ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯನ್ನು ರದ್ದುಗೊಳಿಸಬೇಕು ಎಂದು ನಟ ದರ್ಶನ್ ಅರ್ಜಿ ಸಲ್ಲಿಸಿದ್ದು ಇಂದು ಹೈಕೋರ್ಟ್ ನಲ್ಲಿ ಈ ಒಂದು ಅರ್ಜಿಯ ವಿಚಾರಣೆ ನಡೆಯಿತು. ದರ್ಶನ್ ಪರ ಹಿರಿಯ ವಕೀಲ ಹಶ್ಮದ್ ಪಾಷಾ ಹೈಕೋರ್ಟ್ ನಲ್ಲಿ ವಾದ ಮಂಡಿಸಿದರು.
ವಿಚಾರಣೆ ವೇಳೆ 27 ಜುಲೈ 2026 ರಿಂದಲು ಮೊಬೈಲ್ ಬಳಸುತ್ತಿದ್ದಾನೆ. ಬಿಡುಗಡೆಯಾದ ವಿಚಾರಣಾ ಬಂದಿ ಹೆಸರಿನಲ್ಲಿ ಇದ್ದಂತಹ ಫೋನ್ ಬಳಸಿದ್ದಾನೆ ಮಾಫಿ ಸಾಕ್ಷಿ ಅರ್ಜಿ ಸಲ್ಲಿಸಿದ ದಿನಕ್ಕೂ ಮೊದಲು ಆತ ಮೊಬೈಲ್ ಬಳಸಿದ ಪತ್ನಿಯೊಂದಿಗೆ ಪ್ರದೋಷ್ ಮಾತನಾಡಿದ್ದಾನೆ. ಪತ್ನಿ ಅವರೊಂದಿಗೆ ಮಾತನಾಡಿರುವ ಬಗ್ಗೆ ಮಾಹಿತಿ ಇದೆ ಆ ಬಳಿಕವೇ ಆತನ ಮನಸ್ಥಿತಿ ಬದಲಾಗಿ ಮಾಫಿಸಾಕ್ಷಿಗೆ ಅರ್ಜಿ ಸಲ್ಲಿಸಿದ್ದಾನೆ ಎಂದು ವಾದ ಮಂಡಿಸಿದರು.
ಈ ವೇಳೆ ನೀವು ಇದೆಲ್ಲ ಕ್ರಾಸ್ ಎಕ್ಸಾಮಿನೇಷನ್ ನಲ್ಲಿ ಪ್ರಶ್ನಿಸಬಹುದಲ್ಲವೇ ಎಂದು ಜಡ್ಜ್ ಪ್ರಶ್ನಿಸಿದರು. ಎಲ್ಲ ಬಂದಿತರಿಗೆ ಮಾತನಾಡಲು ಅವಕಾಶವಿರುತ್ತದೆ ವಕೀಲರ ನಂಬರ್ ಎಂದು ಪತ್ನಿಯೊಂದಿಗೆ ಮಾತನಾಡಿದ್ದಾನೆ ಅಷ್ಟೇ ಮೇಲ್ನೋಟಕ್ಕೆ ನನಗೆ ಹೀಗೆ ಅನಿಸುತ್ತಿದೆ ಎಂದು ನ್ಯಾಯಮೂರ್ತಿ ಶ್ರೀಶಾನಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಜಾಬಂಧಿ ಅವಕಾಶವನ್ನು ಪ್ರದೋಷ್ ಬಳಸಿಕೊಂಡಿದ್ದಾನೆ. ಅವನು ಸಿಬ್ಬಂದಿಯ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ ಎಂದು ವರದಿ ಇಲ್ಲ. ಸಂತೋಷ್ ಜೊತೆ ಮಾತನಾಡುತ್ತೇನೆಂದು ಪತ್ನಿ ಜೊತೆ ಮಾತನಾಡಿದ್ದಾನೆ ಅಷ್ಟೇ. ನಿಮ್ಮ ಬೇರೆ ವಾದವಿದ್ದರೆ ಹೇಳಿ ಎಂದು ನ್ಯಾಯಮೂರ್ತಿ ಶ್ರೀಶಾನಂದ ತಿಳಿಸಿದರು.
ಬಳಿಕ ಸುಪ್ರೀಂಕೋರ್ಟ್ ನ ತೀರ್ಪುಗಳನ್ನು ಉಲ್ಲೇಖಿಸಿ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿದರು. ಎರಡು ಹಂತಗಳಲ್ಲಿ ಮಾಫಿಸಾಕ್ಷಿ ಪರಿಗಣಿಸಬಹುದು ಎಂದು ಇದೇ ಸಂದರ್ಭದಲ್ಲಿ ಜಡ್ಜ್ ತಿಳಿಸಿದರು. ತನಿಖೆ ವೇಳೆ ಸಹಕರಿಸಿದರೆ ಪ್ರಾಸಿಕ್ಯೂಷನ್ ಮಾಫೀಸಾಕ್ಷಿ ಪರಿಗಣಿಸಬಹುದು. ಹಾಗು ಟ್ರಯಲ್ ಹಂತದಲ್ಲಿಯೂ ಕೂಡ ಆರೋಪಿ ಮಾಫೀಸಾಕ್ಷಿ ಅರ್ಜಿ ಸಲ್ಲಿಸಬಹುದು ಎಂದು ಜಡ್ಜ್ ಶ್ರೀಶಾನಂದ್ ತಿಳಿಸಿದರು.
ಈ ವೇಳೆ ದರ್ಶನ್ ಪರ ವಕೀಲ ಹಶ್ಮತ್ ಪಾಷ ಅಪ್ರುವರ್ ಇಲ್ಲದೆ ಶಿಕ್ಷೆಗಳ ಪಡಿಸಲಾಗದೆಂದು ಪ್ರಾಜಿಕ್ಯೂಷನ್ ಹೇಳಬೇಕು ಈ ಬಗ್ಗೆ ಸಮಾಧಾನವಾದರೆ ಮಾತ್ರ ಮಾಫಿಸಾಕ್ಷಿ ಪರಿಗಣಿಸಬೇಕು ಎಂದು ವಾದ ಮಂಡಿಸಿದರು . ನಿಮ್ಮ ಕಕ್ಷಿದಾರರು ನಿಮ್ಮ ಸುರಕ್ಷಿತ ಕೈಗಳಲ್ಲಿದ್ದಾರೆ. ನೀವು ಕ್ರಾಸ್ ಎಕ್ಸಾಮಿನೇಷನ್ ವೇಳೆ ಎಲ್ಲವನ್ನು ಪ್ರಶ್ನಿಸಬಹುದು. ಪ್ರದೋಷ್ ಹೇಳಿಕೆಯ ಪ್ರತಿಯೊಂದು ಅಂಶವನ್ನು ಪ್ರಶ್ನಿಸಬಹುದು. ಅದು ಮಾಫಿ ಸಾಕ್ಷಿಯನ್ನು ವಿಶ್ವಾಸಾರ್ಹ ಅಲ್ಲ ಎಂಬುದನ್ನು ನೀವು ವಾದಿಸಬಹುದು ಎಂದು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
ದರ್ಶನ್ ಪರ ಹಿರಿಯ ವಕೀಲ ಹಶ್ಮದ್ ಪಾಷಾ ವಾದ ಮುಂದುವರಿಸಿ 10ನೇ ಆರೋಪಿಯಾಗಿರುವ ವಿನಯ್ ಸಹ ಮಾಫಿಸಾಕ್ಷಿಗೆ ಅರ್ಜಿ ಸಲ್ಲಿಸಿದ್ದಾನೆ ಅವನ ಅರ್ಜಿ ಪರಿಗಣಿಸದೆ ಪ್ರದೋಷನ ಅರ್ಜಿಯನ್ನು ಪರಿಗಣಿಸಿದ್ದಾರೆ ಎಂದು ವಾದಿಸಿದರು. ಈ ವೇಳೆ ಹೈಕೋರ್ಟ್ ಜಡ್ಜ್ ಅದನ್ನು 10ನೇ ಆರೋಪಿ ಹೇಳಬೇಕು ನೀವು ವಾದಿಸುವಂತಿಲ್ಲ ಎಂದು ತಿಳಿಸಿದರು.ಈ ವೇಳೆ ಪ್ರಸಿಕ್ಯೂಶನ್ ಪರವಾಗಿ ಎಸ್‍ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು.
ಪ್ರದೋಷ್ ಮೊಬೈಲ್ ಬಳಸಿ ಮಾತನಾಡಿರುವುದು ಸುಳ್ಳು ಜೈಲಿನಲ್ಲೇ ನೀಡಿರುವ ದೂರವಾಣಿ ಬಳಸಿಕೊಂಡಿದ್ದಾನೆ. ದರ್ಶನ್ ಪರವಾಗಿ ಪತ್ನಿ ಅರ್ಜಿ ಸಲ್ಲಿಸಿದ್ದಾರೆ ಎಂದಾಗ ಈ ವೇಳೆ ಜಡ್ಜ್ ನ್ಯಾಯದ ಗಂಟೆ ಯಾರಾದರೂ ಬಾರಿಸಲಿ ಬಿಡಿ ಬೇರೆ ಯಾರೋ ಹಾಕಿಲ್ಲ ಅವರ ಶ್ರೀಮತಿ ಅವರೇ ಹಾಕಿದ್ದಾರೆ. ಪತಿ ವಾಪಸ್ ಬರಲಿ ಅಂತ ಪತ್ನಿ ಒದ್ದಾಡುತ್ತಿದ್ದಾರೆ. ದೇವಸ್ಥಾನಗಳಲ್ಲಿ ಬೇಡಿಕೊಂಡು ಬರುತ್ತಿದ್ದಾರೆ ಹೀಗಿರುವಾಗ ಅವರ ಹಕ್ಕಿನ ಬಗ್ಗೆ ಪ್ರಶ್ನಿಸುವುದು ಬೇಡ ಎಂದು ಜಡ್ಜ್ ಶ್ರೀಶಾನಂದ್ ತಿಳಿಸಿದರು.