ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ ಟ್ಯಾಟು ಆರ್ಟಿಸ್ಟಿಗೆ ವಂಚನೆ ಎಸಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಪ್ರಶ್ನೆ ಮಾಡಿದ ಟ್ಯಾಟೂ ಆರ್ಟಿಸ್ಟ್ ಅರ್ಜುನ್ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.
ಕಳೆದ ಎರಡು ವರ್ಷದ ಹಿಂದೆ ಮಹಿಳೆ ಟ್ಯಾಟು ಸ್ಟುಡಿಯೋದಲ್ಲಿ ಟ್ಯಾಟು ಆರ್ಟಿಸ್ಟಿಗೆ ಪರಿಚಯವಾಗಿದ್ದಳು. ಮಹಿಳೆಗೆ ಮದುವೆಯಾಗಿ ಎರಡು ಮಕ್ಕಳು ಇದ್ದಾರೆ ಗಂಡ ಮೃತಪಟ್ಟ ಬಳಿಕ ಮಹಿಳೆ ಅರ್ಜುನ್ ನನ್ನು ಪರಿಚಯ ಮಾಡಿಕೊಂಡಿದ್ದಳು. ಅರ್ಜುನ್ ಕೂಡ ಪತ್ನಿಯೊಂದಿಗೆ ವಿಚ್ಛೇದನ ಆಗಿತ್ತು. ಪರಿಚಯ ಇಬ್ಬರ ನಡುವೆ ಪ್ರೀತಿಗೆ ತಿರುಗಿತ್ತು. ಈ ವೇಳೆ ಅರ್ಜುನ್ ಬಳಿ ಮದುವೆಯಾಗುವುದಾಗಿ ಹೇಳಿದ್ದಾಳೆ. ಮಹಿಳೆಯನ್ನು ನಂಬಿ ಟ್ಯಾಟೂ ಆರ್ಟಿಸ್ಟ್ ಅರ್ಜುನ್ ಹಣ ಕೊಟ್ಟಿದ್ದ.
ಆದರೆ ಕಳೆದ ಒಂದು ವರ್ಷದಿಂದ ಮಹಿಳೆ ಮದುವೆಯನ್ನು ಮುಂದುಡುತ್ತಿದ್ದಳು ಸೆಪ್ಟೆಂಬರ್ 2ರಂದು ಮಹಿಳೆಗೆ ಕರೆ ಮಾಡಿದ್ದ ಅರ್ಜುನ್, ಕರೆ ಸ್ವೀಕರಿಸಿದ ಹಿನ್ನೆಲೆ ಮಹಿಳೆಯ ಮನೆ ಬಳಿ ತೆರಳಿದ್ದಾನೆ. ಈ ವೇಳೆ ಬೇರೆ ವ್ಯಕ್ತಿಯ ಜೊತೆ ಅಶ್ಲೀಲವಾಗಿ ಮಾತನಾಡುತ್ತಿದ್ದನ್ನು ಅರ್ಜುನ್ ನೋಡಿದ್ದಾನೆ. ಪ್ರಶ್ನೆ ಮಾಡಿದಾಗ ಮಾತಿಗೆ ಮಾತು ಬೆಳೆದು ಜಗಳವಾಗಿ ಹಲ್ಲೆ ನಡೆದಿದೆ. ಕಬ್ಬಿಣದ ರಾಡ್ ನಿಂದ ಅರ್ಜುನ್ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಹಲ್ಲೆಯ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಅರ್ಜುನ್ ಅಪಘಾತ ಅಂತ ಜಾಲತಾಣದಲ್ಲಿ ವಿಡಿಯೋ ಮಾಡಿದ್ದ ಮರ್ಯಾದೆಗೆ ಅಂಜಿ ಅಪಘಾತ ಎಂದು ವಿಡಿಯೋ ಮಾಡಿದ್ದ.