LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಸ್ತೂರಿ ರಂಗನ್ ವರದಿ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಭೌತಿಕ ಸಮೀಕ್ಷೆ ಬಗ್ಗೆ ತೀರ್ಮಾನ : ಸಿಎಂ ಡಿ.ಕೆ ಶಿವಕುಮಾರ್

ಉಡುಪಿ: ಕಸ್ತೂರಿ ರಂಗನ್ ವರದಿ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಭೌತಿಕ ಸಮೀಕ್ಷೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತ ಸಾಧಕ-ಬಾಧಕಗಳ ಬಗ್ಗೆ ಸ್ಥಳೀಯರೊಂದಿಗೆ ಹಾಗೂ ಮಾಧ್ಯಮಗಳೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದ್ದು, ಅವರು ನಡೆಸಿದ ಸಂವಾದದ ಪ್ರಮುಖಾಂಶಗಳು ಇಂತಿವೆ:

ಕಸ್ತೂರಿ ರಂಗನ್ ವರದಿ ಮತ್ತು ಭೌತಿಕ ಸಮೀಕ್ಷೆ ಕುರಿತು:

• ಕಸ್ತೂರಿ ರಂಗನ್ ಸಮಿತಿಯು ಉಪಗ್ರಹ ಆಧಾರಿತ ಜಿಪಿಎಸ್ ಸಮೀಕ್ಷೆ ಮಾಡಿದ್ದು, ವಾಸ್ತವ ಭೌತಿಕ ಸಮೀಕ್ಷೆ ನಡೆಸಿಲ್ಲ; ಇದರಿಂದ 100ಕ್ಕೂ ಹೆಚ್ಚು ಜನರಿದ್ದರೂ ಹಾಗೂ ಕೇವಲ 5% ಸಂರಕ್ಷಿತ ಅರಣ್ಯವಿದ್ದರೂ (ವರದಿಯ 100ಕ್ಕಿಂತ ಕಡಿಮೆ ಜನಸಂಖ್ಯೆ ಮತ್ತು 20% ಸಂರಕ್ಷಿತ ಅರಣ್ಯ ನಿಯಮ ಮೀರಿ) ಪ್ರದೇಶಗಳನ್ನು ಸೂಕ್ಷ್ಮ ವಲಯಕ್ಕೆ ಸೇರಿಸಲಾಗಿದೆ.

• ಕೇರಳದಲ್ಲಿ ಉನ್ನತ ಮಟ್ಟದ ಸಮಿತಿ ಮೂಲಕ ಭೌತಿಕ ಸಮೀಕ್ಷೆ ನಡೆಸಿ, ನಾಡು-ಕಾಡನ್ನು ಬೇರ್ಪಡಿಸಿ ವ್ಯಾಪ್ತಿಯನ್ನು 13,000 ಚ.ಕಿ.ಮೀನಿಂದ 9,000 ಚ.ಕಿ.ಮೀಗೆ ಇಳಿಸಿ 3,200 ಚ.ಕಿ.ಮೀ ಮುಕ್ತಗೊಳಿಸಲಾಗಿದೆ; ಕರ್ನಾಟಕದಲ್ಲೂ (ಒಟ್ಟು 20,000 ಚ.ಕಿ.ಮೀ ವ್ಯಾಪ್ತಿ) ಇದೇ ಮಾದರಿ ಅನುಸರಿಸಿದರೆ ಸುಮಾರು 5,000 ಚ.ಕಿ.ಮೀ ಪ್ರದೇಶ ಮುಕ್ತವಾಗಲಿದೆ ಎಂದು ಸಲಹೆ ವ್ಯಕ್ತವಾಗಿದೆ.

• ರಾಜ್ಯ ಸರ್ಕಾರವೇ ತಜ್ಞರ ಸಮಿತಿ ರಚಿಸಿ ಭೌತಿಕ ಸಮೀಕ್ಷೆ ನಡೆಸಿ, ಆ ವರದಿಯನ್ನು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಹಾಗೂ ಹಸಿರು ನ್ಯಾಯಪೀಠಕ್ಕೆ ಸಲ್ಲಿಸಿ ಮನವರಿಕೆ ಮಾಡಿಕೊಡಬೇಕು ಎಂಬ ಬೇಡಿಕೆಗೆ, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.

ಸರ್ಕಾರದ ಮುಂದಿನ ನಡೆ ಹಾಗೂ ಅಧಿವೇಶನದ ತೀರ್ಮಾನ:

• ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜನರ ಭಾವನೆ ತಿಳಿದು ಪರಿಹಾರ ನೀಡಲು ಬಂದಿದ್ದು, ನಿಮ್ಮ ಅಭಿಪ್ರಾಯವೇ ನಮ್ಮ ಅಭಿಪ್ರಾಯವಾಗಲಿದೆ; ಸೆಪ್ಟೆಂಬರ್ 27ರ ಒಳಗೆ ನಮ್ಮ ತೀರ್ಮಾನವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕಾಗಿದೆ.

• ಕರೆಯಲಾಗಿರುವ 3 ದಿನಗಳ ವಿಶೇಷ ಅಧಿವೇಶನದ ಮೊದಲ ದಿನವೇ (ಸೋಮವಾರ) ಕಸ್ತೂರಿ ರಂಗನ್ ವರದಿ, ರೈತರು ಮತ್ತು ಬರಗಾಲದ ಕುರಿತು ಚರ್ಚಿಸಲಾಗುವುದು; ಜೊತೆಗೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗಕ್ಕೂ ಭೇಟಿ ನೀಡಿ ಜನರ ಅಭಿಪ್ರಾಯ ಆಲಿಸಲಾಗುವುದು.

ಅರಣ್ಯವಾಸಿಗಳ ಹಕ್ಕಿನ ರಕ್ಷಣೆ:

• ಅರಣ್ಯ ರಕ್ಷಿಸುವ ಅರಣ್ಯವಾಸಿಗಳ ಬದುಕಿಗೆ ಸಂರಕ್ಷಣಾ ಕಾನೂನು ತೊಂದರೆಯಾಗಬಾರದು ಹಾಗೂ ವರದಿಯಿಂದ ಒಕ್ಕಲೆಬ್ಬಿಸುತ್ತಾರೆ ಎಂಬ ಆತಂಕದ ಬಗ್ಗೆ ಸಾರ್ವಜನಿಕರಿಗೆ ವಾಸ್ತವಾಂಶದ ಅರಿವು ಮೂಡಿಸಬೇಕಿದೆ.

• ಅರಣ್ಯ ಹಕ್ಕು ಕಾಯ್ದೆಯಲ್ಲಿ ಕೆಲವರಿಗೆ 25 ವರ್ಷ ಹಾಗೂ ಉಳಿದವರಿಗೆ 75 ವರ್ಷವಿರುವ ನಿಯಮ ಬದಲಿಸಿ, ಎಲ್ಲರಿಗೂ 25 ವರ್ಷಗಳ ಮಿತಿ ನಿಗದಿ ಮಾಡಲು ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಲಾಗುವುದು; ಅರಣ್ಯವಾಸಿಗಳಿಗೆ ತೊಂದರೆ ನೀಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಗರ್ ಹುಕುಂ ಸಾಗುವಳಿ ಹಾಗೂ ಉಳುವವನಿಗೆ ಭೂಮಿ ನೀಡಿರುವುದು ನಮ್ಮ ಸರ್ಕಾರ.

ಕರಾವಳಿ ಅಭಿವೃದ್ಧಿ ಹಾಗೂ ಸ್ಥಳೀಯ ಬೇಡಿಕೆಗಳು:

• ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ, ಜನರ ಬದುಕಿನ ಮೇಲೆ ಕಾಳಜಿ ಇದೆ; ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತುಳುನಾಡಿನ ಜನರ ಬಯಕೆಯಂತೆ ಕೈಗೊಂಡ 60 ತೀರ್ಮಾನಗಳಲ್ಲಿ 40 ನಿರ್ಧಾರಗಳು ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿವೆ.

• ಸ್ಥಳೀಯ ಜನಪ್ರತಿನಿಧಿಗಳು ಇಟ್ಟಿರುವ ವಲಯ ನಿರ್ವಹಣೆ ಯೋಜನೆ ಹಾಗೂ ಹೆಬ್ರಿಯಲ್ಲಿ ತಾಲ್ಲೂಕು ಆಸ್ಪತ್ರೆ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು; ಸುಮ್ಮನೆ ಘೋಷಣೆ ಮಾಡಿ ಮರೆಯುವ ಜಾಯಮಾನ ನಮ್ಮದಲ್ಲ, ಮುಂದಿನ ದಿನಗಳಲ್ಲಿ ಉಡುಪಿಗೂ ಭೇಟಿ ನೀಡುವೆ ಎಂದು ತಿಳಿಸಿದ್ದಾರೆ.

https://twitter.com/CMofKarnataka/status/2100982230093046199?s=20

 

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!