LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನನ್ನಪ್ಪ ಅತ್ಯಂತ ಕ್ರೂರ ಸರಣಿ ಹಂತಕ ; ಸ್ವಂತ ಮಗಳಿಂದಲೇ ಬೆಚ್ಚಿಬೀಳಿಸುವ ಆರೋಪ‌ !

ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಕೊಲೆಗಳನ್ನು ಎಸಗಿರುವ ಸರಣಿ ಹಂತಕರಲ್ಲಿ ತನ್ನ ತಂದೆಯೂ ಒಬ್ಬನಾಗಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದು, ಈ ವಿಚಾರ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗ್ಯಾಲಿನಾ ಟ್ರೆಫಿಲ್ ಎಂಬ ಮಹಿಳೆ ತಮ್ಮ ತಂದೆ ಜಾನ್ ಟ್ರೆಫಿಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಅಭಿಯಾನ ನಡೆಸುವ ಮೂಲಕ ಆತನ ಅಪರಾಧ ಕೃತ್ಯಗಳಿಗೆ ನ್ಯಾಯ ಒದಗಿಸಬೇಕೆಂದು ಪಟ್ಟುಹಿಡಿದಿದ್ದಾರೆ. ಪ್ರಸ್ತುತ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಜಾನ್ ಟ್ರೆಫಿಲ್ ಯಾವುದೇ ಶಿಕ್ಷೆಗೆ ಗುರಿಯಾಗದೆ ಮುಕ್ತವಾಗಿ ಓಡಾಡುತ್ತಿರುವುದು ಮಗಳ ಆಕ್ರೋಶಕ್ಕೆ ಕಾರಣವಾಗಿದೆ.

ಗ್ಯಾಲಿನಾ ನೀಡಿರುವ ಮಾಹಿತಿಯ ಪ್ರಕಾರ, 1939 ರಲ್ಲಿ ಜನಿಸಿದ ಜಾನ್ ಟ್ರೆಫಿಲ್ 1950 ರ ದಶಕದಿಂದಲೇ ಕೊಲೆಗಳನ್ನು ಮಾಡಲು ಆರಂಭಿಸಿದ್ದ. ವಿಶೇಷವಾಗಿ 1965 ರಲ್ಲಿ ಪತ್ನಿಯೊಂದಿಗೆ ಸಂಬಂಧ ಕಡಿದುಕೊಂಡ ಬಳಿಕ 1990 ರ ದಶಕದ ಕೊನೆಯವರೆಗೂ ತಿಂಗಳಿಗೆ ಸರಾಸರಿ ಒಬ್ಬ ವ್ಯಕ್ತಿಯನ್ನು ಆತ ಹತ್ಯೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಮೆರಿಕದ ಇಲಿನಾಯ್ಸ್, ಕ್ಯಾಲಿಫೋರ್ನಿಯಾ, ವರ್ಜೀನಿಯಾ ಸೇರಿದಂತೆ ವಿವಿಧ ರಾಜ್ಯಗಳು ಮಾತ್ರವಲ್ಲದೆ, ಕೆನಡಾ, ಫ್ರಾನ್ಸ್ ಮತ್ತು ಹಾಲೆಂಡ್ ದೇಶಗಳಲ್ಲೂ ಈತ ಕೊಲೆಗಳನ್ನು ಎಸಗಿರುವುದಾಗಿ ಮಗಳ ಮುಂದೆ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.

ಹೊರಜಗತ್ತಿಗೆ ಗೌರವಾನ್ವಿತ ಮನೋವೈದ್ಯ ಹಾಗೂ ಶಸ್ತ್ರಚಿಕಿತ್ಸಕನಾಗಿ ಕಾಣಿಸಿಕೊಳ್ಳುತ್ತಿದ್ದ ಜಾನ್ ಟ್ರೆಫಿಲ್, ಹಿಂಸಾಚಾರಕ್ಕೆ ಒಳಗಾದ ಮಹಿಳೆಯರಿಗೆ ನೆರವು ನೀಡುತ್ತಿದ್ದ ಹಾಗೂ ಅಪರಾಧಿಗಳನ್ನು ಪತ್ತೆಹಚ್ಚುವ ಕುರಿತು ತನಿಖಾ ಸಂಸ್ಥೆಗಳಿಗೆ ತರಬೇತಿಯನ್ನೂ ನೀಡುತ್ತಿದ್ದ. ಆದರೆ ಆ ಸೋಗಿನ ಹಿಂದೆ ಸಂಪೂರ್ಣ ಕ್ರೂರ ಮುಖ ಅಡಗಿತ್ತು ಎಂದು ಮಗಳು ಹೇಳಿಕೊಂಡಿದ್ದಾರೆ. ರೋಗಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 1990 ರ ದಶಕದಲ್ಲಿ ಈತನ ವೈದ್ಯಕೀಯ ಪರವಾನಗಿಯನ್ನು ರದ್ದುಗೊಳಿಸಲಾಗಿತ್ತು.

ಕಾಡಿನ ಮಧ್ಯದಲ್ಲಿದ್ದ ತಮ್ಮ ಪ್ರತ್ಯೇಕ ಜಮೀನಿನಲ್ಲಿ ಈತ ರಹಸ್ಯ ನೆಲಮಾಳಿಗೆಯನ್ನು ನಿರ್ಮಿಸಿದ್ದು, ಅಲ್ಲಿ 16 ಕ್ಕೂ ಹೆಚ್ಚು ಯುವತಿಯರನ್ನು ಹಾಗೂ ಇಬ್ಬರು ಪುರುಷರನ್ನು ಕೂಡಿಹಾಕಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾನೆ ಎಂದು ಗ್ಯಾಲಿನಾ ಆರೋಪಿಸಿದ್ದಾರೆ. ಹೈವೇಗಳಲ್ಲಿ ಲಿಫ್ಟ್ ಕೇಳುವವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಸಹಾಯಕ ರೋಗಿಗಳು ಹಾಗೂ ಪ್ರವಾಸಿಗರನ್ನು ಈತ ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿದ್ದ ಎಂದು ಆತನ ಡೈರಿಯ ವಿವರಗಳನ್ನು ಉಲ್ಲೇಖಿಸಿ ಹೇಳಲಾಗಿದೆ.

ಈ ಪ್ರಕರಣದಲ್ಲಿ ಭಾರತದ ನಂಟಿನ ಕುರಿತೂ ಗ್ಯಾಲಿನಾ ಆಘಾತಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ. ಭಾರತೀಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ವಿಕೃತ ಆಲೋಚನೆಯನ್ನು ಜಾನ್ ಹೊಂದಿದ್ದ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಆಯುರ್ವೇದದ ಬಗ್ಗೆ ಆತ ಆಸಕ್ತಿ ತೋರುತ್ತಿದ್ದರೂ, ಅದರ ಹಿಂದೆ ಅಪರಾಧ ಕೃತ್ಯದ ವಿಕೃತಿ ಅಡಗಿತ್ತು ಎಂದು ಆಕೆ ಆರೋಪಿಸಿದ್ದಾರೆ.

ಈ ಕುರಿತು ಕ್ಯಾಲಿಫೋರ್ನಿಯಾದ ಮೆಂಡೊಸಿನೊ ಕೌಂಟಿ ಪೊಲೀಸರು 2023 ರಲ್ಲಿ ತನಿಖೆ ಆರಂಭಿಸಿದ್ದರು. 1970 ರ ದಶಕದ ಬಗೆಹರಿಯದ ಹತ್ಯೆ ಪ್ರಕರಣವೊಂದರ ಮಾದರಿಗೆ ಜಾನ್ ಟ್ರೆಫಿಲ್ ಡಿಎನ್‌ಎ ಹೊಂದಿಕೆಯಾಗುತ್ತದೆಯೇ ಎಂದು ಪರೀಕ್ಷಿಸಲಾಯಿತಾದರೂ, ಯಾವುದೇ ಸಾಕ್ಷ್ಯಗಳು ಪತ್ತೆಯಾಗಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಆತ ವಾಸವಿದ್ದ ಜಾಗಗಳಲ್ಲಿ ಹುಡುಕಾಟ ನಡೆಸಿದಾಗಲೂ ಕೊಲೆಗೆ ಸಂಬಂಧಿಸಿದ ನೇರ ಪುರಾವೆಗಳು ಲಭ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮತ್ತೊಂದೆಡೆ, ತಂದೆಯ ಕರಾಳ ರಹಸ್ಯವನ್ನು ಜಗತ್ತಿಗೆ ತಿಳಿಸಲು ಶ್ರಮಿಸುತ್ತಿದ್ದ ತಮ್ಮ ಭಾವಿ ಪತಿಯೂ ಹತ್ಯೆಯಾಗಿದ್ದು, ತಮಗೂ ಜೀವ ಬೆದರಿಕೆಗಳು ಬರುತ್ತಿರುವುದರಿಂದ ಸದ್ಯ ತಾವು ರಹಸ್ಯ ಸ್ಥಳದಲ್ಲಿ ನೆಲೆಸಿರುವುದಾಗಿ ಗ್ಯಾಲಿನಾ ತಿಳಿಸಿದ್ದಾರೆ. ನೂರಾರು ಜನರ ಸಾವಿಗೆ ಕಾರಣನಾದ ವ್ಯಕ್ತಿಗೆ ಜೀವಿತಾವಧಿಯಲ್ಲೇ ಶಿಕ್ಷೆಯಾಗಬೇಕು ಮತ್ತು ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಸಿಗಬೇಕು ಎಂಬುದು ಅವರ ಏಕೈಕ ಆಗ್ರಹವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?