LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯೇಂದ್ರ, ಸೂಲಿಬೆಲೆ ಎಲ್ಲಿದ್ದಾರೆ?: ಸುಪ್ರೀಂ ಕೋರ್ಟ್ ಆವರಣದಿಂದಲೇ ಗಿರೀಶ್ ಮಟ್ಟಣ್ಣವರ್ ಪ್ರಶ್ನೆ

ನವದೆಹಲಿ: ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಈಗ ಭಾರಿ ತಿರುವು ಸಿಕ್ಕಿದ್ದು, ಈ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸೌಜನ್ಯಪರ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಅವರು ದೆಹಲಿಯ ಸುಪ್ರೀಂ ಕೋರ್ಟ್ ಆವರಣದಿಂದಲೇ ಲೈವ್ ಬಂದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಚಕ್ರವರ್ತಿ ಸೂಲಿಬೆಲೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೋರ್ಟ್ ಖರ್ಚು ಭರಿಸ್ತೀನಿ ಎಂದವರು ಈಗ ಎಲ್ಲಿದ್ದಾರೆ?

ಸೌಜನ್ಯ ಪ್ರಕರಣದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದಾಗ, ಸೌಜನ್ಯಳ ತಾಯಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೆ ತಾವೇ ವಕೀಲರ ಸಂಪೂರ್ಣ ಖರ್ಚನ್ನು ಭರಿಸುವುದಾಗಿ ಬಿ.ವೈ. ವಿಜಯೇಂದ್ರ ಅವರು ಹೇಳಿಕೆ ನೀಡಿದ್ದರು. ಈ ಬಗ್ಗೆ ದೆಹಲಿಯಲ್ಲಿ ಲೈವ್ ವಿಡಿಯೋ ಮೂಲಕ ವ್ಯಂಗ್ಯವಾಡಿರುವ ಮಟ್ಟಣ್ಣವರ್, ವಿಜಯೇಂದ್ರ ಅವರು ಫೀಸ್ ಕೊಡಲು ಸುಪ್ರೀಂ ಕೋರ್ಟ್ ಆವರಣದಲ್ಲಿ ಎಲ್ಲಾದರೂ ಟೆಂಟ್ ಹಾಕಿಕೊಂಡು ಕೂತಿದ್ದಾರಾ ಎಂದು ಹುಡುಕಲು ತಾನು ಬಂದಿರುವುದಾಗಿ ತಿಳಿಸಿದ್ದಾರೆ. ಆದರೆ ಅಲ್ಲಿ ವಿಜಯೇಂದ್ರ ಅವರೂ ಇಲ್ಲ, ಚಕ್ರವರ್ತಿ ಸೂಲಿಬೆಲೆಯೂ ಇಲ್ಲ ಎಂದು ಅವರು ಕಾಲೆಳೆದಿದ್ದಾರೆ.

ಕ್ರಿಮಿನಲ್ ಪ್ರಕರಣದಲ್ಲಿ ಧಾರ್ಮಿಕ ಭಾವನೆಗಳ ಬಳಕೆ

ಹಿಂದೂ ಧರ್ಮದ ಕಾಂಟ್ರಾಕ್ಟ್ ಹಿಡಿದವರಂತೆ ವರ್ತಿಸುತ್ತಿರುವ ಕೆಲವರು ಸೌಜನ್ಯ ಹೋರಾಟವನ್ನು ದೇವಸ್ಥಾನಕ್ಕೆ ಕಳಂಕ ತರುವ ಯತ್ನ ಎಂದು ಬಿಂಬಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಇದೊಂದು ಅತ್ಯಂತ ಘೋರವಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣವಾಗಿದ್ದು, ಇದರಲ್ಲಿ ರಾಜಕೀಯ ಮತ್ತು ಧಾರ್ಮಿಕ ಭಾವನೆಗಳನ್ನು ತರುವ ಉದ್ದೇಶವಾದರೂ ಏನು ಎಂದು ಅವರು ಪ್ರಶ್ನಿಸಿದ್ದಾರೆ.

ನಿಜವಾದ ಅತ್ಯಾಚಾರಿಗಳು ಧಾರ್ಮಿಕ ಭಾವನೆಗಳ ಹಿಂದೆ ಅಡಗಿ ಪರಾರಿಯಾಗುವ ಉದ್ದೇಶದಿಂದಲೇ ಈ ರೀತಿ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಸೌಜನ್ಯ ಹಾಗೂ ಆಕೆಯ ಕುಟುಂಬಸ್ಥರು ದೇವಸ್ಥಾನದ ಭಕ್ತರು ಹಾಗೂ ಸೇವಕರು, ಜೊತೆಗೆ ಹೋರಾಟ ಮಾಡುತ್ತಿರುವ ತಾವೆಲ್ಲರೂ ಕೂಡ ದೇವಸ್ಥಾನದ ಭಕ್ತರೇ ಆಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎಸ್ಐಟಿ ಮುಖ್ಯಸ್ಥರ ನೇಮಕಕ್ಕೆ ದೊಡ್ಡ ಲಾಬಿ!

ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಗಿರೀಶ್ ಮಟ್ಟಣ್ಣವರ್, ಪ್ರಕರಣದ ಮುಂದಿನ ತನಿಖೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಕರಣವನ್ನು ಮರುತನಿಖೆ ನಡೆಸುವ ಎಸ್ಐಟಿ (SIT) ಮುಖ್ಯಸ್ಥರು ಯಾರಾಗಬೇಕು ಮತ್ತು ಮತ್ತೆ ಬಿ-ರಿಪೋರ್ಟ್ ಹಾಕಿ ಕೇಸ್ ಕ್ಲೋಸ್ ಮಾಡಬೇಕು ಎನ್ನುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಲಾಬಿ ಶುರುವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಅತ್ಯಾಚಾರಿಗಳು ಭಯಂಕರ ಪ್ರಭಾವಿಗಳಾಗಿದ್ದು, ಅವರು ಏನು ಬೇಕಾದರೂ ಮಾಡಬಹುದು, ಆದರೆ ತಾವು ನಿಷ್ಪಕ್ಷಪಾತ ತನಿಖೆಗಾಗಿ (Fair investigation) ಎಲ್ಲಾ ರೀತಿಯ ಕಾನೂನು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದಾಗಿ ಅವರು ವಿವರಿಸಿದರು.

ಸುಳ್ಳು ಕೇಸ್ ಹಾಗೂ ಮಾಧ್ಯಮಗಳ ಟ್ರಯಲ್ ಭೀತಿ

ಮುಂದಿನ ದಿನಗಳಲ್ಲಿ ಸಾಕ್ಷಿದಾರರನ್ನು ಉಲ್ಟಾ ಹೊಡೆಯುವಂತೆ ಮಾಡುವುದು, ಮೀಡಿಯಾ ಟ್ರಯಲ್ ನಡೆಸುವುದು, ಹಾಗೂ ಹೋರಾಟಗಾರರ ಮೇಲೆ ಸುಳ್ಳು ಕೇಸ್ ಹಾಕಿ ಬಂಧಿಸುವ ಅಥವಾ ಗಡಿಪಾರು ಮಾಡುವ ಷಡ್ಯಂತ್ರಗಳು ನಡೆಯಬಹುದು ಎಂದು ಅವರು ಎಚ್ಚರಿಸಿದ್ದಾರೆ. ಆದರೆ, ಇವೆಲ್ಲವನ್ನೂ ಎದುರಿಸಲು ತಾವು ಕಾನೂನು ರೀತಿಯ ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಈ ಹಿಂದೆ ಸರಿಯಾಗಿ ಕ್ಲಿನಿಕಲ್ ಟೆಸ್ಟ್ ಹಾಗೂ ಡಿಎನ್ಎ (DNA) ವರದಿಗಳನ್ನು ಕಲೆಹಾಕದೆ ತಪ್ಪು ಎಸಗಿದ ಅಂದಿನ ತನಿಖಾಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದರೆ ಪ್ರಕರಣದ ಸತ್ಯಾಂಶ ಹೊರಬರಲಿದೆ ಎಂದು ಮಟ್ಟಣ್ಣವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!