ವಿಜಯಪುರ : ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಬರಪಟ್ಟಿಗೆ ಸೇರಿಸಿಲ್ಲ ಎಂದು ಅಸಮಾಧಾನಗೊಂಡಿದ್ದ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ರಾಜೀನಾಮೆ ಸಲ್ಲಿಸಿದ್ದರು. ಆದರೆ ಅವರ ರಾಜಿನಾಮೆ ಸಭಾಪತಿ ಸ್ವೀಕರಿಸಲಿಲ್ಲ. ಈ ವಿಚಾರವಾಗಿ ಯಶವಂತರಾಯಗೌಡ ಪಾಟೀಲ್ ಅವರು ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ್ದು ನಾಲ್ಕನೇ ಹಂತದಲ್ಲೂ ಚಡಚಣ ಮತ್ತು ಇಂಡಿ ತಾಲೂಕುಗಳನ್ನು ಬರ ಎಂದು ಘೋಷಿರಲಿಲ್ಲ. ಹೀಗಾಗಿ ನಾನು ರಾಜೀನಾಮೆ ಸಲ್ಲಿಸಿದ್ದೆ ಎಂದು ತಿಳಿಸಿದರು.
ಹಂತವಾಗಿ ಬರ ಘೋಷಣೆ ಮಾಡಿದ್ದೇವೆ ಎಂದು ವಿವರಿಸಿದ್ದಾರೆ ಕ್ಷೇತ್ರದ ಜನರ ಸಮಸ್ಯೆಗೆ ಗಟ್ಟಿ ಧ್ವನಿಯಾಗಿ ನಿಲ್ಲುವುದು ನನ್ನ ಧರ್ಮ. ಸರ್ಕಾರಕ್ಕೆ ಮನವರಿಕೆ ಮಾಡುವುದು ಕೆಲವೊಮ್ಮೆ ತಡವಾಗಬಹುದು. ಕಳೆದ ಬಾರಿ ಸಚಿವ ಸ್ಥಾನ ಕೊಟ್ಟಿಲ್ಲ ಎಂದು ರಾಜೀನಾಮೆ ಕೊಡಲಿಲ್ಲ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಅವರು ಮನವರಿಕೆ ಮಾಡಿದಾಗ ರಾಜೀನಾಮೆ ವಾಪಸ್ ಪಡೆದಿದ್ದೇನೆ.
ಈಗ ನನ್ನ ಕ್ಷೇತ್ರ ಬರ ಎಂದು ಘೋಷಣೆ ಮಾಡದಿದ್ದಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ನಂತರ ಜಿಲ್ಲೆಯ 13 ತಾಲೂಕುಗಳು ಬರ ಪೀಡಿತ ತಂದು ಘೋಷಣೆ ಮಾಡಿದ್ದಾರೆ. ಕಳೆದ 40 ವರ್ಷದಿಂದ ನಾನು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಹುಟ್ಟಿದ್ದು ಈ ಪಕ್ಷದಲ್ಲಿಯೇ ಸಾಯುತ್ತೇನೆ ಯಾವುದೇ ಕಾರಣಕ್ಕೂ ಪಕ್ಷಾಂತರ ಆಗಲ್ಲ ಎಂದು ಯಶವಂತರಾಯಗೌಡ ಪಾಟೀಲ್ ಹೇಳಿಕೆ ನೀಡಿದರು.