LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಕೆ: ಚಂಪತ್ ರಾಯ್ ಸೇರಿ ಮೂವರಿಗೆ ಕ್ಲೀನ್ ಚಿಟ್

ಅಯೋಧ್ಯೆ: ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದು, ಚಂಪತ್ ರಾಯ್ ಸೇರಿದಂತೆ ಮೂವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ.

ಅಯೋಧ್ಯೆ ರಾಮ ಮಂದಿರ ಪ್ರಕರಣದಲ್ಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಅವರಿಗೆ ಕ್ಲೀನ್‌ಚಿಟ್ ಸಿಕ್ಕಿದ್ದು, ಮೂವರನ್ನೂ ಪ್ರಕರಣದಲ್ಲಿ ಸಾಕ್ಷಿಗಳನ್ನಾಗಿ ಮಾಡಲಾಗಿದೆ.

ಚಾರ್ಜ್ ಶೀಟ್ ನಲ್ಲಿ ಹಣ ಕಳುವಾಗಿದ್ದು ಹೇಗೆ ಪತ್ತೆಯಾಯಿತು ಎಂಬುದನ್ನು ಉಲ್ಲೇಖಿಸಲಾಗಿದೆ. ಕಳ್ಳತನ ನಡೆದ ದಿನದಿಂದ ಹಿಡಿದು ಪೊಲೀಸರು ಕೈಗೊಂಡ ಕ್ರಮಗಳವರೆಗಿನ ಸಂಪೂರ್ಣ ಘಟನೆಗಳ ವಿವರವನ್ನು ಅದರಲ್ಲಿ ದಾಖಲಿಸಲಾಗಿದೆ.

ಚಾರ್ಜ್‌ಶೀಟ್ ಪ್ರಕಾರ, ಜೂನ್ 3ರಂದು ಅವಿನಾಶ್ ಶುಕ್ಲಾ, ಕರುಣೇಶ್ ಪಾಂಡೆ, ಅನುಕಲ್ಪ್ ಮಿಶ್ರಾ ಹಾಗೂ ಲವ್ ಕುಶ್ ಮಿಶ್ರಾ ಅವರು ಕಳ್ಳತನ ಮಾಡುತ್ತಿದ್ದಾಗ ಮೊದಲ ಬಾರಿಗೆ ಸಿಕ್ಕಿಬಿದ್ದಿದ್ದರು. ಅಂದು ಹಣ ಎಣಿಕೆ ಸಿಬ್ಬಂದಿ ಮದನ್ ಗೋಪಾಲ್ ನಿಗಮ್ ಅವರು ಈ ನಾಲ್ವರು ನೋಟಿನ ಕಂತೆಗಳನ್ನು ಅಡಗಿಸುತ್ತಿರುವುದನ್ನು ಗಮನಿಸಿದ್ದರು.

ಬಳಿಕ ಜೂನ್ 4ರಂದು ಮತ್ತೊಂದು ಕಳ್ಳತನದ ಘಟನೆ ಬೆಳಕಿಗೆ ಬಂದಿತ್ತು. ಅವಿನಾಶ್ ಶುಕ್ಲಾ ಕಳ್ಳತನ ಮಾಡುತ್ತಿದ್ದುದನ್ನು ಹಣ ಎಣಿಕೆ ಸಿಬ್ಬಂದಿ ಸಂತ ಪ್ರಸಾದ್ ವರ್ಮಾ ನೋಡಿದ್ದರು. ಬಳಿಕ ಮದನ್ ಗೋಪಾಲ್ ನಿಗಮ್ ಹಾಗೂ ಸಂತ ಪ್ರಸಾದ್ ವರ್ಮಾ ಅವರ ದೂರಿನ ಆಧಾರದ ಮೇಲೆ ಗೇಟ್‌ನಲ್ಲಿ ತಪಾಸಣೆ ಆರಂಭಿಸಲಾಗಿತ್ತು. ತಪಾಸಣೆ ವೇಳೆ ಅವಿನಾಶ್ ಶುಕ್ಲಾ ಕಳವು ಮಾಡಿದ್ದ 2.25 ಲಕ್ಷ ರೂಪಾಯಿಯನ್ನು ಬಾತ್‌ರೂಮ್‌ನಲ್ಲಿ ಅಡಗಿಸಿದ್ದ. ಶೋಧದ ವೇಳೆ ಈ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.

ಜೂನ್ 4ರ ರಾತ್ರಿ ದೆಹಲಿಯಿಂದ ರೈಲಿನಲ್ಲಿ ಅಯೋಧ್ಯೆಗೆ ಬರುತ್ತಿದ್ದ ಚಂಪತ್ ರಾಯ್ ಅವರಿಗೆ ಕಳ್ಳತನದ ಮಾಹಿತಿ ನೀಡಲಾಗಿತ್ತು. ಕಳ್ಳತನಕ್ಕೆ ಸಂಬಂಧಿಸಿದ ವಿಡಿಯೋಗಳನ್ನೂ ಅವರಿಗೆ ಕಳುಹಿಸಲಾಗಿತ್ತು. ಜೂನ್ 5ರಂದು ಅಯೋಧ್ಯೆಗೆ ತಲುಪಿದ ಬಳಿಕ ಚಂಪತ್ ರಾಯ್ ಅವರು ಕಾರ್ ಸೇವಕ್‌ಪುರಂನಲ್ಲಿರುವ ನಿವಾಸದಲ್ಲಿ ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಅವರೊಂದಿಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಲ್ಯಾಪ್‌ಟಾಪ್‌ನಲ್ಲಿ ಕಾಣಿಕೆ ಹಣ ಕಳವಿಗೆ ಸಂಬಂಧಿಸಿದ ಹಲವು ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಲಾಗಿತ್ತು. ಚಂಪತ್ ರಾಯ್ ಅವರು ಈ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ್ದರು ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ.

ಕೇಸ್​​ ದಾಖಲಿಸಿದ ಕೃಷ್ಣ ಮೋಹನ್ ಅವರನ್ನು ಪೊಲೀಸರು ತಮ್ಮ ಮೊದಲ ಸಾಕ್ಷಿಯನ್ನಾಗಿ ಮಾಡಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಒಟ್ಟು 133 ಸಾಕ್ಷಿಗಳ ಉಲ್ಲೇಖವಿದೆ. ಚಂಪತ್ ರಾಯ್, ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಅವರ ಜೊತೆಗೆ ಕೊತ್ವಾಲಿ ಠಾಣೆಯ ಇನ್‌ಸ್ಪೆಕ್ಟರ್, ರಾಮ ಜನ್ಮಭೂಮಿ ಠಾಣೆಯ ಇನ್‌ಸ್ಪೆಕ್ಟರ್, ಅಯೋಧ್ಯೆಯ ಸಿಒ ಸೇರಿದಂತೆ ಒಟ್ಟು 27 ಪೊಲೀಸ್ ಸಿಬ್ಬಂದಿಯನ್ನೂ ಸಾಕ್ಷಿಗಳನ್ನಾಗಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!