LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾರು ಇಲ್ಲದಿದ್ದರೆ ಏನಂತೆ ? ಇ-ರಿಕ್ಷಾ ಏರಿ ಕಡಿದಾದ ಬೆಟ್ಟಗುಡ್ಡಗಳನ್ನು ಸುತ್ತಿದ ಭೂಪ !

ಸಾಮಾನ್ಯವಾಗಿ ನಗರಗಳ ನುಣುಪಾದ ರಸ್ತೆಗಳಲ್ಲಿ ಪ್ರಯಾಣಿಕರನ್ನು ಸಾಗಿಸಲು ಬಳಸುವ ಪುಟ್ಟ ಎಲೆಕ್ಟ್ರಿಕ್ ಆಟೋರಿಕ್ಷಾವನ್ನು ಕಡಿದಾದ ಹಿಮಾಲಯ ಪರ್ವತಗಳಿಗೆ ಕೊಂಡೊಯ್ದು ಸಾಹಸ ಮೆರೆದಿರುವ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮುಜಾಫರ್‌ನಗರದ ನಿವಾಸಿ ಸುಮಿತ್ ಕುಮಾರ್ ಪ್ರಜಾಪತಿ ಎಂಬ ಯುವಕ ತನ್ನ ಸಾಮಾನ್ಯ ಇ-ರಿಕ್ಷಾದಲ್ಲೇ ಹಿಮಾಚಲ ಪ್ರದೇಶದ ಮನಾಲಿ ಇಂದ ಅತ್ಯಂತ ದುರ್ಗಮ ಸ್ಪಿತಿ ಕಣಿವೆಯವರೆಗೆ ಯಶಸ್ವಿಯಾಗಿ ಚಾಲನೆ ಮಾಡಿ ಎಲ್ಲರ ಹುಬ್ಬೇರಿಸಿದ್ದಾನೆ.

ಸುಮಿತ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಸಾಹಸಮಯ ಪಯಣದ ವಿಡಿಯೋ ಸರಣಿಗಳನ್ನು ಹಂಚಿಕೊಂಡಿದ್ದು, ಸದ್ಯ ಇವು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಸುಮಿತ್ ಅವರ ಸ್ನೇಹಿತರೆಲ್ಲರೂ ಕಾರಿನಲ್ಲಿ ಸ್ಪಿತಿಗೆ ತೆರಳಲು ಯೋಜನೆ ರೂಪಿಸಿದ್ದರು. ಆ ಸಮಯದಲ್ಲಿ ಕಾರು ಇಲ್ಲದಿದ್ದಾಗ ಸುಮಿತ್ ನಿರಾಶರಾಗದೆ, ತನ್ನ ಇ-ರಿಕ್ಷಾವನ್ನೇ ಪರ್ವತ ಪ್ರದೇಶಕ್ಕೆ ತೆಗೆದುಕೊಂಡು ಹೋಗುವ ವಿಶಿಷ್ಟ ನಿರ್ಧಾರ ಕೈಗೊಂಡರು. ಮೊದಲು ಲಾರಿಯ ಮೂಲಕ ರಿಕ್ಷಾವನ್ನು ಮನಾಲಿಗೆ ತಲುಪಿಸಿ, ಅಲ್ಲಿಂದ ಆಗಸ್ಟ್ 19 ರಂದು ತಾವೇ ಸ್ವತಃ ಚಾಲನೆ ಮಾಡುತ್ತಾ ಸ್ಪಿತಿ ಕಡೆಗೆ ಸಾಹಸಯಾತ್ರೆ ಆರಂಭಿಸಿದರು.

ಬೆಟ್ಟಗುಡ್ಡಗಳ ಸುದೀರ್ಘ ಪ್ರಯಾಣದಲ್ಲಿ ಎಲೆಕ್ಟ್ರಿಕ್ ವಾಹನದ ಬ್ಯಾಟರಿ ಚಾರ್ಜಿಂಗ್ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ಇದಕ್ಕಾಗಿ ರಾತ್ರಿ ತಂಗುತ್ತಿದ್ದ ಹೋಟೆಲ್ ಹಾಗೂ ಹೋಮ್‌ಸ್ಟೇಗಳಲ್ಲಿ ವಾಹನ ಚಾರ್ಜ್ ಮಾಡುತ್ತಿದ್ದ ಅವರು, ತುರ್ತು ಸಂದರ್ಭದಲ್ಲಿ ನೆರವಾಗಲು ಮುನ್ನೆಚ್ಚರಿಕೆಯಾಗಿ ರಿಕ್ಷಾದಲ್ಲೇ ಸಣ್ಣ ಜನರೇಟರ್ ಒಂದನ್ನು ಕೊಂಡೊಯ್ದಿದ್ದರು. ಕಲ್ಲು-ಬಂಡೆಗಳಿಂದ ಕೂಡಿದ ಅತ್ಯಂತ ಅಪಾಯಕಾರಿ ಕಡಿದಾದ ರಸ್ತೆಗಳು ಮತ್ತು ತಿರುವುಗಳಲ್ಲಿ ಅವರು ಈ ಮೂರು ಚಕ್ರದ ವಾಹನವನ್ನು ಜಾಗರೂಕತೆಯಿಂದ ಓಡಿಸಿದ್ದಾರೆ.

ಹಿಮಾಲಯದ ಹಿಮಚ್ಛಾದಿತ ದುರ್ಗಮ ಬೆಟ್ಟಗಳ ನಡುವೆ ಇ-ರಿಕ್ಷಾ ಸಂಚರಿಸುತ್ತಿರುವುದನ್ನು ಕಂಡು ದಾರಿಯುದ್ದಕ್ಕೂ ಸಿಕ್ಕ ದೇಶ-ವಿದೇಶಗಳ ಪ್ರವಾಸಿಗರು ದಂಗಾಗಿದ್ದರು. ಹಲವರು ತಮ್ಮ ವಾಹನಗಳನ್ನು ನಿಲ್ಲಿಸಿ ಆತನೊಂದಿಗೆ ಫೋಟೋ ತೆಗೆಸಿಕೊಂಡರೆ, ಕೆಲವರು ವಿಡಿಯೋ ಮಾಡಿ ಹರ್ಷ ವ್ಯಕ್ತಪಡಿಸಿದರು. ಆರಂಭದಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದ ಸುಮಿತ್, ನಂತರ ತಮ್ಮ ಫಾಲೋವರ್ಸ್‌ಗಳ ಸಲಹೆಯಂತೆ ಪ್ರವಾಸಿಗರಿಗೂ ಈ ವಿಶಿಷ್ಟ ಪ್ರಯಾಣದ ಅನುಭವ ನೀಡಲು ಆರಂಭಿಸಿದರು.

ಸುಮಾರು 12,500 ಅಡಿ ಎತ್ತರದಲ್ಲಿ ಸಾಗಿದ ಅವರ ರಿಕ್ಷಾ ಆಗಸ್ಟ್ 26 ರಂದು ಅತ್ಯಂತ ಕಠಿಣವಾದ ಕುಂಜುಮ್ ಪಾಸ್ ತಲುಪುವಲ್ಲಿ ಯಶಸ್ವಿಯಾಯಿತು. ಇ-ರಿಕ್ಷಾವೊಂದು ಇಷ್ಟು ಎತ್ತರದ ಪ್ರದೇಶವನ್ನು ತಲುಪಿರುವುದು ಪ್ರಪಂಚದಲ್ಲೇ ಮೊದಲ ಬಾರಿಯಾಗಿದ್ದು ಇದೊಂದು ದಾಖಲೆ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಕಡಿದಾದ ಹಿಮಾಲಯದ ಹಾದಿಯಲ್ಲಿ ಇ-ರಿಕ್ಷಾ ಓಡಿಸಿದ ಈ ಯುವಕನ ಅದಮ್ಯ ಸಾಹಸ ಮತ್ತು ಧೈರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?