LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರು-ಕುಣಿಗಲ್ ನಡುವೆ ಬಿಎಂಟಿಸಿ 'ವಜ್ರ' ಎಸಿ ಬಸ್ ಸೇವೆ ಆರಂಭ: ಹೀಗಿದೆ ಟಿಕೆಟ್ ದರ, ಸಂಚಾರ ವೇಳಾಪಟ್ಟಿ

ಬೆಂಗಳೂರು: ರಾಜಧಾನಿಯ ಸಾರ್ವಜನಿಕ ಸಾರಿಗೆ ವ್ಯಾಪ್ತಿಯನ್ನು ಹೊರವಲಯಕ್ಕೂ ವಿಸ್ತರಿಸುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC), ಬೆಂಗಳೂರು ಮತ್ತು ಕುಣಿಗಲ್ ನಡುವೆ ನೂತನ ಹವಾನಿಯಂತ್ರಿತ (AC) ‘ವಜ್ರ ವಿಸ್ತಾರ’ ಬಸ್ ಸೇವೆಗೆ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಚಾಲನೆ ನೀಡಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಿಂದ ಬಿಎಂಟಿಸಿ ಕಾರ್ಯಾಚರಣೆ ಮಿತಿಯನ್ನು 40 ಕಿಲೋಮೀಟರ್‌ವರೆಗೆ ಸರ್ಕಾರ ವಿಸ್ತರಿಸಿದ ಬೆನ್ನಲ್ಲೇ, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಸಂಸ್ಥೆಯು ಕುಣಿಗಲ್‌ಗೆ ನೂತನ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಿದೆ.

ಪ್ರತಿದಿನ 40 ಟ್ರಿಪ್‌ಗಳ ಕಾರ್ಯಾಚರಣೆ

ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಕುಣಿಗಲ್‌ವರೆಗೆ ಒಟ್ಟು 73 ಕಿ.ಮೀ ದೂರದ ಈ ಮಾರ್ಗಕ್ಕೆ 'V-EX-KGL-1' ಎಂದು ಹೆಸರಿಸಲಾಗಿದೆ. ಈ ಮಾರ್ಗದಲ್ಲಿ ಒಟ್ಟು 8 ಹವಾನಿಯಂತ್ರಿತ ವಜ್ರ ಬಸ್‌ಗಳು ನಿಯೋಜನೆಗೊಂಡಿದ್ದು, ಪ್ರತಿದಿನ 40 ರಿಂದ 45 ನಿಮಿಷಗಳ ಅಂತರದಲ್ಲಿ ಒಟ್ಟು 40 ಸುತ್ತುವಳಿಗಳನ್ನು (ಟ್ರಿಪ್ಸ್) ನಡೆಸಲಿವೆ.

ಪ್ರಮುಖ ನಿಲುಗಡೆ ಹಾಗೂ ಟಿಕೆಟ್ ದರ ಪಟ್ಟಿ

ಕೆಂಪೇಗೌಡ ಬಸ್ ನಿಲ್ದಾಣದಿಂದ ಪ್ರಯಾಣಿಸುವವರಿಗೆ ಜಿಎಸ್‌ಟಿ ಹಾಗೂ ಟೋಲ್ ಶುಲ್ಕ ಒಳಗೊಂಡಂತೆ ನಿಗದಿಪಡಿಸಲಾದ ಪ್ರಮುಖ ನಿಲ್ದಾಣಗಳ ದರ ವಿವರ ಹೀಗಿದೆ:

  • ನವರಂಗ್: ₹25

  • ಗೋವರ್ಧನ್ ಟಾಕೀಸ್: ₹35

  • ಗೊರಗುಂಟೆಪಾಳ್ಯ: ₹40

  • ವಿಡಿಯಾ ಸ್ಟಾಪ್: ₹60

  • ನೆಲಮಂಗಲ ಬೈಪಾಸ್: ₹90

  • ಗುಡೇಮಾರನಹಳ್ಳಿ ಹ್ಯಾಂಡ್‌ಪೋಸ್ಟ್: ₹100

  • ಸೋಲೂರು: ₹105

  • ಮರೂರ್ ಹ್ಯಾಂಡ್‌ಪೋಸ್ಟ್ ಹಾಗೂ ಕುಣಿಗಲ್: ₹120

ಬಸ್ ನಿರ್ಗಮನದ ವೇಳಾಪಟ್ಟಿ

  • ಕೆಂಪೇಗೌಡ ಬಸ್‌ ನಿಲ್ದಾಣದಿಂದ (KBS): ಬೆಳಗ್ಗೆ 07:10, 07:45, 08:20, 08:50, 09:30, 10:10, 10:45, 11:40, ಮಧ್ಯಾಹ್ನ 12:35, 01:30, 02:15, 03:10, 04:00, ಸಂಜೆ 04:50, 05:30, 06:15, 07:05, ರಾತ್ರಿ 08:00, 08:45 ಹಾಗೂ 09:30 ಕ್ಕೆ ಬಸ್‌ಗಳು ಹೊರಡಲಿವೆ.

  • ಕುಣಿಗಲ್‌ನಿಂದ: ಬೆಳಗ್ಗೆ 07:40, 08:10, 08:40, 09:10, 09:50, 10:35, 11:20, ಮಧ್ಯಾಹ್ನ 12:10, 12:50, 01:30, 03:00, 04:00, ಸಂಜೆ 04:30, 05:05, 05:40, 06:15, 06:50, ರಾತ್ರಿ 07:30, 08:10 ಹಾಗೂ 08:55 ಕ್ಕೆ ಬಸ್‌ಗಳು ಬೆಂಗಳೂರಿನತ್ತ ಪ್ರಯಾಣಿಸಲಿವೆ.

'ನಮ್ಮ ಬಿಎಂಟಿಸಿ 2.0' ಆ್ಯಪ್ ಅನಾವರಣ

ಪ್ರಯಾಣಿಕರ ಅನುಕೂಲಕ್ಕಾಗಿ ಇತ್ತೀಚೆಗೆ 'ನಮ್ಮ ಬಿಎಂಟಿಸಿ 2.0 ಮೊಬೈಲ್ ಅಪ್ಲಿಕೇಶನ್' ಅನ್ನು ಅನಾವರಣಗೊಳಿಸಲಾಗಿದೆ. ಈ ಆ್ಯಪ್ ಮೂಲಕ ನೇರ ಬಸ್ ಟ್ರ್ಯಾಕಿಂಗ್, ಡಿಜಿಟಲ್ ಟಿಕೆಟ್, ಬಸ್ ಪಾಸ್, ಜರ್ನಿ ಪ್ಲಾನರ್, ನಮ್ಮ ಮೆಟ್ರೋ-ಬಿಎಂಟಿಸಿ ಏಕೀಕೃತ ಟಿಕೆಟಿಂಗ್ ಮತ್ತು NCMC ಕಾರ್ಡ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಮೆಜೆಸ್ಟಿಕ್ ನಿಲ್ದಾಣಕ್ಕೆ ನವೀಕರಣ ಭಾಗ್ಯ, 4,500 ಇ-ಬಸ್ ಸೇರ್ಪಡೆ

ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಸಮಗ್ರ ಸೌಂದರ್ಯೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕೈಗೊಳ್ಳಲು ಸಂಸ್ಥೆ ಮುಂದಾಗಿದೆ. ಪರಿಸರ ಸಂರಕ್ಷಣೆಯ ಭಾಗವಾಗಿ ಬಿಎಂಟಿಸಿಗೆ ಹೆಚ್ಚುವರಿಯಾಗಿ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಸೇರ್ಪಡೆಗೊಳಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಇದಲ್ಲದೆ, ಸರ್ಕಾರದ 'ಶಕ್ತಿ ಯೋಜನೆ'ಯಡಿ ಇದುವರೆಗೆ ಬರೋಬ್ಬರಿ 26,473.34 ಲಕ್ಷ ಮಹಿಳೆಯರು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದು, 1.65 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಪಡೆದಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?