ಬೆಂಗಳೂರು ಟ್ರಾಫಿಕ್ ಅಂದರೆ ಗಂಟೆಗಟ್ಟಲೆ ರಸ್ತೆಯಲ್ಲಿ ಸಿಲುಕುವುದು ಹೊಸ ವಿಚಾರವೇನಲ್ಲ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋವೊಂದು ನಗರದ ಟ್ರಾಫಿಕ್ ಸಮಸ್ಯೆಯ ಮತ್ತೊಂದು ಚಿತ್ರಣವನ್ನು ತೋರಿಸಿದೆ. ಈ ಬಾರಿ ವಾಹನಗಳು ರಸ್ತೆಯಲ್ಲಿ ಮಾತ್ರವಲ್ಲ, ಅಪಾರ್ಟ್‌ಮೆಂಟ್ ಒಳಗೇ ಸಾಲುಗಟ್ಟಿ ನಿಂತಿವೆ.
ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯ ಕಿಟಕಿಯಿಂದ ಹೊರಗಿನ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಮೊದಲು ರಸ್ತೆಯಲ್ಲಿರುವ ವಾಹನ ದಟ್ಟಣೆಯನ್ನು ತೋರಿಸಿದ ಅವರು, ಬಳಿಕ ಪಕ್ಕದಲ್ಲಿರುವ ವಸತಿ ಸಮುಚ್ಚಯದ ಒಳಗಿನ ಪರಿಸ್ಥಿತಿಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಅಪಾರ್ಟ್‌ಮೆಂಟ್‌ನಿಂದ ಹೊರಬರಲು 30 ನಿಮಿಷ
ವಿಡಿಯೋದಲ್ಲಿ ಅಪಾರ್ಟ್‌ಮೆಂಟ್‌ನಿಂದ ಹೊರಗೆ ಹೋಗಲು ಕಾರುಗಳು ಒಂದರ ಹಿಂದೆ ಒಂದರಂತೆ ನಿಂತಿರುವುದು ಕಾಣಿಸುತ್ತದೆ. ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಎಂದು ಮಹಿಳೆ ಹೇಳಿದ್ದಾರೆ.
“ನನ್ನ ರೂಮ್‌ನಿಂದ ಕಾಣುವ ದೃಶ್ಯ ಇದು. ಶನಿವಾರ ಮಧ್ಯಾಹ್ನ 2 ಗಂಟೆಯಾಗಿದೆ. ಹೊರಗಿನ ರಸ್ತೆಯಲ್ಲಿ ಟ್ರಾಫಿಕ್ ಇದೆ. ಆದರೆ ಸೊಸೈಟಿಯ ಒಳಗೂ ಕಾರುಗಳ ಸಾಲು ಇದೆ. ಇಲ್ಲಿಂದ ಹೊರಗೆ ಬರಲು ಕೆಲವರಿಗೆ ಅರ್ಧ ಗಂಟೆ ಬೇಕಾಗಿದೆ” ಎಂದು ಅವರು ಹೇಳಿದ್ದಾರೆ.
ಅಂದರೆ, ಮುಖ್ಯ ರಸ್ತೆಗೆ ತಲುಪುವ ಮೊದಲೇ ಅಪಾರ್ಟ್‌ಮೆಂಟ್ ಒಳಗೆ ಟ್ರಾಫಿಕ್‌ನಲ್ಲಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂಬುದು ಅವರ ಆರೋಪ.
‘ಇದು ಬೆಂಗಳೂರಿನ ಟ್ರಾಫಿಕ್‌ನ ಹೊಸ ಲೆವೆಲ್’
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಹಲವರು ಬೆಂಗಳೂರಿನ ಟ್ರಾಫಿಕ್ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಈ ಭಾಗದ ಹೆಚ್ಚುತ್ತಿರುವ ವಾಹನ ದಟ್ಟಣೆ ಬಗ್ಗೆ ಗಮನ ಸೆಳೆದಿದ್ದಾರೆ.
ಕೆಲವು ಬಳಕೆದಾರರು ವಿಡಿಯೋದಲ್ಲಿರುವ ವಸತಿ ಸಮುಚ್ಚಯವನ್ನು ವರ್ತೂರಿನ ಬ್ರಿಗೇಡ್ ಯುಟೋಪಿಯಾ ಎಂದು ಗುರುತಿಸಿದ್ದಾರೆ. ಕಿರಿದಾದ ರಸ್ತೆ ಮತ್ತು ಹೆಚ್ಚಿನ ಸಂಖ್ಯೆಯ ವಾಹನಗಳಿಂದಾಗಿ ಈ ರೀತಿಯ ಪರಿಸ್ಥಿತಿ ಉಂಟಾಗಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
https://www.instagram.com/reel/DdvsjdVS8bm/?utm_source=ig_embed&utm_campaign=loading” data-instgrm-version=”14″ style=” background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% – 2px); width:calc(100% – 2px);”>https://www.instagram.com/reel/DdvsjdVS8bm/?utm_source=ig_embed&utm_campaign=loading” style=” background:#FFFFFF; line-height:0; padding:0 0; text-align:center; text-decoration:none; width:100%;” target=”_blank”>View this post on Instagramhttps://www.instagram.com/reel/DdvsjdVS8bm/?utm_source=ig_embed&utm_campaign=loading” style=” color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;” target=”_blank”>A post shared by Her Wandering Footprints (@her_wandering_footprints)
">www.instagram.com/embed.js”>
ಇನ್ನೊಬ್ಬರು, ಅಪಾರ್ಟ್‌ಮೆಂಟ್ ಯೋಜನೆಯೊಳಗೆ ಮಾಲ್ ಇರುವುದರಿಂದ ವಾಹನಗಳ ಓಡಾಟ ಹೆಚ್ಚಿರಬಹುದು. ಹೀಗಾಗಿ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಇರಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
“ಇಲ್ಲಿರುವವರಿಗೆ ಹೊರಗೆ ಹೋಗುವುದೇ ಕಷ್ಟವಾಗುವಂತಿದೆ” ಎಂದು ಮತ್ತೊಬ್ಬರು ವ್ಯಂಗ್ಯವಾಗಿ ಬರೆದಿದ್ದಾರೆ.ಮತ್ತೊಬ್ಬ ಬಳಕೆದಾರರು, ಇದೇ ರೀತಿ ದೊಡ್ಡ ಅಪಾರ್ಟ್‌ಮೆಂಟ್‌ಗಳು ಹೆಚ್ಚುತ್ತಾ ಹೋದರೆ ಮುಂದಿನ ದಿನಗಳಲ್ಲಿ ಈ ಪ್ರದೇಶದ ಸಂಚಾರ ವ್ಯವಸ್ಥೆ ಮತ್ತಷ್ಟು ಒತ್ತಡಕ್ಕೆ ಸಿಲುಕಬಹುದು ಎಂದು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಅಪಾರ್ಟ್‌ಮೆಂಟ್‌ಗಳು ಮತ್ತು ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ, ಈ ವಿಡಿಯೋ ಮತ್ತೆ ಸಂಚಾರ ವ್ಯವಸ್ಥೆ ಮತ್ತು ನಗರ ಯೋಜನೆ ಬಗ್ಗೆ ಚರ್ಚೆ ಹುಟ್ಟುಹಾಕಿದೆ.