ಹಾವೇರಿ : ಆಸ್ತಿ ವಿಚಾರವಾಗಿ ಕಲ್ಲಿನಿಂದ ಜಜ್ಜಿ ತಾಯಿ ಮತ್ತು ಮಗನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಸನೂರಿನಲ್ಲಿ ಈ ಒಂದು ಕೊಲೆ ನಡೆದಿದೆ ಪ್ರೇಮಕ್ಕ ಬಡಿಗೇರ್ (55) ಹಾಗೂ ಅವಿನಾಶ ಬಡಿಗೇರ (38) ಕೊಲೆಯಾಗಿದ್ದಾರೆ. ತಿರಕಯ್ಯ ಹೊಸಮಠ ಮತ್ತು ಬಸವರಾಜ ಹೊಸಮಠ ಎಂಬವರು ಕೊಲೆ ಮಾಡಿದ್ದಾರೆ.
ಮಾರಕಾಸ್ತ್ರಗಳಿಂದ ಹೊಡೆದು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಕೆಲವು ವರ್ಷಗಳಿಂದ ಹಿಂದೆ ಮನೆ ಮತ್ತು ಜಾಗ ಖರೀದಿ ಮಾಡಿದ್ದರು. ಆದರೆ ಆಸ್ತಿ ಖರೀದಿಸಿ ಅವರ ಹೆಸರಿಗೆ ವರ್ಗಾವಣೆ ಮಾಡಿರಲಿಲ್ಲ. ಕೋರ್ಟ್ ಮೂಲಕ ಮನೆಯನ್ನು ಪ್ರೇಮಕ್ಕ ಬಡಿಗೇರ್ ವಶಕ್ಕೆ ಪಡೆದಿದ್ದರು. ಇದರಿಂದ ರೊಚ್ಚಿಗೆದ್ದು ತಾಯಿ ಮಗನನ್ನು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಸದ್ಯ ಘಟನಾ ಸ್ಥಳಕ್ಕೆ ಆಡೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.