ಬೆಂಗಳೂರು: ದೇಶೀಯ ಮಾರುಕಟ್ಟೆಯಲ್ಲಿ ಸೋಮವಾರ (ಸೆಪ್ಟೆಂಬರ್ 28) ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾದ ಬದಲಾವಣೆಗಳ ಪ್ರಭಾವದಿಂದಾಗಿ ಭಾರತದಲ್ಲೂ ಬಂಗಾರ ಹಾಗೂ ಬೆಳ್ಳಿ ದರಗಳು ಕಡಿಮೆಯಾಗಿದ್ದು, ಗ್ರಾಹಕರಿಗೆ ಮತ್ತು ಹೂಡಿಕೆದಾರರಿಗೆ ಸಲ್ಪ ನಿರಾಳತೆ ತಂದಿದೆ.
ಗ್ರಾಂ ಚಿನ್ನದ ದರದಲ್ಲಿ 230 ರೂಪಾಯಿ ಇಳಿಕೆ ಸೋಮವಾರದ ವಹಿವಾಟಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ಬರೋಬ್ಬರಿ 230 ರೂಪಾಯಿಗಳಷ್ಟು ತಗ್ಗಿದೆ. ಇದರಿಂದಾಗಿ 22 ಕ್ಯಾರಟ್ ಚಿನ್ನದ ಬೆಲೆ 13,995 ರೂಪಾಯಿಯಿಂದ 13,765 ರೂಪಾಯಿಗೆ ಕುಸಿದಿದೆ. 10 ಗ್ರಾಂ ಚಿನ್ನದ ಬೆಲೆ ಪ್ರಸ್ತುತ 1,37,650 ರೂಪಾಯಿಯಾಗಿದೆ. ಅದೇ ರೀತಿ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1 ಗ್ರಾಂಗೆ 15,017 ರೂಪಾಯಿಗೆ ಇಳಿಕೆಯಾಗಿದ್ದು, 10 ಗ್ರಾಂ ಅಪರಂಜಿ ಚಿನ್ನದ ಬೆಲೆ 1,50,170 ರೂಪಾಯಿ ತಲುಪಿದೆ. ಇನ್ನು 18 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 11,263 ರೂಪಾಯಿಯಾಗಿದೆ.
ಬೆಳ್ಳಿ ಬೆಲೆಯಲ್ಲೂ ತಗ್ಗಿದ ಬಿಸಿ: ಗ್ರಾಂಗೆ 5 ರೂ ಇಳಿಕೆ ಚಿನ್ನದ ದರದೊಂದಿಗೆ ಬೆಳ್ಳಿ ಬೆಲೆಯಲ್ಲೂ ಕುಸಿತ ದಾಖಲಾಗಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 5 ರೂಪಾಯಿ ತಗ್ಗಿದೆ. ದೇಶದ ಪ್ರಮುಖ ನಗರಗಳಾದ ಬೆಂಗಳೂರು, ಮುಂಬೈ ಹಾಗೂ ದೆಹಲಿಗಳಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ 240 ರೂಪಾಯಿ ಇದ್ದು, 100 ಗ್ರಾಂ ಬೆಳ್ಳಿಯ ಬೆಲೆ 24,000 ರೂಪಾಯಿಯಲ್ಲಿದೆ. ಇನ್ನು ಚೆನ್ನೈ, ಕೇರಳ ಹಾಗೂ ತಮಿಳುನಾಡಿನ ಇತರ ಭಾಗಗಳಲ್ಲಿ ಪ್ರತಿ 100 ಗ್ರಾಂ ಬೆಳ್ಳಿಯ ಬೆಲೆ 24,500 ರೂಪಾಯಿ (ಗ್ರಾಂಗೆ 245 ರೂ) ಇದೆ.
ಭಾರತದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ ದೇಶದ ಬಹುತೇಕ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ 13,765 ರೂಪಾಯಿಯ ಆಸುಪಾಸಿನಲ್ಲಿದೆ. ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ, ಕೇರಳ ಮತ್ತು ಭುವನೇಶ್ವರ ನಗರಗಳಲ್ಲಿ 1 ಗ್ರಾಂಗೆ 13,765 ರೂಪಾಯಿ ದಾಖಲಾಗಿದೆ. ಅಹಮದಾಬಾದ್‌ನಲ್ಲಿ 13,770 ರೂಪಾಯಿ ಇದ್ದರೆ, ದೆಹಲಿ, ಜೈಪುರ ಮತ್ತು ಲಕ್ನೋ ನಗರಗಳಲ್ಲಿ 1 ಗ್ರಾಂಗೆ 13,780 ರೂಪಾಯಿ ದರ ನಿಗದಿಯಾಗಿದೆ.
ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಹೋಲಿಕೆ ಭಾರತದಲ್ಲಿ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,017 ರೂಪಾಯಿ ಇರಬೇಕಾದರೆ, ವಿದೇಶಗಳಲ್ಲಿ ಭಾರತಕ್ಕಿಂತ ಕಡಿಮೆ ದರದಲ್ಲಿ ಚಿನ್ನ ಲಭ್ಯವಿರುವುದು ಕಂಡುಬಂದಿದೆ (ಭಾರತೀಯ ರೂಪಾಯಿ ಮೌಲ್ಯದಲ್ಲಿ):
-
ಮಲೇಷ್ಯಾ: 568 ರಿಂಗಿಟ್ (₹13,343)
-
ಕುವೇತ್: 42.84 ಕುವೇತಿ ದಿನಾರ್ (₹13,359)
-
ದುಬೈ: 516.50 ಡಿರಾಮ್ (₹13,494)
-
ಅಮೆರಿಕ: 141 ಡಾಲರ್ (₹13,529)
-
ಸೌದಿ ಅರೇಬಿಯಾ: 531 ಸೌದಿ ರಿಯಾಲ್ (₹13,571)
-
ಕತಾರ್: 516.50 ಕತಾರಿ ರಿಯಾಲ್ (₹13,597)
-
ಓಮನ್: 54.85 ಒಮಾನಿ ರಿಯಾಲ್ (₹13,670)
-
ಸಿಂಗಾಪುರ: 186.50 ಸಿಂಗಾಪುರ್ ಡಾಲರ್ (₹14,003)
ಮಾರುಕಟ್ಟೆ ಇಳಿಕೆಗೆ ಕಾರಣವೇನು? ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ವ್ಯತ್ಯಾಸವಾಗದಿದ್ದರೂ, ಅಂತಾರಾಷ್ಟ್ರೀಯ ಸ್ಪಾಟ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಕುಸಿತವಾಗಿದೆ. ದೀರ್ಘ ಅವಧಿಯ ನಂತರ ಸ್ಪಾಟ್ ಚಿನ್ನದ ಬೆಲೆ 13,000 ರೂಪಾಯಿಗಿಂತ ಕೆಳಮಟ್ಟಕ್ಕೆ ಇಳಿದಿರುವುದು ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಬೆಲೆಗಳು ಇಳಿಕೆಯಾಗಲು ಪ್ರಮುಖ ಕಾರಣವಾಗಿದೆ.