LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕದಲ್ಲಿ ತಾಯಂದಿರ ಮರಣ ಶೂನ್ಯಕ್ಕೆ ತರಲು ಸರ್ಕಾರ ಮಹತ್ವದ ಹೆಜ್ಜೆ

ಬೆಂಗಳೂರು: ರಾಜ್ಯದಲ್ಲಿ ತಡೆಗಟ್ಟಬಹುದಾದ ಪ್ರತಿಯೊಂದು ತಾಯಿಯ ಮರಣವನ್ನು ಸಂಪೂರ್ಣವಾಗಿ ತಡೆದು ಶೂನ್ಯಕ್ಕೆ ತರುವ ಮಹತ್ವಾಕಾಂಕ್ಷೆಯೊಂದಿಗೆ ಕರ್ನಾಟಕ ಸರ್ಕಾರ ಬಲವಾದ ಹೆಜ್ಜೆ ಇಟ್ಟಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ “ಸುರಕ್ಷಿತ ಮಾತೃತ್ವ ಆಶ್ವಾಸನ (SUMAN Roadmap 2030)” ಕುರಿತ ರಾಜ್ಯಮಟ್ಟದ ವಿಶೇಷ ಕಾರ್ಯಾಗಾರವು ಶುಕ್ರವಾರ ಬೆಂಗಳೂರಿನಲ್ಲಿ ಜರುಗಿತು.

"ಫ್ರಂ ರೋಡ್‌ಮ್ಯಾಪ್ ಟು ರಿಸಲ್ಟ್ಸ್: ಆಕ್ಸಿಲರೇಟಿಂಗ್ ಕರ್ನಾಟಕಾಸ್ ಜರ್ನಿ ಟುವರ್ಡ್ಸ್ ಜೀರೋ ಪ್ರಿವೆಂಟೇಬಲ್ ಮೆಟರ್ನಲ್ ಡೆತ್ಸ್" ಎಂಬ ಧ್ಯೇಯವಾಕ್ಯದಡಿ ಆಯೋಜಿಸಲಾಗಿದ್ದ ಈ ಸಮಾವೇಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಅವರು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಯಂದಿರ ಆರೋಗ್ಯ ಸಂರಕ್ಷಣೆಗೆ ಸಂಬಂಧಿಸಿದ ಮಹತ್ವದ ಪೋಸ್ಟರ್‌ಗಳು ಮತ್ತು ಮಾಹಿತಿ ಕಿರುಪುಸ್ತಕವನ್ನು ಅನಾವರಣಗೊಳಿಸಲಾಯಿತು.

ಎಂಎಂಆರ್ (MMR) ದರ 70ಕ್ಕಿಂತ ಕೆಳಕ್ಕೆ ಇಳಿಸುವ ಗುರಿ

2022-24ರ ಮಾದರಿ ನೋಂದಣಿ ವ್ಯವಸ್ಥೆಯ (SRS) ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ಪ್ರಸ್ತುತ ತಾಯಂದಿರ ಮರಣ ಪ್ರಮಾಣ (MMR) ಪ್ರತಿ 1 ಲಕ್ಷ ಜೀವಂತ ಜನನಗಳಿಗೆ 73 ರಷ್ಟಿದೆ. ಈ ದರವನ್ನು ತಕ್ಷಣವೇ 70ಕ್ಕಿಂತ ಕಡಿಮೆಗೊಳಿಸುವುದು ಮತ್ತು ಮುಂದಿನ ದಿನಗಳಲ್ಲಿ ತಡೆಗಟ್ಟಬಹುದಾದ ತಾಯಂದಿರ ಮರಣವನ್ನು ಶೂನ್ಯಕ್ಕೆ ತರುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.

ಗರ್ಭಧಾರಣೆಯಿಂದ ಪ್ರಸವೋತ್ತರದವರೆಗೆ ಸಮಗ್ರ ನಿಗಾ

ಕೇವಲ ಹೆರಿಗೆಯ ಸಮಯದಲ್ಲಷ್ಟೇ ಅಲ್ಲದೆ, ಗರ್ಭಧಾರಣೆಗೆ ಮುನ್ನವೇ ಮಹಿಳೆಯರ ರಕ್ತಹೀನತೆ, ಪೌಷ್ಟಿಕಾಂಶದ ಕೊರತೆ ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಿ ಪರಿಹರಿಸುವ ‘ಜೀವನಚಕ್ರ ಆಧಾರಿತ’ ಆರೈಕೆ ಜಾರಿಗೆ ತರಲಾಗುತ್ತಿದೆ. ಜೊತೆಗೆ, ಹೆಚ್ಚಿನ ಅಪಾಯವಿರುವ ಗರ್ಭಧಾರಣೆಯನ್ನು (High-Risk Pregnancy) ಆರಂಭದಲ್ಲೇ ಗುರುತಿಸಿ, ತುರ್ತು ಚಿಕಿತ್ಸೆ ಮತ್ತು ನಿರಂತರ ನಿಗಾ ವಹಿಸಲು ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಹೆರಿಗೆ ಸಮಯದಲ್ಲಿ ಪ್ರಾಣಾಪಾಯ ತರಬಲ್ಲ ಅಧಿಕ ರಕ್ತಸ್ರಾವ (PPH) ಹಾಗೂ ಇತರ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಆಸ್ಪತ್ರೆಗಳಲ್ಲಿ ಅಗತ್ಯ ರಕ್ತದ ಲಭ್ಯತೆ, ಔಷಧಿ ಹಾಗೂ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.

'ಜೀರೋ ಮೆಟರ್ನಲ್ ಡೆತ್ ಗ್ರಾಮ ಪಂಚಾಯತ್' ಅಭಿಯಾನ

ತಾಯಂದಿರ ಮರಣ ತಡೆಯುವುದು ಕೇವಲ ಆರೋಗ್ಯ ಇಲಾಖೆಯ ಕೆಲಸವಲ್ಲ, ಅದರಲ್ಲಿ ಸಮಾಜದ ಪಾತ್ರವೂ ಮುಖ್ಯ ಎಂದು ಸರ್ಕಾರ ತಿಳಿಸಿದೆ. ಈ ನಿಟ್ಟಿನಲ್ಲಿ ‘Zero Maternal Death Gram Panchayat Campaign’ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗರ್ಭಿಣಿಯರನ್ನು ಗುರುತಿಸುವುದು, ತಪಾಸಣೆ, ತುರ್ತು ವಾಹನ ಸೌಲಭ್ಯ ಹಾಗೂ ಹೆರಿಗೆ ನಂತರದ ಆರೈಕೆಗೆ ನೆರವಾಗುವ ವಾತಾವರಣ ನಿರ್ಮಿಸಲಾಗುವುದು.

ಕರ್ನಾಟಕದ ಏಳು ಪ್ರಮುಖ ಕಾರ್ಯತಂತ್ರಗಳು

  1. ಗರ್ಭಧಾರಣೆಗೆ ಮುನ್ನ ಆರೈಕೆ: ಆರಂಭದಲ್ಲೇ ಅಪಾಯಕಾರಿ ಅಂಶಗಳನ್ನು ಗುರುತಿಸಿ ಚಿಕಿತ್ಸೆ ನೀಡುವುದು.

  2. ಗುಣಮಟ್ಟದ ಎಎನ್‌ಸಿ (ANC) ಮತ್ತು ಹೆಚ್‌ಆರ್‌ಪಿ ಟ್ರ್ಯಾಕಿಂಗ್: ಅಪಾಯವಿರುವ ಗರ್ಭಿಣಿಯರ ಮೇಲೆ ನಿರಂತರ ನಿಗಾ.

  3. ಗುಣಮಟ್ಟದ ಹೆರಿಗೆ ಸೇವೆ: ಸೂಕ್ತ ಸಮಯದಲ್ಲಿ ಅರ್ಹ ತಜ್ಞರಿಂದ ಸುರಕ್ಷಿತ ಹೆರಿಗೆ.

  4. ಪಿಪಿಹೆಚ್ (PPH) ತುರ್ತು ಸನ್ನದ್ಧತೆ: ಪ್ರಸವೋತ್ತರ ಅಧಿಕ ರಕ್ತಸ್ರಾವ ತಡೆಗೆ ಆಸ್ಪತ್ರೆಗಳನ್ನು ಸಜ್ಜುಗೊಳಿಸುವುದು.

  5. ಪರಿಷ್ಕೃತ ಎಂಡಿಎಸ್‌ಆರ್ (MDSR): ತಾಯಿಯ ಮರಣದ ವರದಿ ಕೇವಲ ದಾಖಲೆಗೆ ಸೀಮಿತವಾಗದೆ, ವ್ಯವಸ್ಥೆಯ ಶಾಶ್ವತ ಸುಧಾರಣೆಗೆ ಬಳಕೆಯಾಗಬೇಕು.

  6. ಪಂಚಾಯಿತಿಗಳ ಸಹಭಾಗಿತ್ವ: ಸ್ಥಳೀಯ ಮಟ್ಟದಲ್ಲಿ ಸಮುದಾಯವನ್ನು ಜವಾಬ್ದಾರಿಯುತವಾಗಿಸುವುದು.

  7. ಡಿಜಿಟಲ್ ಕಣ್ಗಾವಲು: ದತ್ತಾಂಶವನ್ನು ಆಧರಿಸಿ ತಕ್ಷಣದ ತೀರ್ಮಾನ ಕೈಗೊಳ್ಳುವುದು.

ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕೊರತೆಗಳನ್ನು ಗುರುತಿಸಿ ಸ್ಥಳೀಯ ಮಟ್ಟದಲ್ಲೇ ತುರ್ತು ಕಾರ್ಯತಂತ್ರ ರೂಪಿಸುವಂತೆ ನಿರ್ದೇಶನ ನೀಡಲಾಗಿದೆ. "ಪ್ರತಿಯೊಬ್ಬ ತಾಯಿಯ ಜೀವವೂ ಅಮೂಲ್ಯವಾಗಿದ್ದು, ತಡೆಗಟ್ಟಬಹುದಾದ ಯಾವುದೇ ಮರಣವೂ ಸಂಭವಿಸದಂತೆ ತಡೆಯಲು ಸರ್ಕಾರ ಬದ್ಧವಾಗಿದೆ" ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?