LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಟೀಮ್ ಇಂಡಿಯಾ ಪ್ಲೇಯರ್ಸ್ ಕೈಯಲ್ಲಿ ಜಪಾನೀಸ್ ಸ್ಪೆಷಲ್ ಕೊಡೆ: ಜಪಾನ್‌ನ ಟ್ರಾನ್ಸ್‌ಪರೆಂಟ್ ಅಂಬ್ರೆಲಾ ವಿಶೇಷತೆ ಏನು ಗೊತ್ತಾ?

ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಭಾರತೀಯ ಪುರುಷರ ಕ್ರಿಕೆಟ್ ತಂಡದ ಆಟಗಾರರು, ಮೈದಾನದ ಹೊರಗೆ ಜಪಾನ್‌ನ ಸೌಂದರ್ಯವನ್ನು ಆನಂದಿಸಿದ್ದಾರೆ. ಜಪಾನ್ ವಿರುದ್ಧದ ಪಂದ್ಯದ ಬಳಿಕ ಸಿಕ್ಕ ಬಿಡುವಿನ ವೇಳೆಯಲ್ಲಿ ಟೀಮ್ ಇಂಡಿಯಾ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಅಭಿಷೇಕ್ ಶರ್ಮ ಸೇರಿದಂತೆ ಹಲವು ಕ್ರಿಕೆಟಿಗರು ಜಪಾನ್‌ನ ನಗರ ಬೀದಿಗಳಲ್ಲಿ ವಕಿಂಗ್ ನಡೆಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಆದರೆ ಈ ಫೋಟೋಗಳಲ್ಲಿ ಅಭಿಮಾನಿಗಳ ಗಮನ ಸೆಳೆದದ್ದು ಕ್ರಿಕೆಟಿಗರ ಕೈಯಲ್ಲಿದ್ದ ಪಾರದರ್ಶಕ ಛತ್ರಿಗಳು (Transparent Umbrellas). ಜಪಾನ್ ಸಂಸ್ಕೃತಿ ಮತ್ತು ದೈನಂದಿನ ಜೀವನದಲ್ಲಿ ಈ ಪ್ರಕೃತಿ ರಕ್ಷಕ ಪ್ಲಾಸ್ಟಿಕ್ ಛತ್ರಿಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಕಡಿಮೆ ಬೆಲೆಗೆ ಪ್ರತಿಯೊಂದು ಅಂಗಡಿಗಳಲ್ಲೂ ಸುಲಭವಾಗಿ ಸಿಗುವ ಈ ಪಾರದರ್ಶಕ ಛತ್ರಿಗಳು, ಹಠಾತ್ ಮಳೆ ಬಂದಾಗ ಜಪಾನೀಯರ ಮೊದಲ ಆಯ್ಕೆಯಾಗಿರುತ್ತವೆ.

ಈ ಛತ್ರಿಗಳು ಕೇವಲ ಸೌಂದರ್ಯಕ್ಕಷ್ಟೇ ಅಲ್ಲದೆ ಪ್ರಾಯೋಗಿಕವಾಗಿಯೂ ಅತ್ಯಂತ ಉಪಯುಕ್ತವಾಗಿವೆ. ಜನದಟ್ಟಣೆಯ ನಗರಗಳು ಮತ್ತು ಕಿರಿದಾದ ಕಾಲುದಾರಿಗಳಲ್ಲಿ ನಡೆಯುವಾಗ ಪಾರದರ್ಶಕ ಕೊಡೆಗಳ ಮೂಲಕ ಎದುರಿಗೆ ಬರುವ ವ್ಯಕ್ತಿಗಳು ಅಥವಾ ವಸ್ತುಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಇದರಿಂದ ರಸ್ತೆಯಲ್ಲಿ ಯಾರೊಂದಿಗೂ ಡಿಕ್ಕಿಯಾಗದೆ ಸಾಗಲು ಸಾಧ್ಯವಾಗುತ್ತದೆ. 1964ರ ಟೋಕಿಯೋ ಒಲಿಂಪಿಕ್ಸ್ ಸಮಯದಿಂದ ಜಪಾನ್‌ನಲ್ಲಿ ಪ್ರಸಿದ್ಧಿಗೆ ಬಂದ ಈ ಆಧುನಿಕ ಪ್ಲಾಸ್ಟಿಕ್ ಛತ್ರಿಗಳು, ಅಲ್ಲಿನ ಸಾಂಪ್ರದಾಯಿಕ ‘ವಾಗಾಸ’ ವರ್ಣರಂಜಿತ ಕೈಯಿಂದ ಮಾಡಿದ ಕೊಡೆಗಳಿಗಿಂತ ಭಿನ್ನವಾಗಿವೆ.

ಭಾರತೀಯ ಕ್ರಿಕೆಟಿಗರು ಸ್ಥಳೀಯ ಜಪಾನೀಸ್ ಶೈಲಿಯ ಪಾರದರ್ಶಕ ಛತ್ರಿ ಹಿಡಿದು ಕಂಗೊಳಿಸುತ್ತಿರುವ ಶೈಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?