ಸಾಗರ: ತಾಲೂಕು ಮಟ್ಟದ ನಾಗರಿಕರಿಗೂ ಅಂತಾರಾಷ್ಟ್ರೀಯ ಗುಣಮಟ್ಟದ ಸಲೂನ್ ಹಾಗೂ ಸೌಂದರ್ಯವರ್ಧಕ ಸೇವೆಗಳನ್ನು ಒದಗಿಸುವ ಉದ್ದೇಶದೊಂದಿಗೆ, ನಗರದ ಹೃದಯಭಾಗದಲ್ಲಿರುವ ಜೂನಿಯರ್ ಕಾಲೇಜು ಎದುರಿನ ಶ್ರೀ ವಿಘ್ನೇಶ್ವರ ಕಾಂಪ್ಲೆಕ್ಸ್‌ನಲ್ಲಿ ‘ಗ್ಲಾಮರ್ ಕೇರ್ ಫ್ಯಾಮಿಲಿ ಸಲೂನ್’ನ ನೂತನ ಶಾಖೆಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಸಲೂನ್ ಶಾಖೆಯನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ: "ಮಲೆನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ ಸಾಗರ ನಗರವು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ನಗರವಾಸಿಗಳಿಗೆ ಉತ್ತಮ ಜೀವನಶೈಲಿ ಮತ್ತು ಆಧುನಿಕ ಸೇವೆಗಳ ಅಗತ್ಯವಿದೆ. ಇಂತಹ ಸುಸಜ್ಜಿತ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಫ್ಯಾಮಿಲಿ ಸಲೂನ್ ಸೇವೆಗಳು ಈ ಹಿಂದೆ ಕೇವಲ ಬೆಂಗಳೂರು, ಮಂಗಳೂರಿನಂತಹ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದವು. ಈಗ ನಮ್ಮ ಸಾಗರದ ಜನತೆಗೂ ಇಂತಹ ಗುಣಮಟ್ಟದ ಸೌಲಭ್ಯ ಸ್ಥಳೀಯವಾಗಿಯೇ ಸಿಗುತ್ತಿರುವುದು ಸಂತಸದ ವಿಷಯ. ಗ್ಲಾಮರ್ ಕೇರ್ ಸಂಸ್ಥೆಯು ಗ್ರಾಹಕರಿಗೆ ಅತ್ಯುತ್ತಮ, ನೈರ್ಮಲ್ಯಯುತ ಹಾಗೂ ವಿಶ್ವಾಸಾರ್ಹ ಸೇವೆಯನ್ನು ನೀಡಿ ತಾಲೂಕಿನಾದ್ಯಂತ ಜನಮನ್ನಣೆ ಗಳಿಸಲಿ. ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯುವುದರೊಂದಿಗೆ ಸ್ಥಳೀಯ ಯುವಕ-ಯುವತಿಯರಿಗೆ ಉದ್ಯೋಗಾವಕಾಶಗಳನ್ನೂ ಕಲ್ಪಿಸಲಿ ಎಂದು ಶುಭ ಹಾರೈಸುತ್ತೇನೆ" ಎಂದು ಹೇಳಿದರು.

ಸಲೂನ್‌ನಲ್ಲಿ ಲಭ್ಯವಿರುವ ಪ್ರಮುಖ ಸೌಲಭ್ಯಗಳು:
- ಹೇರ್ ಕೇರ್ ಮತ್ತು ಸ್ಟೈಲಿಂಗ್: ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ಆಧುನಿಕ ಹೇರ್‌ಕಟ್, ಹೇರ್ ಸ್ಪಾ, ಕಲರಿಂಗ್, ಸ್ಟ್ರೈಟ್ನಿಂಗ್, ಸ್ಮೂತನಿಂಗ್, ಕೆರಾಟಿನ್ ಹಾಗೂ ಬೊಟಾಕ್ಸ್ ಟ್ರೀಟ್‌ಮೆಂಟ್‌ಗಳು.
- ಸ್ಕಿನ್ ಕೇರ್: ತ್ವಚೆಯ ಕಾಂತಿಗಾಗಿ ಅಡ್ವಾನ್ಸ್ಡ್ ಫೇಶಿಯಲ್, ಕ್ಲೀನ್-ಅಪ್, ಡಿ-ಟ್ಯಾನ್ ಮತ್ತು ಬ್ಲೀಚಿಂಗ್ ಚಿಕಿತ್ಸೆಗಳು.
- ಗ್ರೂಮಿಂಗ್ ಸೇವೆಗಳು: ಹೈಡ್ರಾ ಫೇಶಿಯಲ್, ಮೆಡ್-ಪೆಡಿ (ಮ್ಯಾನಿಕ್ಯೂರ್ ಮತ್ತು ಪೆಡಿಕ್ಯೂರ್), ಥ್ರೆಡಿಂಗ್, ವ್ಯಾಕ್ಸಿಂಗ್ ಹಾಗೂ ಬಾಡಿ ಸ್ಪಾ.
- ವಿಶೇಷ ಸೇವೆಗಳು: ವಧು-ವರರ ಮೇಕಪ್ (ಬ್ರೈಡಲ್ & ಗ್ರೂಮ್ ಮೇಕ್ ಓವರ್ ಪ್ಯಾಕೇಜ್‌ಗಳು) ಮತ್ತು ನುರಿತ ತಜ್ಞರಿಂದ ಬ್ಯೂಟಿ ಕನ್ಸಲ್ಟೇಶನ್.

ಕಾರ್ಯಕ್ರಮದಲ್ಲಿ ಗ್ಲಾಮರ್ ಕೇರ್ ಸಂಸ್ಥೆಯ ಮುಖ್ಯಸ್ಥರಾದ ರವಿಕುಮಾರ್, ವ್ಯವಸ್ಥಾಪಕರಾದ ರಜಿನಿ, ಜಿವಿತ್ ಹಾಗೂ ಪ್ರಮುಖರಾದ ದಿನೇಶ್, ಗಿರೀಶ್ ಕೋವಿ, ಸೋಮಶೇಖರ್ ಲಾವಿಗೆರೆ, ಗಣಪತಿ ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಗೂ ನಗರಸಭೆಯ ಮಾಜಿ ಸದಸ್ಯರಾದ ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..