸೆಪ್ಟೆಂಬರ್ 22ರಂದು ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಮೂಲಕ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.

ಪಾರಾಕ್ವಾಟ್ ಕೇವಲ ಕಳೆ ನಿಯಂತ್ರಣ ಔಷಧವಲ್ಲ, ಇದು ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂಬ ಆತಂಕ ಹಲವು ವರ್ಷಗಳಿಂದ ವ್ಯಕ್ತವಾಗುತ್ತಿತ್ತು. ಇದಕ್ಕೆ ನಿರ್ದಿಷ್ಟ ಪ್ರತಿವಿಷ ಇಲ್ಲದಿರುವುದು ಹಾಗೂ ತೀವ್ರ ವಿಷಕಾರಿ ಗುಣ ಹೊಂದಿರುವುದರಿಂದ ಜೀವಹಾನಿಯಾಗುವ ಅಪಾಯವಿದೆ ಎಂದು ವೈದ್ಯರು, ಸಾರ್ವಜನಿಕ ಸಂಘಟನೆಗಳು ಹಾಗೂ ರೈತರು ಹಲವು ಬಾರಿ ಎಚ್ಚರಿಸಿದ್ದರು.

ಇದರ ಜೊತೆಗೆ ಮಣ್ಣು ಮತ್ತು ನೀರು ಕಲುಷಿತವಾಗುವ ಸಾಧ್ಯತೆ ಹಾಗೂ ಮಣ್ಣಿನ ಫಲವತ್ತತೆಯ ಮೇಲೂ ಪರಿಣಾಮ ಬೀರುವ ಬಗ್ಗೆ ಆತಂಕ ವ್ಯಕ್ತವಾಗಿತ್ತು.

ತೆಲಂಗಾಣದಲ್ಲೂ ತೀವ್ರ ಚರ್ಚೆ

ತೆಲಂಗಾಣದಲ್ಲಿ ಈ ವಿಚಾರ ಮತ್ತಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮಾರ್ಚ್ 30ರಂದು ತೆಲಂಗಾಣ ವಿಧಾನಸಭೆ ಪಾರಾಕ್ವಾಟ್ ಮೇಲೆ ಕೇಂದ್ರ ಸರ್ಕಾರ ಸಂಪೂರ್ಣ ನಿಷೇಧ ಹೇರಬೇಕು ಎಂದು ಒತ್ತಾಯಿಸಿ ನಿರ್ಣಯ ಅಂಗೀಕರಿಸಿತ್ತು.

ಇದಾದ ಬಳಿಕ ರಾಜ್ಯ ಸರ್ಕಾರವು ಪಾರಾಕ್ವಾಟ್‌ನ ಮಾರಾಟ, ಸಂಗ್ರಹಣೆ, ವಿತರಣೆ, ತಯಾರಿಕೆ ಮತ್ತು ಬಳಕೆಯ ಮೇಲೆ 60 ದಿನಗಳ ತಾತ್ಕಾಲಿಕ ನಿಷೇಧ ಹೇರಿತ್ತು. ವಾರಂಗಲ್ ಸಂಸದೆ ಡಾ. ಕಡಿಯಂ ಕಾವ್ಯ ಅವರು ಲೋಕಸಭೆಯಲ್ಲೂ ಈ ವಿಷಯವನ್ನು ಹಲವು ಬಾರಿ ಪ್ರಸ್ತಾಪಿಸಿದ್ದರು.

ಕೇಂದ್ರದಿಂದ ಕರಡು ಆದೇಶ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಜುಲೈ 10ರಂದು ಕರಡು ಆದೇಶ ಹೊರಡಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿತ್ತು.

ತಜ್ಞರ ಸಮಿತಿ ಹಾಗೂ ನೋಂದಣಿ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿದ ಬಳಿಕ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಂಡಿದೆ.

ಕೀಟನಾಶಕ ಕಾಯ್ದೆ-1968ರ ಸೆಕ್ಷನ್ 9ರ ಅಡಿಯಲ್ಲಿ ನೀಡಲಾಗಿದ್ದ ನೋಂದಣಿ ಪ್ರಮಾಣಪತ್ರಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನೋಂದಣಿ ಸಮಿತಿಯು ಈ ಪ್ರಮಾಣಪತ್ರಗಳನ್ನು ಹಿಂಪಡೆಯುವಂತೆ ಸೂಚಿಸಿದ್ದು, ಅವುಗಳನ್ನು ಹಿಂತಿರುಗಿಸದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ.

ಮಾನವರು ಹಾಗೂ ಪ್ರಾಣಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತಕ್ಷಣದ ಕ್ರಮ ಅಗತ್ಯ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.ಈ ನಿರ್ಧಾರವು ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಜನರ ಸುರಕ್ಷತೆಗೆ ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ. ಇನ್ನು ಮುಂದೆ ಪಾರಾಕ್ವಾಟ್‌ಗೆ ಹೊಸ ನೋಂದಣಿ ನೀಡಲಾಗುವುದಿಲ್ಲ. ಈಗಿರುವ ನೋಂದಣಿಗಳನ್ನೂ ರದ್ದುಗೊಳಿಸಲಾಗುತ್ತದೆ.

ರೈತರು ಹಾಗೂ ಸಂಬಂಧಪಟ್ಟ ಇಲಾಖೆಗಳು ಸುರಕ್ಷಿತ ಪರ್ಯಾಯ ಹುಲ್ಲುನಾಶಕಗಳತ್ತ ಗಮನಹರಿಸುವ ಅಗತ್ಯವಿದೆ ಎಂದು ವರದಿ ತಿಳಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!