LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶೌರ್ಯ ಮೆರೆದ ಯೋಧರಿಗೆ ಗೌರವ: ಪ್ರಥಮ ದರ್ಜೆ, ಎಸಿ ಕೋಚ್‌ಗಳಲ್ಲಿ ಇನ್ಮುಂದೆ ಉಚಿತ ರೈಲು ಸೇವೆ !

ದೇಶದ ರಕ್ಷಣೆಗಾಗಿ ಅದಮ್ಯ ಸಾಹಸ ಮೆರೆದ ಸಶಸ್ತ್ರ ಪಡೆಗಳ ಶೌರ್ಯ ಪ್ರಶಸ್ತಿ ಪುರಸ್ಕೃತ ಯೋಧರು ಮತ್ತು ಅವರ ಕುಟುಂಬದ ಅರ್ಹ ಸದಸ್ಯರಿಗೆ ಭಾರತೀಯ ರೈಲ್ವೆಯಲ್ಲಿ ಜೀವಮಾನವಿಡೀ ಉಚಿತ ಪ್ರಯಾಣ ಕಲ್ಪಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ವಿಸ್ತರಿಸಿದೆ. ಈಗಾಗಲೇ ಚಾಲ್ತಿಯಲ್ಲಿರುವ ಪ್ರಮುಖ ಶೌರ್ಯ ಪ್ರಶಸ್ತಿಗಳ ಜತೆಗೆ, ಇನ್ನುಮುಂದೆ ಸೇನಾ ಪದಕ, ನೌಕಾ ಸೇನಾ ಪದಕ ಹಾಗೂ ವಾಯು ಸೇನಾ ಪದಕ ಪಡೆದ ವೀರ ಯೋಧರಿಗೂ ಈ ಉಚಿತ ಸೌಲಭ್ಯ ಅನ್ವಯವಾಗಲಿದೆ.

ಈ ಯೋಜನೆಯನ್ನು ಸಂಪೂರ್ಣ ಡಿಜಿಟಲ್ ಮತ್ತು ಕಾಗದರಹಿತ ವ್ಯವಸ್ಥೆಯ ಮೂಲಕ ಜಾರಿಗೆ ತರಲಾಗುತ್ತಿದೆ. ಅರ್ಹ ಫಲಾನುಭವಿಗಳು ಭಾರತೀಯ ರೈಲ್ವೆ ರಿಯಾಯಿತಿ ಕಾರ್ಡ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು ಪರಿಶೀಲನೆ ಪೂರ್ಣಗೊಳಿಸಬೇಕಾಗುತ್ತದೆ. ಪರಿಶೀಲನೆಯ ನಂತರ ಅವರಿಗೆ ಎಲೆಕ್ಟ್ರಾನಿಕ್ ಇ-ಪಾಸ್ ನೀಡಲಾಗುವುದು. ಈ ಇ-ಪಾಸ್ ಬಳಸಿಕೊಂಡು ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ 2026 ರ ನವೆಂಬರ್ 1 ರಿಂದ ನೇರವಾಗಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಈ ನೂತನ ಸೌಲಭ್ಯದ ಅಡಿಯಲ್ಲಿ ಅರ್ಹ ಪದಕ ಪುರಸ್ಕೃತರು ಭಾರತೀಯ ರೈಲ್ವೆಯ ಪ್ರಥಮ ದರ್ಜೆ, ಸೆಕೆಂಡ್ ಎಸಿ ಹಾಗೂ ಎಸಿ ಚೇರ್ ಕಾರ್ ಬೋಗಿಗಳಲ್ಲಿ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಪ್ರಯಾಣಿಸಬಹುದು. ಅಷ್ಟೇ ಅಲ್ಲದೆ, ಅವರೊಂದಿಗೆ ಪ್ರಯಾಣಿಸುವ ಒಬ್ಬ ಸಹಪ್ರಯಾಣಿಕರಿಗೂ ಸಂಪೂರ್ಣ ಉಚಿತ ಟಿಕೆಟ್ ಸೌಲಭ್ಯ ಸಿಗಲಿದೆ.

ಈ ಯೋಜನೆಯು ಕೇವಲ ಪದಕ ಪಡೆದ ಯೋಧರಿಗೆ ಮಾತ್ರ ಸೀಮಿತವಾಗಿರದೆ, ಅವರ ಅರ್ಹ ಕುಟುಂಬ ಸದಸ್ಯರಿಗೂ ಅನ್ವಯವಾಗಲಿದೆ. ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಪದಕ ಪುರಸ್ಕೃತ ಯೋಧರ ಪತಿ ಅಥವಾ ಪತ್ನಿ ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಕರ್ತವ್ಯದ ವೇಳೆ ಹುತಾತ್ಮರಾದ ಶೌರ್ಯ ಪ್ರಶಸ್ತಿ ವಿಜೇತರ ಪತ್ನಿ ಅಥವಾ ಪತಿ ಮರುಮದುವೆಯಾಗದಿದ್ದರೆ ಅವರಿಗೂ ಈ ಸವಲತ್ತು ಸಿಗಲಿದೆ. ಒಂದು ವೇಳೆ ಮರಣೋತ್ತರವಾಗಿ ಪದಕ ಪಡೆದ ಸೈನಿಕರು ಅವಿವಾಹಿತರಾಗಿದ್ದರೆ, ಅಂತಹ ಹುತಾತ್ಮರ ತಂದೆ-ತಾಯಿಗೂ ಈ ಉಚಿತ ಪ್ರಯಾಣ ಯೋಜನೆಯನ್ನು ವಿಸ್ತರಿಸಲಾಗಿದೆ.

ಈ ಹಿಂದೆ ಪರಮವೀರ ಚಕ್ರ, ಮಹಾವೀರ ಚಕ್ರ, ವೀರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ ಹಾಗೂ ಶೌರ್ಯ ಚಕ್ರ ಪಡೆದ ಯೋಧರಿಗೆ ಮಾತ್ರ ಈ ಜೀವಮಾನದ ಉಚಿತ ರೈಲು ಪ್ರಯಾಣದ ಸವಲತ್ತು ಲಭ್ಯವಿತ್ತು. ಇದೀಗ ಸಾಹಸ ಮತ್ತು ಶೌರ್ಯಕ್ಕಾಗಿ ಸೇನಾ ಪದಕ ಪಡೆದ ಇತರ ಯೋಧರನ್ನೂ ಈ ವ್ಯಾಪ್ತಿಗೆ ತರಲಾಗಿದೆ. ರಕ್ಷಣಾ ಸಚಿವಾಲಯದ ಈ ಕ್ರಮವು ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ವೀರ ಯೋಧರ ತ್ಯಾಗ ಮತ್ತು ಬಲಿದಾನಕ್ಕೆ ಸಲ್ಲಿಸಿದ ಅತ್ಯುನ್ನತ ಗೌರವವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!