LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಲ ಪಡೆದ ವ್ಯಕ್ತಿ ಮರುಪಾವತಿ ಮಾಡದಿದ್ದರೆ ಯಾರು ಕಟ್ಟಬೇಕು? ಬ್ಯಾಂಕ್ ನಿಯಮಗಳು ಏನು ಹೇಳುತ್ತವೆ?

ಆರ್ಥಿಕ ಅಗತ್ಯಗಳಿಗಾಗಿ ಬ್ಯಾಂಕ್‌ಗಳಿಂದ ಸಾಲ ಪಡೆಯುವಾಗ ಹಲವರಿಗೆ ಜಾಮೀನುದಾರರ (ಗ್ಯಾರಂಟರ್) ಅವಶ್ಯಕತೆ ಇರುತ್ತದೆ. ಆದರೆ, ಬೇರೆಯವರ ಸಾಲಕ್ಕೆ ಜಾಮೀನು ಸಹಿ ಹಾಕಲು ಹೆಚ್ಚಿನವರು ಹಿಂದೇಟು ಹಾಕುತ್ತಾರೆ. ಸಾಲ ಪಡೆದ ವ್ಯಕ್ತಿ ಸರಿಯಾಗಿ ಹಣ ಮರುಪಾವತಿ ಮಾಡದಿದ್ದರೆ ಆ ಹೊರೆ ಎಲ್ಲಿ ತಮ್ಮ ಮೇಲೆಯೇ ಬೀಳುತ್ತದೆಯೋ ಎಂಬ ಭಯವೇ ಇದಕ್ಕೆ ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ, ಸಾಲ ಮರುಪಾವತಿಯಾಗದಿದ್ದಾಗ ಗ್ಯಾರಂಟರ್‌ಗಳ ಮೇಲೆ ಬೀರುವ ಪರಿಣಾಮಗಳೇನು ಮತ್ತು ನಿಯಮಗಳೇನು ಎಂಬ ಸಂಪೂರ್ಣ ವಿವರ ಇಲ್ಲಿದೆ.

ಸಾಲ ಪಡೆದ ವ್ಯಕ್ತಿಯು ನಿಗದಿತ ಸಮಯಕ್ಕೆ ಇಎಂಐ ಅಥವಾ ಸಾಲವನ್ನು ಮರುಪಾವತಿ ಮಾಡದಿದ್ದರೆ, ಆ ಸಂಪೂರ್ಣ ಜವಾಬ್ದಾರಿ ಜಾಮೀನುದಾರನ ಹೆಗಲೇರುತ್ತದೆ. ಕೇವಲ ಹೆಸರಿಗೆ ಸಹಿ ಹಾಕಿದರೆ ಮುಗಿಯಿತು ಅಂದುಕೊಂಡರೆ ಅದು ತಪ್ಪು ಕಲ್ಪನೆ. ಭಾರತೀಯ ಒಪ್ಪಂದ ಕಾಯ್ದೆಯ (Indian Contract Act) ಸೆಕ್ಷನ್ 128ರ ಪ್ರಕಾರ, ಸಾಲಗಾರನಷ್ಟೇ ಜಾಮೀನುದಾರನಿಂದಲೂ ಹಣ ವಸೂಲಿ ಮಾಡುವ ಸಂಪೂರ್ಣ ಹಕ್ಕು ಬ್ಯಾಂಕ್‌ಗಳಿಗೆ ಇರುತ್ತದೆ. ಅಸಲು ಮೊತ್ತ ಮಾತ್ರವಲ್ಲದೆ, ಅದಕ್ಕೆ ತಗಲುವ ಬಡ್ಡಿ ಮತ್ತು ದಂಡದ ಮೊತ್ತವನ್ನೂ ಜಾಮೀನುದಾರನೇ ಭರಿಸಬೇಕಾಗುತ್ತದೆ.

ಇದರಿಂದ ಜಾಮೀನುದಾರರ ಕ್ರೆಡಿಟ್ ಸ್ಕೋರ್ (CIBIL) ತೀವ್ರವಾಗಿ ಕುಸಿಯುತ್ತದೆ. ಪರಿಣಾಮವಾಗಿ, ಭವಿಷ್ಯದಲ್ಲಿ ಗ್ಯಾರಂಟರ್ ಸ್ವತಃ ಗೃಹ ಸಾಲ, ವಾಹನ ಸಾಲ ಅಥವಾ ವೈಯಕ್ತಿಕ ಸಾಲ ಪಡೆಯಲು ಅರ್ಜಿ ಸಲ್ಲಿಸಿದರೆ ಬ್ಯಾಂಕ್‌ಗಳು ಅದನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಜಾಮೀನು ಸಹಿ ಹಾಕುವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆಗಳು:

ಸಾಲ ಪಡೆಯುತ್ತಿರುವ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ, ಆದಾಯದ ಮೂಲ ಮತ್ತು ಹಿಂದಿನ ಸಾಲ ಮರುಪಾವತಿಯ ಇತಿಹಾಸವನ್ನು ಕೂಲಂಕಷವಾಗಿ ಪರಿಶೀಲಿಸಿ.

ಒಟ್ಟು ಸಾಲದ ಮೊತ್ತ, ಬಡ್ಡಿದರ ಮತ್ತು ತಿಂಗಳ ಇಎಂಐ ವಿವರಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

ನೀವು ನೀಡುತ್ತಿರುವ ಗ್ಯಾರಂಟಿ ಸೀಮಿತ ಮೊತ್ತಕ್ಕೋ ಅಥವಾ ಸಂಪೂರ್ಣ ಸಾಲದ ಹೊಣೆಗಾರಿಕೆಗೋ ಎಂಬುದನ್ನು ಖಚಿತಪಡಿಸಿಕೊಳ್ಳಿ.

ದಾಖಲೆಗಳನ್ನು ಸರಿಯಾಗಿ ಓದದೆ, ಕೇವಲ ಸ್ನೇಹ ಅಥವಾ ಪರಿಚಯದ ಮುಲಾಜಿಗೆ ಬಿದ್ದು ಸಹಿ ಹಾಕಬೇಡಿ.

ಸಾಲ ಪಡೆದ ವ್ಯಕ್ತಿಗೆ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವ ಸಾಮರ್ಥ್ಯವಿಲ್ಲ ಎಂಬ ಅನುಮಾನವಿದ್ದರೆ, ಅಂಥವರಿಗೆ ಗ್ಯಾರಂಟರ್ ಆಗದಿರುವುದೇ ಆರ್ಥಿಕ ಸುರಕ್ಷತೆಯ ದೃಷ್ಟಿಯಿಂದ ಉತ್ತಮ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!