LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೋವಿಂದಾ-ಕೋಮಲ್ ರಾಣಿ ಅಫೇರ್ ವದಂತಿ: ಮೌನ ಮುರಿದು ಶಾಕಿಂಗ್ ಹೇಳಿಕೆ ನೀಡಿದ ಪತ್ನಿ ಸುನಿತಾ ಅಹುಜಾ!

ಬಾಲಿವುಡ್ ನಟ ಗೋವಿಂದಾ ಹಾಗೂ ಅವರ ಪತ್ನಿ ಸುನಿತಾ ಅಹುಜಾ ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯಲ್ಲಿದೆ. ಗೋವಿಂದಾ ಹಾಗೂ ನಟಿ ಕೋಮಲ್ ರಾಣಿ ಸ್ವರ್ಣಕಾರ್ ನಡುವಿನ ಆಪ್ತತೆಯ ಬಗ್ಗೆ ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ವದಂತಿಗಳ ನಡುವೆಯೇ, ಇಬ್ಬರೂ ಇತ್ತೀಚೆಗೆ ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜ ಗಣಪತಿ ಮಂಟಪಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು. ವಿಶೇಷವೆಂದರೆ, ಗೋವಿಂದಾ ಆಗಮಿಸುವ ಕೆಲವೇ ಗಂಟೆಗಳ ಮೊದಲು ಸುನಿತಾ ಅಹುಜಾ ಸಹ ಅದೇ ಮಂಟಪಕ್ಕೆ ಭೇಟಿ ನೀಡಿದ್ದರು.

ಸುನಿತಾ ಅಹುಜಾ ನೀಡಿರುವ ಪ್ರತಿಕ್ರಿಯೆ: ಈ ಘಟನೆಯ ನಂತರ ಹರಿದಾಡುತ್ತಿರುವ ಸುದ್ದಿ ಹಾಗೂ ನಟಿ ಕೋಮಲ್ ರಾಣಿ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಸುನಿತಾ ಅಹುಜಾ, “ನನಗೆ ಗೋವಿಂದಾ ಬಗ್ಗೆ ಆಗಲಿ ಅಥವಾ ಅವರ ಸಹನಟಿ ಬಗ್ಗೆಯಾಗಲಿ ಏನೂ ಹೇಳಲು ಇಷ್ಟವಿಲ್ಲ. ಅವರು ಸಂತೋಷವಾಗಿದ್ದಾರೆ ಎಂಬುದಷ್ಟೇ ನನಗೆ ಕಾಣಿಸುತ್ತಿದೆ. ದೇವರಿಗೆ ಅವರ ಮೇಲಿರಲಿ. ಅವರಿಗೆ ಹೇಗೆ ಜೀವನ ನಡೆಸಬೇಕೋ ಹಾಗೆ ನಡೆಸಲಿ” ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, “ನನಗೆ ಈ ವಿಷಯಗಳ ಮೇಲೆ ಗಮನ ಹರಿಸಲು ಇಷ್ಟವಿಲ್ಲ. ಅವರು ಎಲ್ಲೇ ಇರಲಿ, ಯಾರೊಂದಿಗೇ ಇರಲಿ, ಸಂತೋಷವಾಗಿರಲಿ ಎಂಬುದಷ್ಟೇ ನನ್ನ ಪ್ರಾರ್ಥನೆ. ನನ್ನ ಗಮನವೆಲ್ಲಾ ಪ್ರಸ್ತುತ ನನ್ನ ಕೆಲಸದ ಮೇಲಿದೆ. ಮತ್ತೆ ಮತ್ತೆ ಅನಗತ್ಯ ವಿವಾದಗಳಲ್ಲಿ ಸಿಲುಕಿಕೊಳ್ಳಲು ನನಗೆ ಇಷ್ಟವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ನಟಿ ಕೋಮಲ್ ರಾಣಿ, ಸುನಿತಾ ಅಹುಜಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಸುನಿತಾ ಅವರು ಗೋವಿಂದಾ ಅವರ ಜೀವನ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಹಾಗೂ ತಾವೇನೂ ಒಡೆದ ಮನೆಗೆ ಪ್ರವೇಶಿಸಿದವರಲ್ಲ ಎಂದು ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಸುನಿತಾ ಅವರ ಈ ಶಾಂತ ಪ್ರತಿಕ್ರಿಯೆ ಗಮನ ಸೆಳೆದಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!