LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಸಾಧ್ಯವಾದ ಕ್ಯಾಚ್ ಅನ್ನು ಸುಲಭಗೊಳಿಸಿದ ಮಾರ್ಕೊ ಜಾನ್ಸನ್: ಅಚ್ಚರಿಗೊಂಡ ಕ್ರಿಕೆಟ್ ಜಗತ್ತು!

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಡರ್ಬನ್‌ನಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ದೈತ್ಯ ಆಲ್‌ರೌಂಡರ್ ಮಾರ್ಕೊ ಜಾನ್ಸನ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಜಗತ್ತಿನ ಗಮನಸೆಳೆದಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಅದ್ಭುತ ಫೀಲ್ಡಿಂಗ್ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದ ಜಾನ್ಸನ್, ಆಸ್ಟ್ರೇಲಿಯಾದ ಬ್ಯಾಟರ್ ಮ್ಯಾಟ್ ರೆನ್‌ಶಾ ಅವರನ್ನು ಔಟ್ ಮಾಡಲು ಹಿಡಿದ ಸಾರ್ವಕಾಲಿಕ ಶ್ರೇಷ್ಠ ಕ್ಯಾಚ್‌ಗಳಲ್ಲಿ ಒಂದಾದ ನಂಬಲಾಗದ ಕ್ಯಾಚ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಆಸ್ಟ್ರೇಲಿಯಾ ಇನ್ನಿಂಗ್ಸ್ ವೇಳೆ ಗೆರಾಲ್ಡ್ ಕೊಯೆಟ್ಜಿ ಎಸೆದ ಶಾರ್ಟ್ ಪಿಚ್ ಎಸೆತವನ್ನು ಮ್ಯಾಟ್ ರೆನ್‌ಶಾ ಪುಲ್ ಶೂಟ್ ಮಾಡಲು ಯತ್ನಿಸಿದರು. ಆದರೆ ಬ್ಯಾಟ್‌ನ ಮೇಲ್ಭಾಗಕ್ಕೆ ಸರಿಯಾಗಿ ತಾಗದ ಚೆಂಡು ಗಂಟೆಗೆ ಭಾರಿ ವೇಗದಲ್ಲಿ ಡೀಪ್ ಮಿಡ್‌ವಿಕೆಟ್ ದಿಕ್ಕಿನಲ್ಲಿ ಗಾಳಿಯಲ್ಲಿ ತೇಲಿಹೋಯಿತು. ಆ ಜಾಗದಿಂದ ಸಾಕಷ್ಟು ದೂರದಲ್ಲಿದ್ದ ಮಾರ್ಕೊ ಜಾನ್ಸನ್, ಚೆಂಡಿನತ್ತ ಅತ್ಯಂತ ವೇಗವಾಗಿ ಧಾವಿಸಿದರು. ಮೊದಲ ನೋಟಕ್ಕೆ ಚೆಂಡು ಜಾನ್ಸನ್‌ರ ಕೈಗೆಟುಕದೆ ಬೌಂಡರಿ ಗೆರೆ ದಾಟಬಹುದು ಅಥವಾ ನೆಲಕ್ಕೆ ಬೀಳಬಹುದು ಎಂದೇ ಭಾವಿಸಲಾಗಿತ್ತು. ಆದರೆ ತಮ್ಮ ಬೃಹತ್ ದೇಹದ ಸಂಪೂರ್ಣ ಲಾಭ ಪಡೆದ ಅವರು, ಬಲಬದಿಗೆ ತೀವ್ರವಾಗಿ ಜಿಗಿದು, ಮೈದಾನದಲ್ಲಿ ಜಾರುತ್ತಾ ಒಂದೇ ಕೈಯಲ್ಲಿ ಚೆಂಡನ್ನು ಅದ್ಭುತವಾಗಿ ಡೈವ್ ಮಾಡಿ ಹಿಡಿದರು.

ಕ್ಯಾಚ್ ಹಿಡಿದ ತಕ್ಷಣವೇ ಚೆಂಡು ಯಾವುದೇ ಕಾರಣಕ್ಕೂ ನೆಲಕ್ಕೆ ತಾಗದಂತೆ ತಮ್ಮ ಮಣಿಕಟ್ಟನ್ನು ಜಾಗರೂಕತೆಯಿಂದ ತಿರುಗಿಸಿ, ಶುದ್ಧವಾಗಿ ಕ್ಯಾಚ್ ಪೂರ್ಣಗೊಳಿಸಿದರು. ಈ ಕಲ್ಪನಾಶೀತ ಫೀಲ್ಡಿಂಗ್ ಸಾಹಸವನ್ನು ಕಂಡ ಸಹ ಆಟಗಾರರು ಹಾಗೂ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಒಂದು ಕ್ಷಣ ಸ್ತಬ್ಧರಾಗಿ, ನಂತರ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಈ ವಿಡಿಯೋ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದೆ.

ಈ ಪಂದ್ಯದಲ್ಲಿ ಜಾನ್ಸನ್ ಕೇವಲ ಫೀಲ್ಡಿಂಗ್‌ನಲ್ಲಿ ಮಾತ್ರವಲ್ಲದೆ, ಬ್ಯಾಟಿಂಗ್‌ನಲ್ಲೂ ತಂಡದ ಸಂಕಷ್ಟಕ್ಕೆ ಆಸರೆಯಾದರು. ಆರಂಭದಲ್ಲೇ 168 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾಗೆ ಚೇತರಿಕೆ ನೀಡಿದ ಇವರು, ಕೇವಲ ಕೆಲವೇ ಎಸೆತಗಳಲ್ಲಿ 75 ರನ್‌ಗಳ ಸ್ಪೋಟಕ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 297 ರನ್‌ಗಳ ಬೃಹತ್ ಮಟ್ಟಕ್ಕೆ ತಲುಪಿಸಿದರು. ಬೌಲಿಂಗ್‌ನಲ್ಲೂ ಅಪಾಯಕಾರಿ ಬ್ಯಾಟರ್ ಟ್ರಾವಿಸ್ ಹೆಡ್ ವಿಕೆಟ್ ಪಡೆದ ಜಾನ್ಸನ್, ಇಡೀ ಪಂದ್ಯದಲ್ಲಿ ಒಟ್ಟು 4 ಅದ್ಭುತ ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ದಕ್ಷಿಣ ಆಫ್ರಿಕಾದ ಗೆಲುವಿನ ರೂವಾರಿಯಾದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!