LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫಾಸ್ಟ್ಯಾಗ್ ಬಳಕೆದಾರರಿಗೆ ಕೇಂದ್ರದ ಗುಡ್‌ನ್ಯೂಸ್: ಬ್ಯಾಂಕ್ ಬದಲಾವಣೆ ಇನ್ಮುಂದೆ ಇನ್ನಷ್ಟು ಸುಲಭ

ದೇಶದ ಕೋಟ್ಯಂತರ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಫಾಸ್ಟ್‌ಟ್ಯಾಗ್‌ಗೆ (FASTag) ಸಂಬಂಧಿಸಿದಂತೆ ವಾಹನ ಮಾಲೀಕರಿಗೆ ಅನುಕೂಲವಾಗುವ ಮಹತ್ವದ ಬದಲಾವಣೆಯನ್ನು ತರಲಾಗಿದ್ದು, ಇನ್ಮುಂದೆ ಬ್ಯಾಂಕ್ ಬದಲಾವಣೆ ಇನ್ನಷ್ಟು ಸರಳವಾಗಲಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ಡಿಜಿಟಲ್ ಮೂಲಕ ಪಾವತಿಸಲು ಫಾಸ್ಟ್‌ಟ್ಯಾಗ್ ನೆರವಾಗುತ್ತಿದೆ. ವಾಹನದ ಮೇಲಿರುವ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಸ್ಕ್ಯಾನ್ ಆಗುತ್ತಿದ್ದಂತೆ ಟೋಲ್ ಶುಲ್ಕ ಆಟೋಮ್ಯಾಟಿಕ್ ಆಗಿ ಕಟ್ ಆಗುತ್ತದೆ. ಆದರೆ, ಇದುವರೆಗೆ ಒಂದು ಬ್ಯಾಂಕ್‌ನ ಫಾಸ್ಟ್‌ಟ್ಯಾಗ್ ಹೊಂದಿರುವವರು ಬೇರೆ ಬ್ಯಾಂಕ್‌ಗೆ ಬದಲಾಯಿಸಬೇಕೆಂದರೆ, ಹಳೆಯ ಸ್ಟಿಕ್ಕರ್ ತೆಗೆದು ಹೊಸ ಬ್ಯಾಂಕ್‌ನ ಸ್ಟಿಕ್ಕರ್ ಅಂಟಿಸಬೇಕಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಕೇಂದ್ರ ಸರ್ಕಾರ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದೆ.

ಇನ್ಮುಂದೆ ಬ್ಯಾಂಕ್ ಬದಲಾವಣೆ ತೀರಾ ಸುಲಭ:

ಈಗಿರುವ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಮೂಲಕವೇ ಬೇರೆ ಬ್ಯಾಂಕ್‌ಗೆ ಸುಲಭವಾಗಿ ಬದಲಾಯಿಸಿಕೊಳ್ಳಬಹುದು. ಇದಕ್ಕಾಗಿ ಕೇಂದ್ರ ಸರ್ಕಾರ 'ಫಾಸ್ಟ್‌ಟ್ಯಾಗ್ ಪೋರ್ಟಬಿಲಿಟಿ' (FASTag Portability) ಸೇವೆಯನ್ನು ಜಾರಿಗೆ ತಂದಿದೆ. 'ಫಾಸ್ಟ್‌ಟ್ಯಾಗ್ ಒನ್' ಹೆಸರಿನ ಈ ನೂತನ ಪೋರ್ಟಬಿಲಿಟಿ ವ್ಯವಸ್ಥೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ ಸಮಾವೇಶದಲ್ಲಿ ಚಾಲನೆ ನೀಡಿದ್ದಾರೆ.

ಈ ವ್ಯವಸ್ಥೆಯಿಂದಾಗಿ ಬೇರೆ ಬ್ಯಾಂಕ್‌ಗೆ ಬದಲಾಗಲು ಹಳೆಯ ಖಾತೆಯನ್ನು ಕ್ಲೋಸ್ ಮಾಡುವ ಅಗತ್ಯವಿಲ್ಲ. ವಾಹನ ಮಾಲೀಕರ ಟ್ಯಾಗ್ ಐಡಿ, ವಾಹನ ನೋಂದಣಿ ಸಂಖ್ಯೆ ಮತ್ತು ಹಳೆಯ ಸ್ಟಿಕ್ಕರ್ ಹಾಗೆಯೇ ಮುಂದುವರಿಯುತ್ತದೆ. ಹಳೆಯ ಸ್ಟಿಕ್ಕರ್ ಬದಲಾಯಿಸದೆಯೇ ಅದೇ ಸ್ಟಿಕ್ಕರ್ ಮೇಲೆ ಹೊಸ ಬ್ಯಾಂಕ್ ಸೇವೆ ಪಡೆಯಬಹುದು. ಭಾರತೀಯ ಹೆದ್ದಾರಿಗಳ ನಿರ್ವಹಣಾ ಸಂಸ್ಥೆ (IHMCL) ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜಂಟಿಯಾಗಿ ಈ ನೂತನ ಸೇವೆಯನ್ನು ಅಭಿವೃದ್ಧಿಪಡಿಸಿವೆ.

ಬೇರೆ ಬ್ಯಾಂಕ್‌ಗೆ ಬದಲಾಯಿಸುವುದು ಹೇಗೆ?

ಮೊದಲು ನಿಮ್ಮ ಮೊಬೈಲ್‌ನಲ್ಲಿ 'ರಾಜಮಾರ್ಗ್ ಯಾತ್ರಾ' (Rajmarg Yatra) ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಆ್ಯಪ್‌ನಲ್ಲಿ ಅರ್ಹತೆ ಪರಿಶೀಲನೆ (Eligibility Check), ವೆರಿಫಿಕೇಶನ್ ಪ್ರಕ್ರಿಯೆ ಮತ್ತು ಅನುಮತಿಯ ನಂತರ ನಿಮಗೆ ಇಷ್ಟವಾದ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಳ್ಳಿ.

ನಂತರ ನಿಮ್ಮ ಫಾಸ್ಟ್‌ಟ್ಯಾಗ್ ಸೇವೆಗಳು ಹೊಸ ಬ್ಯಾಂಕ್‌ಗೆ ವರ್ಗಾವಣೆಯಾಗುತ್ತವೆ.

ಹಳೆಯ ಫಾಸ್ಟ್‌ಟ್ಯಾಗ್ ಖಾತೆಯಲ್ಲಿರುವ ಬ್ಯಾಲೆನ್ಸ್, ಬಾಕಿ ವಹಿವಾಟುಗಳು ಹಾಗೂ ಖಾತೆ ಮುಕ್ತಾಯದ ಪ್ರಕ್ರಿಯೆಗಳನ್ನು ಹಿಂದಿನ ಬ್ಯಾಂಕ್ ನೋಡಿಕೊಳ್ಳುತ್ತದೆ. ಫಾಸ್ಟ್‌ಟ್ಯಾಗ್ ಬ್ಯಾಂಕಿಂಗ್ ಸೇವೆಗಳಲ್ಲಿ ಎದುರಾಗುತ್ತಿದ್ದ ತೊಂದರೆಗಳನ್ನು ನಿವಾರಿಸಲು ಮತ್ತು ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸಲು ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!