LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಇಂದು, ನಾಳೆ ವಿಶೇಷ ಅಭಿಯಾನ

ಅರ್ಹ ನಾಗರಿಕರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಚುನಾವಣಾ ಆಯೋಗವು ಹಮ್ಮಿಕೊಂಡಿರುವ ಎರಡನೇ ಹಂತದ ವಿಶೇಷ ಅಭಿಯಾನವು ಸೆಪ್ಟೆಂಬರ್ 19 ಮತ್ತು 20 ರಂದು ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ತಿಳಿಸಿದ್ದಾರೆ.

ಮೊದಲ ಹಂತದ ನೋಂದಣಿ ಅಭಿಯಾನವು ಈಗಾಗಲೇ ಆಗಸ್ಟ್ 29 ಮತ್ತು 30 ರಂದು ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೀಗ ಎರಡನೇ ಹಂತದ ಪ್ರಕ್ರಿಯೆ ಆರಂಭವಾಗುತ್ತಿದ್ದು, ಜಿಲ್ಲೆಯ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಅಧಿಕಾರಿಗಳು ಹಾಜರಿರಲಿದ್ದಾರೆ.

18 ವರ್ಷ ಪೂರೈಸಿದ ಯುವಜನರು ಹಾಗೂ ಇದುವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದ ಎಲ್ಲ ಅರ್ಹ ನಾಗರಿಕರು ಅರ್ಜಿ ಸಲ್ಲಿಸಬಹುದು. ಹೊಸದಾಗಿ ಹೆಸರು ಸೇರ್ಪಡೆ ಮಾಡುವುದರ ಜೊತೆಗೆ ಮತದಾರರ ಗುರುತಿನ ಚೀಟಿಯಲ್ಲಿ ಹೆಸರು, ವಿಳಾಸ ತಿದ್ದುಪಡಿ ಹಾಗೂ ಹೆಸರು ವರ್ಗಾವಣೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಸ್‌ಐಆರ್

ಆ.24 ರ ಅಂಕಿ-ಅAಶಗಳ ಪ್ರಕಾರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 10,06,307 ಮತದಾರರಿದ್ದು, ಅದರಲ್ಲಿ 5,11,740 ಮಹಿಳಾ ಮತದಾರರು, 4,94,371 ಪುರುಷ ಮತದಾರರು ಹಾಗೂ 196 ತೃತೀಯ ಲಿಂಗಿ ಮತದಾರರಿದ್ದಾರೆ.

ವಿಧಾನಸಭಾವಾರು ಮತದಾರರ ವಿವರ

ಕಂಪ್ಲಿ (91): ಒಟ್ಟು 2,04,792 ಮತದಾರರು (ಪುರುಷರು- 1,00,706, ಮಹಿಳೆಯರು- 1,04,047, ತೃತೀಯ ಲಿಂಗಿಗಳು- 39)

ಸಿರುಗುಪ್ಪ (92): ಒಟ್ಟು 1,96,173 ಮತದಾರರು (ಪುರುಷರು- 96,963, ಮಹಿಳೆಯರು- 99,153, ತೃತೀಯ ಲಿಂಗಿಗಳು- 57)

ಬಳ್ಳಾರಿ ಗ್ರಾಮೀಣ (93): ಒಟ್ಟು 1,99,972 ಮತದಾರರು (ಪುರುಷರು- 98,214, ಮಹಿಳೆಯರು- 1,01,713, ತೃತೀಯ ಲಿಂಗಿಗಳು- 45)

ಬಳ್ಳಾರಿ ನಗರ (94): ಒಟ್ಟು 2,02,641 ಮತದಾರರು (ಪುರುಷರು- 97,298, ಮಹಿಳೆಯರು- 1,05,308, ತೃತೀಯ ಲಿಂಗಿಗಳು- 35)

ಸಂಡೂರು (95): ಒಟ್ಟು 2,02,729 ಮತದಾರರು (ಪುರುಷರು- 1,01,190,  ಮಹಿಳೆಯರು- 1,01,519, ತೃತೀಯ ಲಿಂಗಿಗಳು- 20)

1,260ಕ್ಕೆ ಏರಿಕೆಯಾದ ಮತಗಟ್ಟೆಗಳ ಸಂಖ್ಯೆ:

ಮತದಾರರ ಅನುಕೂಲಕ್ಕಾಗಿ ಕೈಗೊಳ್ಳಲಾದ ಮತಗಟ್ಟೆಗಳ ಪುನರ್‌ವಿಂಗಡಣೆ ನಂತರ ಜಿಲ್ಲೆಯಲ್ಲಿ ಮತಗಟ್ಟೆಗಳ ಸಂಖ್ಯೆ 1,227 ರಿಂದ 1,260ಕ್ಕೆ (33 ಮತಗಟ್ಟೆಗಳ ಹೆಚ್ಚಳ) ಏರಿಕೆಯಾಗಿದೆ.

ಕಂಪ್ಲಿ: 242 ರಿಂದ 253ಕ್ಕೆ ಏರಿಕೆ

ಸಿರುಗುಪ್ಪ: 229 ರಿಂದ 244ಕ್ಕೆ ಏರಿಕೆ

ಬಳ್ಳಾರಿ ಗ್ರಾಮೀಣ: 236 ರಿಂದ 238ಕ್ಕೆ ಏರಿಕೆ

ಬಳ್ಳಾರಿ ನಗರ: 261

ಸಂಡೂರು: 259 ರಿಂದ 264ಕ್ಕೆ ಏರಿಕೆ

37,869 ನೋಟಿಸ್‌ಗಳ ಜಾರಿ ಮತ್ತು ವಿಚಾರಣೆ ಪ್ರಕ್ರಿಯೆ:

ಮತದಾರರ ಪಟ್ಟಿಯ ನಿಖರತೆಗಾಗಿ ಆಗಸ್ಟ್ 28 ರಿಂದಲೇ ನೋಟಿಸ್ ಜಾರಿ ಪ್ರಕ್ರಿಯೆ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 37,869 ನೋಟಿಸ್‌ಗಳನ್ನು ಸೃಜಿಸಲು ಗುರುತಿಸಲಾಗಿದ್ದು, ಈ ಪೈಕಿ 37,868 ನೋಟಿಸ್‌ಗಳನ್ನು ಈಗಾಗಲೇ ಸೃಜಿಸಲಾಗಿದೆ. ಸೃಜಿಸಲಾದ ನೋಟಿಸ್‌ಗಳಲ್ಲಿ 37,768 ನೋಟಿಸ್‌ಗಳನ್ನು ಮತದಾರರಿಗೆ ತಲುಪಿಸಲಾಗಿದ್ದು, ಕೇವಲ 100 ನೋಟಿಸ್‌ಗಳ ವಿತರಣೆ ಬಾಕಿ ಇದೆ.

ವಿಚಾರಣೆ:

ಇದುವರೆಗೆ 21,452 ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡಿದೆ. 14,164 ಪ್ರಕರಣಗಳಲ್ಲಿ ನಿಗದಿತ ವಿಚಾರಣಾ ದಿನಾಂಕ ಮುಕ್ತಾಯಗೊಂಡಿದೆ. ಪ್ರಸ್ತುತ ಪರಿಶೀಲನೆ ಪೂರ್ಣಗೊಂಡ 13,856 ದಾಖಲೆಗಳನ್ನು ಅಂತಿಮ ಪ್ರಕಟಣೆಗಾಗಿ ಕಾಯ್ದಿರಿಸಲಾಗಿದ್ದು, 15 ಅನರ್ಹ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

136 ಸಹಾಯಕ ಮತದಾರರ ನೋಂದಣಾಧಿಕಾರಿಗಳ ನೇಮಕ

ಮತದಾರರ ನೋಂದಣಿ ಮತ್ತು ವಿಚಾರಣಾ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲೆಯಾದ್ಯಂತ 6 ನಿಯಮಿತ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ 130 ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಸೇರಿದಂತೆ ಒಟ್ಟು 136 ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಕಂಪ್ಲಿಯಲ್ಲಿ 28, ಸಿರುಗುಪ್ಪದಲ್ಲಿ 26, ಬಳ್ಳಾರಿ ಗ್ರಾಮೀಣದಲ್ಲಿ 25, ಬಳ್ಳಾರಿ ನಗರದಲ್ಲಿ 33 ಹಾಗೂ ಸಂಡೂರು ಕ್ಷೇತ್ರದಲ್ಲಿ 24 ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮತದಾರರು ತಮ್ಮ ಹೆಸರು, ವಿಳಾಸ ತಿದ್ದುಪಡಿ ಹಾಗೂ ಹೊಸ ನೋಂದಣಿಗಾಗಿ ಈ ವಿಶೇಷ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!