LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾರಿ ಊಟದ ನಂತರ ಕಾಡುವ ಹೊಟ್ಟೆ ಉಬ್ಬರಕ್ಕೆ ಯಾವುದು ಬೆಸ್ಟ್?: ಓಮದ ನೀರೋ ಅಥವಾ ಸೋಂಪು ನೀರೋ?

ಹೆಚ್ಚು ಆಹಾರ ಸೇವಿಸಿದ ನಂತರ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಅಜೀರ್ಣದ ಭಾವನೆ ಉಂಟಾಗುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ನಮ್ಮ ಮನೆಗಳಲ್ಲಿ ತಲೆತಲಾಂತರಗಳಿಂದ ಓಮ (ಅಜವಾನ) ಮತ್ತು ಸೋಂಪು (ಫೆನ್ನಲ್) ನೀರನ್ನು ಬಳಸುವುದು ವಾಡಿಕೆ. ಆದರೆ ಇವೆರಡೂ ಒಂದೇ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ಜೀರ್ಣಕ್ರಿಯೆಯ ಕಿರಿಕಿರಿ ನಿವಾರಣೆಗೆ ಇವೆರಡರಲ್ಲಿ ಯಾವುದು ಹೆಚ್ಚು ಸೂಕ್ತ ಎಂಬುದನ್ನು ಇಲ್ಲಿ ತಿಳಿಯಿರಿ.

ಓಮದ ನೀರು (Ajwain Water): ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಸಮಸ್ಯೆಗೆ ಮನೆಮದ್ದುಗಳಲ್ಲಿ ಓಮಕ್ಕೆ ಪ್ರಮುಖ ಸ್ಥಾನವಿದೆ. ಪೌಷ್ಟಿಕತಜ್ಞೆ ರೂಪಾಲಿ ದತ್ತಾ ಅವರ ಪ್ರಕಾರ, ಅತಿಯಾಗಿ ಆಹಾರ ಸೇವಿಸಿದ ನಂತರ ಉಂಟಾಗುವ ಅಸ್ವಸ್ಥತೆಗೆ ಓಮ ಸಹಕಾರಿ. ಓಮದಲ್ಲಿ ‘ಥೈಮಾಲ್’ (Thymol) ಎಂಬ ನೈಸರ್ಗಿಕ ಸಂಯುಕ್ತವಿದ್ದು, ಇದು ಜೀರ್ಣರಸಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. 2017ರ ‘ಅವಿಸೆನ್ನಾ ಜರ್ನಲ್ ಆಫ್ ಫೈಟೋಮೆಡಿಸಿನ್’ ವರದಿಯ ಪ್ರಕಾರ, ಜೀರ್ಣಕ್ರಿಯೆ ಸಮಸ್ಯೆಯಿರುವ ಜನರಲ್ಲಿ ಓಮ ಆಧಾರಿತ ಪದಾರ್ಥಗಳು ಹೊಟ್ಟೆ ಉಬ್ಬರ, ತೇಗು ಮತ್ತು ವಾಕರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಿರುವುದು ಕಂಡುಬಂದಿದೆ. ಹೀಗಾಗಿ ತೀವ್ರತರದ ಗ್ಯಾಸ್ ಹಾಗೂ ಭಾರವಾದ ಭಾವನೆಗೆ ಓಮದ ನೀರು ತಕ್ಷಣದ ಪರಿಹಾರ ನೀಡುತ್ತದೆ.

ಸೋಂಪು ನೀರು : ಊಟದ ನಂತರ ಸೋಂಪು ನೀರು ಕುಡಿಯುವುದು ಅಥವಾ ಸೋಂಪು ಅಗಿಯುವುದು ಹಲವರ ಅಭ್ಯಾಸ. ಪೌಷ್ಟಿಕತಜ್ಞೆ ಮನ್‌ಪ್ರೀತ್ ಕೌರ್ ಅವರ ಪ್ರಕಾರ, ಊಟದ ನಂತರದ ಹೊಟ್ಟೆ ಉಬ್ಬರಕ್ಕೆ ಇದು ಉತ್ತಮ ಪಾನೀಯ. ಸೋಂಪಿನಲ್ಲಿ ‘ಅನೆಥೋಲ್’ (Anethole) ಎಂಬ ಸಂಯುಕ್ತವಿದ್ದು, ಇದು ಜೀರ್ಣಾಂಗವ್ಯೂಹದ ಸ್ನಾಯುಗಳನ್ನು ಸಡಿಲಗೊಳಿಸಲು ನೆರವಾಗುತ್ತದೆ. 2020ರ ಅಧ್ಯಯನ ಒಂದರ ಪ್ರಕಾರ, ಸೋಂಪು ಆಧಾರಿತ ಚಿಕಿತ್ಸೆಯು ಹೊಟ್ಟೆ ಉಬ್ಬರವನ್ನು ಶಮನಗೊಳಿಸಲು ನೆರವಾಗಿದೆ. ಓಮಕ್ಕೆ ಹೋಲಿಸಿದರೆ ಸೋಂಪು ಅತ್ಯಂತ ಮೃದುವಾದ (milder) ಪ್ರಭಾವವನ್ನು ಹೊಂದಿದ್ದು, ನಿಧಾನವಾಗಿ ಜೀರ್ಣಕ್ರಿಯೆಯನ್ನು ಸುಲಲಿತಗೊಳಿಸುತ್ತದೆ.

ಯಾವುದು ಉತ್ತಮ?: ನಿಮಗೆ ತೀವ್ರವಾದ ಗ್ಯಾಸ್, ಹೊಟ್ಟೆಯಲ್ಲಿ ಭಾರ ಹಾಗೂ ತಕ್ಷಣದ ಪರಿಹಾರ ಬೇಕಿದ್ದರೆ ಓಮದ ನೀರು ಹೆಚ್ಚು ಸೂಕ್ತ. ಆದರೆ ಹೊಟ್ಟೆಯಲ್ಲಿ ಲಘು ಕಿರಿಕಿರಿ ಅಥವಾ ಮೃದುವಾದ ಜೀರ್ಣಕಾರಿ ಪಾನೀಯ ಬೇಕು ಎನಿಸಿದರೆ ಸೋಂಪು ನೀರನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ಇವುಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!