LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಕ್ಟೋಬರ್‌ನಲ್ಲಿ ಬ್ಯಾಂಕ್‌ಗೆ ಎಷ್ಟು ದಿನ ರಜೆ? ಇಲ್ಲಿದೆ ವಿವರ

ಅಕ್ಟೋಬರ್‌ನಲ್ಲಿ ದಸರಾ ಸೇರಿದಂತೆ ಹಲವು ಪ್ರಮುಖ ಹಬ್ಬಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಬೆಂಗಳೂರಿನಲ್ಲೂ ಕೆಲವು ದಿನ ಬ್ಯಾಂಕ್‌ಗಳ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ.

ಭಾರತೀಯ ರಿಸರ್ವ್ ಬ್ಯಾಂಕ್‌ (RBI) ರಜಾದಿನಗಳ ಪಟ್ಟಿಯ ಪ್ರಕಾರ, 2026ರ ಅಕ್ಟೋಬರ್‌ನಲ್ಲಿ ವಿವಿಧ ಹಬ್ಬಗಳು, ರಾಷ್ಟ್ರೀಯ ದಿನಗಳು ಹಾಗೂ ವಾರದ ರಜೆಗಳ ಕಾರಣ ಬ್ಯಾಂಕ್‌ಗಳು ಹಲವು ದಿನ ಮುಚ್ಚಿರಲಿವೆ.ಆದರೆ ಈ ರಜೆಗಳು ದೇಶದ ಎಲ್ಲ ಬ್ಯಾಂಕ್‌ಗಳಿಗೂ ಒಂದೇ ರೀತಿ ಅನ್ವಯಿಸುವುದಿಲ್ಲ. ಕೆಲವು ರಜೆಗಳು ದೇಶಾದ್ಯಂತ ಇದ್ದರೆ, ಇನ್ನು ಕೆಲವು ನಿರ್ದಿಷ್ಟ ರಾಜ್ಯಗಳು ಅಥವಾ ನಗರಗಳಿಗೆ ಮಾತ್ರ ಸೀಮಿತವಾಗಿರುತ್ತವೆ.

ಹೀಗಾಗಿ ಬೆಂಗಳೂರು ಸೇರಿದಂತೆ ನಿಮ್ಮ ನಗರದಲ್ಲಿ ಬ್ಯಾಂಕ್ ಯಾವ ದಿನಗಳಲ್ಲಿ ಬಂದ್ ಇರಲಿದೆ ಎಂಬುದನ್ನು ಮುಂಚಿತವಾಗಿ ತಿಳಿದುಕೊಂಡು ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸಗಳನ್ನು ಯೋಜಿಸಿಕೊಳ್ಳುವುದು ಉತ್ತಮ. SBI, HDFC ಸೇರಿದಂತೆ ಪ್ರಮುಖ ಬ್ಯಾಂಕ್‌ಗಳ ಶಾಖೆಗಳಿಗೂ ಈ ಸ್ಥಳೀಯ ರಜೆಗಳು ಅನ್ವಯಿಸುತ್ತವೆ.ಅಕ್ಟೋಬರ್‌ನಲ್ಲಿ ಬ್ಯಾಂಕ್‌ಗಳಿಗೆ ಯಾವೆಲ್ಲ ದಿನ ರಜೆ ಇದೆ? ಬೆಂಗಳೂರಿನಲ್ಲಿ ಯಾವ ದಿನ ಬ್ಯಾಂಕ್‌ಗಳು ಮುಚ್ಚಿರಲಿವೆ? ಸಂಪೂರ್ಣ ರಜೆ ಪಟ್ಟಿಯನ್ನು ಇಲ್ಲಿ ನೋಡಬಹುದು.

ಅಕ್ಟೋಬರ್ 2026ರ ಪ್ರಮುಖ ಬ್ಯಾಂಕ್ ರಜಾದಿನಗಳ ಪಟ್ಟಿ

ಅಕ್ಟೋಬರ್ 2, ಶುಕ್ರವಾರ: ಮಹಾತ್ಮ ಗಾಂಧಿ ಜಯಂತಿ – ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ.

ಅಕ್ಟೋಬರ್ 10, ಶನಿವಾರ: ಮಹಾಲಯ ಅಮಾವಾಸ್ಯೆ ಹಾಗೂ ಎರಡನೇ ಶನಿವಾರ – ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಬ್ಯಾಂಕ್‌ಗಳು ಬಂದ್.

ಅಕ್ಟೋಬರ್ 17, ಶನಿವಾರ: ಮಹಾ ಸಪ್ತಮಿ – ಅಗರ್ತಲಾದಲ್ಲಿ ಬ್ಯಾಂಕ್ ರಜೆ.

ಅಕ್ಟೋಬರ್ 19, ಸೋಮವಾರ: ದುರ್ಗಾಪೂಜೆ, ಮಹಾನವಮಿ ಹಾಗೂ ಆಯುಧ ಪೂಜೆ – ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಪಟ್ನಾ, ಹೈದರಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಬ್ಯಾಂಕ್‌ಗಳು ಬಂದ್.

ಅಕ್ಟೋಬರ್ 20, ಮಂಗಳವಾರ: ದಸರಾ / ವಿಜಯದಶಮಿ – ಗ್ಯಾಂಗ್‌ಟಾಕ್ ಮತ್ತು ಇಂಫಾಲ್ ಹೊರತುಪಡಿಸಿ ದೇಶದ ಬಹುತೇಕ ನಗರಗಳಲ್ಲಿ ಬ್ಯಾಂಕ್ ರಜೆ.

ಅಕ್ಟೋಬರ್ 21, ಬುಧವಾರ: ವಿಜಯದಶಮಿ / ದುರ್ಗಾಪೂಜೆ ದಸೈನ್ – ಬೆಂಗಳೂರು, ತಿರುವನಂತಪುರಂ, ಕೋಲ್ಕತ್ತಾ, ಕೊಚ್ಚಿ ಸೇರಿದಂತೆ ಹಲವು ನಗರಗಳಲ್ಲಿ ಬ್ಯಾಂಕ್‌ಗಳು ಮುಚ್ಚಿರಲಿವೆ.

ಅಕ್ಟೋಬರ್ 22, ಗುರುವಾರ: ದುರ್ಗಾಪೂಜೆ / ದಸೈನ್ – ಗ್ಯಾಂಗ್‌ಟಾಕ್‌ನಲ್ಲಿ ಬ್ಯಾಂಕ್ ರಜೆ.

ಅಕ್ಟೋಬರ್ 23, ಶುಕ್ರವಾರ: ದುರ್ಗಾಪೂಜೆ / ದಸೈನ್ – ಗ್ಯಾಂಗ್‌ಟಾಕ್‌ನಲ್ಲಿ ಬ್ಯಾಂಕ್ ರಜೆ.

ಅಕ್ಟೋಬರ್ 26, ಸೋಮವಾರ: ಮಹರ್ಷಿ ವಾಲ್ಮೀಕಿ ಜಯಂತಿ / ಲಕ್ಷ್ಮಿ ಪೂಜೆ – ಚಂಡೀಗಢ, ಜಮ್ಮು, ಶಿಮ್ಲಾ ಮತ್ತು ಶ್ರೀನಗರದಲ್ಲಿ ಬ್ಯಾಂಕ್ ರಜೆ.

ಅಕ್ಟೋಬರ್ 29, ಗುರುವಾರ: ಕರ್ವಾ ಚೌತ್ – ಶಿಮ್ಲಾದಲ್ಲಿ ಬ್ಯಾಂಕ್ ರಜೆ.

ಅಕ್ಟೋಬರ್ 31, ಶನಿವಾರ: ನಾಲ್ಕನೇ ಶನಿವಾರ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ – ಅಹಮದಾಬಾದ್‌ನಲ್ಲಿ ಬ್ಯಾಂಕ್ ರಜೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?