ಬೆಂಗಳೂರು : ಮಟನ್ ಶಾಪ್ ನಲ್ಲಿ ಡ್ರಗ್ಸ್ ಡೀಲಿಂಗ್ ಮಾಡುತ್ತಿದ್ದ ಇಬ್ಬರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಇದೀಗ ಡ್ರಗ್ಸ್ ಡಿಲೀಟ್ ಮಾಡುತ್ತಿದ್ದ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಜುನೈದ್ ಪಾಶ ಮತ್ತು ರಿಜ್ವಾನ್ ಎಂದು ತಿಳಿದು ಬಂದಿದೆ. ಆರೋಪಿಗಳು ನೈಜೀರಿಯಾ ಪ್ರಜೆಯೊಬ್ಬನಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದರು 10 ಲಕ್ಷದ 60 ಸಾವಿರದ 106 ಗ್ರಾಂ MDMA ಡ್ರಗ್ಸ್ ಇದೀಗ ಪೊಲೀಸರು ಜಪ್ತಿ ಮಾಡಿದ್ದಾರೆ. 2 ಮೊಬೈಲ್ 2,259ರಷ್ಟು ನಗದು ಒಂದು ದ್ವಿಚಕ್ರ ವಾಹನವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.