LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ :  ‘ಸರ್ಕಾರಿ ನೌಕರರ ಸೇವಾ ಪ್ರಶಸ್ತಿ’ಗೆ ಅರ್ಜಿ ಆಹ್ವಾನ

ಬೆಂಗಳೂರು: ಉತ್ತಮ ಸಾರ್ವಜನಿಕ ಸೇವೆ ಸಲ್ಲಿಸಿದ ರಾಜ್ಯ ಸರ್ಕಾರದ ಅಧಿಕಾರಿ ಹಾಗೂ ನೌಕರರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ‘ಸರ್ಕಾರಿ ನೌಕರರ ಸೇವಾ ಪ್ರಶಸ್ತಿ’ಗೆ ಅರ್ಹರಿಂದ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ.  

ದಕ್ಷತೆ, ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ಜನಾನುರಾಗಿ ಹಾಗೂ ಮಾದರಿ ಸೇವೆಯನ್ನು ಸಲ್ಲಿಸಿರುವ ನೌಕರರ ಕೊಡುಗೆಯನ್ನು ಪುರಸ್ಕರಿಸಲು ಮತ್ತು ಇತರ ನೌಕರರಲ್ಲಿ ಸೇವಾ ಮನೋಭಾವನೆಯನ್ನು ಉತ್ತೇಜಿಸಲು ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಸಂಘ ತೀರ್ಮಾನಿಸಿದೆ.  

ಒಟ್ಟು 271 ಪ್ರಶಸ್ತಿಗಳು, ತಲಾ ₹20,000 ನಗದು ಪುರಸ್ಕಾರ:

ರಾಜ್ಯಾದ್ಯಂತ ಒಟ್ಟು 271 ಅರ್ಹ ಅಧಿಕಾರಿ-ನೌಕರರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಒಟ್ಟು ₹54.20 ಲಕ್ಷ ಮೊತ್ತದ ಪುರಸ್ಕಾರ ನಿಗದಿಪಡಿಸಲಾಗಿದೆ.  

 

ಬೆಂಗಳೂರು ನಗರ: 10 ಪ್ರಶಸ್ತಿಗಳು  

 

ಜಿಲ್ಲಾ ಕೇಂದ್ರದ ತಾಲೂಕುಗಳು (31 × 2): 62 ಪ್ರಶಸ್ತಿಗಳು  

 

ಉಳಿದ ತಾಲೂಕುಗಳು (199 × 1): 199 ಪ್ರಶಸ್ತಿಗಳು  

 

ಪ್ರಶಸ್ತಿಗೆ ಆಯ್ಕೆಯಾಗುವ ಪ್ರತಿಯೊಬ್ಬರಿಗೂ ₹20,000 ನಗದು, ಸ್ಮರಣಿಕೆ, ಶಾಲು ಹಾಗೂ ಹಾರ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರು ಅಥವಾ ರಾಜ್ಯದ ಯಾವುದಾದರೂ ಜಿಲ್ಲಾ ಕೇಂದ್ರದಲ್ಲಿ ಮುಖ್ಯಮಂತ್ರಿಗಳು, ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಆಯೋಜಿಸಲಾಗುವುದು.  

ಅರ್ಹತೆಗಳು ಮತ್ತು ಮುಖ್ಯ ಷರತ್ತುಗಳು:

ರಾಜ್ಯ ಸರ್ಕಾರದ ಗ್ರೂಪ್ ‘ಎ’, ‘ಬಿ’, ‘ಸಿ’ ಮತ್ತು ‘ಡಿ’ ವೃಂದದ ಖಾಯಂ ನೌಕರರಾಗಿರಬೇಕು.  

 

ಸಂಘಕ್ಕೆ ಪ್ರತಿ ವರ್ಷ ₹200 ವಾರ್ಷಿಕ ಸದಸ್ಯತ್ವ ಶುಲ್ಕ ಪಾವತಿಸಿರಬೇಕು ಹಾಗೂ ಸರ್ಕಾರಿ ಸೇವೆಯಲ್ಲಿ ಕನಿಷ್ಠ 5 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು.  

 

ಸ್ವತಃ ಅರ್ಜಿ ಸಲ್ಲಿಸಲು ಅವಕಾಶವಿಲ್ಲ: ಯಾವುದೇ ನೌಕರರು ಸ್ವತಃ ಅರ್ಜಿ ಸಲ್ಲಿಸುವಂತಿಲ್ಲ. ಬದಲಾಗಿ ಇಲಾಖಾ ಮುಖ್ಯಸ್ಥರು, ಮೇಲಾಧಿಕಾರಿಗಳು, ಸಹೋದ್ಯೋಗಿಗಳು, ಸಾರ್ವಜನಿಕರು ಅಥವಾ ನೌಕರರ ಸಂಘದ ಜಿಲ್ಲಾ/ತಾಲೂಕು ಶಾಖೆಯ ಪದಾಧಿಕಾರಿಗಳು ಅರ್ಹರ ಹೆಸರನ್ನು ಶಿಫಾರಸು/ನಾಮನಿರ್ದೇಶನ ಮಾಡಬೇಕು.  

 

ಯಾವುದೇ ರೀತಿಯ ವೈಯಕ್ತಿಕ ಅಥವಾ ಬಾಹ್ಯ ಪ್ರಭಾವ/ಒತ್ತಡ/ಶಿಫಾರಸುಗಳಿಗೆ ಅವಕಾಶವಿರುವುದಿಲ್ಲ.  

 

ಅರ್ಜಿ ಸಲ್ಲಿಕೆ ಹೇಗೆ?

ಪ್ರಸ್ತಾವನೆಗಳನ್ನು ಕಡ್ಡಾಯವಾಗಿ ಆನ್‌ಲೈನ್ ಲಿಂಕ್ ಮೂಲಕವೇ ಸಲ್ಲಿಸಬೇಕು. ಅಪೂರ್ಣ ಮಾಹಿತಿ ಅಥವಾ ನೇರವಾಗಿ ಸಲ್ಲಿಸುವ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವುದಿಲ್ಲ.  

 

ವೆಬ್‌ಸೈಟ್ ಲಿಂಕ್: POWERMEDIA.INFO  

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-10-2026  

 

ಅರ್ಹ ಹಾಗೂ ದಕ್ಷ ನೌಕರರ ಹೆಸರುಗಳನ್ನು ನಿಗದಿತ ದಿನಾಂಕದೊಳಗೆ ಶಿಫಾರಸು ಮಾಡುವಂತೆ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ತಿಳಿಸಿದ್ದಾರೆ.

news_1790303365_0_344.webp

 

news_1790303366_3_442.webp

 

news_1790303366_2_344.webp

 

news_1790303365_1_332.webp

 

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!