LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜೀವಂತವಾಗಿದ್ದರೂ ದಾಖಲೆಯಲ್ಲಿ ಮೃತನಾದ ವ್ಯಕ್ತಿ: ಅಧಿಕಾರಿಗಳ ಯಡವಟ್ಟಿಗೆ ಮಂಡ್ಯದ ಶಫಿಉಲ್ಲಾಖಾನ್ ಕಂಗಾಲು!

ಮಂಡ್ಯ: ಸಾಮಾನ್ಯವಾಗಿ ವ್ಯಕ್ತಿಯೊಬ್ಬರು ಮೃತರಾದ ನಂತರ ಅವರ ಹೆಸರನ್ನು ಸರ್ಕಾರಿ ದಾಖಲೆಗಳಿಂದ ತೆಗೆದುಹಾಕುವುದು, ಮರಣ ಪ್ರಮಾಣಪತ್ರ ಪಡೆಯುವುದು ಸಹಜ ಪ್ರಕ್ರಿಯೆ. ಆದರೆ, ಮಂಡ್ಯದಲ್ಲಿ ವ್ಯಕ್ತಿಯೊಬ್ಬರು ಕಣ್ಣೆದುರಿಗೆ ಜೀವಂತವಾಗಿದ್ದರೂ, ಸರ್ಕಾರಿ ದಾಖಲೆಗಳಲ್ಲಿ ಆತನನ್ನು ಸಾಯಿಸಿರುವ ವಿಚಿತ್ರ ಮತ್ತು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಧಿಕಾರಿಗಳ ಈ ಬೇಜವಾಬ್ದಾರಿ ಯಡವಟ್ಟಿನಿಂದಾಗಿ ಬದುಕಿರುವ ವ್ಯಕ್ತಿಯೊಬ್ಬರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿ, ಅಕ್ಷರಶಃ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

ಈ ವಿಚಿತ್ರ ಸಮಸ್ಯೆಯನ್ನು ಎದುರಿಸುತ್ತಿರುವವರು ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ ಶಫಿಉಲ್ಲಾಖಾನ್. ಕಳೆದ ಮೂರು ತಿಂಗಳಿಂದ ಇವರಿಗೆ ಸಿಗಬೇಕಿದ್ದ ಪಡಿತರ ಕಾರ್ಡ್‌ನ ರೇಷನ್ ದಿಢೀರನೆ ಬಂದ್ ಆಗಿದೆ. ಪಡಿತರ ಸಿಗದಿದ್ದಾಗ ಸಂಶಯಗೊಂಡು ರೇಷನ್ ಕಾರ್ಡ್‌ನಲ್ಲಿ ಏನಾಗಿದೆ ಎಂದು ಪರಿಶೀಲನೆ ನಡೆಸಲು ಹೋದ ಶಫಿಉಲ್ಲಾಖಾನ್ ಅವರಿಗೆ ಕಾಯುತ್ತಿತ್ತು ದೊಡ್ಡ ಶಾಕ್. ಅಧಿಕಾರಿಗಳು ಇವರನ್ನು 2024ರಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ದಾಖಲೆಗಳಲ್ಲಿ ನಮೂದಿಸಿ, ಅಧಿಕೃತ ಮರಣ ಪ್ರಮಾಣಪತ್ರವನ್ನೇ ಸೃಷ್ಟಿಸಿರುವುದು ಕಂಡುಬಂದಿದೆ. ಬದುಕಿರುವ ತಂದೆಗೆ ಡೆತ್ ಸರ್ಟಿಫಿಕೇಟ್ ಸಿಕ್ಕಿದ್ದನ್ನು ಕಂಡು ಇಡೀ ಕುಟುಂಬವೇ ಬೆಚ್ಚಿಬಿದ್ದಿದೆ.

ಘಟನೆಯಿಂದ ತೀವ್ರ ಕಂಗಾಲಾದ ಶಫಿಉಲ್ಲಾಖಾನ್, ಈ ಬಗ್ಗೆ ದೂರು ನೀಡಲು ಹಾಗೂ ಸತ್ಯಾಸತ್ಯತೆ ತಿಳಿಯಲು ನಗರಸಭೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಆದರೆ, ಅಲ್ಲಿಯೂ ಅವರಿಗೆ ಮತ್ತಷ್ಟು ಆಘಾತಕಾರಿ ಅನುಭವ ಎದುರಾಗಿದೆ. ನಗರಸಭೆ ಅಧಿಕಾರಿಗಳು ಯಾವುದೇ ಮರುಪರಿಶೀಲನೆ ನಡೆಸದೆ, 'ನೀವು 2024ರಲ್ಲಿಯೇ ಸಾವನ್ನಪ್ಪಿದ್ದೀರಿ' ಎಂದು ಹೇಳುತ್ತಾ ಅದೇ ಮರಣ ಪ್ರಮಾಣಪತ್ರವನ್ನು ಅವರ ಕೈಗೆ ನೀಡಿದ್ದಾರೆ. ಅಧಿಕಾರಿಗಳ ಈ ಅಸಂವೇದನಾಶೀಲ ನಡೆ ಶಫಿಉಲ್ಲಾಖಾನ್ ಅವರನ್ನು ಮತ್ತಷ್ಟು ದಿಗ್ಭ್ರಮೆಗೊಳಿಸಿದೆ.

ನಗರಸಭೆಯ ಉತ್ತರದಿಂದ ತೃಪ್ತರಾಗದೆ, ಬಳಿಕ ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ ಅಲ್ಲಿನ ಅಧಿಕಾರಿಗಳ ವಾದ ಮತ್ತಷ್ಟು ವಿಚಿತ್ರವಾಗಿತ್ತು. "ಶಫಿಉಲ್ಲಾಖಾನ್ ಎಂಬ ವ್ಯಕ್ತಿಗೆ ನಮ್ಮ ಆಸ್ಪತ್ರೆಯಲ್ಲಿ ಮೂರು ತಿಂಗಳು ಸುದೀರ್ಘ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟ ನಂತರ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿದೆ" ಎಂದು ಮಿಮ್ಸ್ ಅಧಿಕಾರಿಗಳು ಸಮರ್ಥನೆ ನೀಡುತ್ತಿದ್ದಾರೆ. ರಕ್ತಮಾಂಸಗಳೊಂದಿಗೆ ಜೀವಂತ ವ್ಯಕ್ತಿ ಕಣ್ಣೆದುರಿಗೆ ನಿಂತಿದ್ದರೂ, ಕಾಗದದ ಮೇಲಿನ ದಾಖಲೆಯೇ ಸತ್ಯ ಎಂದು ಅಧಿಕಾರಿಗಳು ವಾದಿಸುತ್ತಿರುವುದು ವ್ಯವಸ್ಥೆಯ ದಕ್ಷತೆಗೆ ಹಿಡಿದ ಕನ್ನಡಿಯಾಗಿದೆ.

ಅಧಿಕಾರಿಗಳ ಈ ದೊಡ್ಡ ಪ್ರಮಾದದಿಂದಾಗಿ ಶಫಿಉಲ್ಲಾಖಾನ್ ಅವರ ದೈನಂದಿನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಪಡಿತರ ಚೀಟಿ ರದ್ದಾಗಿರುವುದರಿಂದ ಉಚಿತ ರೇಷನ್ ಸಿಗುತ್ತಿಲ್ಲ. ಜೊತೆಗೆ ಬ್ಯಾಂಕ್ ವಹಿವಾಟುಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಯಾವುದೇ ಸರ್ಕಾರಿ ಕೆಲಸ ಕಾರ್ಯಗಳಿಗೂ ತೆರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಎಲ್ಲೇ ಹೋದರೂ ಸರ್ಕಾರಿ ಯಂತ್ರ ಇವರನ್ನು 'ಮೃತ ವ್ಯಕ್ತಿ' ಎಂದೇ ಪರಿಗಣಿಸುತ್ತಿರುವುದು ಇವರನ್ನು ಕಷ್ಟಕ್ಕೆ ತಳ್ಳಿದೆ.

"ನಾನು ನಿಮ್ಮ ಕಣ್ಣೆದುರಿಗೇ ಜೀವಂತವಾಗಿದ್ದರೂ ನನ್ನನ್ನು ದಾಖಲೆಗಳಲ್ಲಿ ಸತ್ತವನು ಎಂದು ಮಾಡಿಬಿಟ್ಟಿದ್ದಾರೆ. ಈಗ ರೇಷನ್ ಇಲ್ಲ, ಬ್ಯಾಂಕ್ ವ್ಯವಹಾರ ನಡೆಸಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ಬಳಿ ನ್ಯಾಯ ಕೇಳಲು ಹೋದರೆ ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ, ಉಡಾಫೆಯ ಉತ್ತರ ನೀಡುತ್ತಿದ್ದಾರೆ. ದಯವಿಟ್ಟು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ನನಗೆ ನ್ಯಾಯ ಕೊಡಿಸಬೇಕು," ಎಂದು ಶಫಿಉಲ್ಲಾಖಾನ್ ಮನವಿ ಮಾಡಿಕೊಂಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!