LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

೧.೮ ಕೋಟಿ ರೂ. ಮನೆ ಮಾರಿ ಡುಕಾಟಿ ಬೈಕ್ ಖರೀದಿಸಿದ ಬೆಂಗಳೂರು ಉದ್ಯಮಿ: ವೈರಲ್ ಆಯ್ತು ‘ದುಕಾನ್’ ಸ್ಥಾಪಕನ ಪೋಸ್ಟ್

ತಮ್ಮ ಅಪಾರ ಮೌಲ್ಯದ ಮನೆಯನ್ನು ಮಾರಿ ದುಬಾರಿ ಡುಕಾಟಿ ಬೈಕ್ ಖರೀದಿಸಿದ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಉದ್ಯಮಿಯೊಬ್ಬರ ನಿರ್ಧಾರ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ‘ದುಕಾನ್’ ಆನ್‌ಲೈನ್ ಸಂಸ್ಥೆಯ ಸಹ-ಸಂಸ್ಥಾಪಕ ಸುಭಾಷ್ ಚೌಧರಿ ಅವರು ಮುಂಬೈನಲ್ಲಿದ್ದ ತಮ್ಮ ಮನೆಯನ್ನು ಮಾರಿ, ‘ಡುಕಾಟಿ ಎಕ್ಸ್‌ಡೈವೆಲ್’ ಬೈಕ್ ಖರೀದಿಸಿದ ಕಾರಣವನ್ನು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಹಂಚಿಕೊಂಡಿದ್ದಾರೆ.

೨೦೧೮ ರಲ್ಲಿ ಮುಂಬೈನಲ್ಲಿ ೧.೮ ಕೋಟಿ ರೂಪಾಯಿ ನೀಡಿ ಮನೆ ಖರೀದಿಸಿದ್ದಾಗಿ ತಿಳಿಸಿರುವ ಸುಭಾಷ್, ಉದ್ಯಮದ ನಿಮಿತ್ತ ಬೆಂಗಳೂರಿಗೆ ಬಂದ ಮೇಲೂ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ರೂಪಾಯಿ ಇಎಮ್‌ಐ ಪಾವತಿಸುತ್ತಿದ್ದರು. ಹೂಡಿಕೆಯ ಹೆಸರಿನಲ್ಲಿ ಭವಿಷ್ಯಕ್ಕಾಗಿ ಹಣ ಉಳಿಸಲು ಹೋಗಿ ವರ್ತಮಾನದ ಸಂತೋಷವನ್ನು ಮುಂದೂಡುತ್ತಿರುವುದು ಅವರಿಗೆ ಅರಿವಾಯಿತು. ಉದ್ಯಮ ನಿರ್ವಹಣೆಯ ನಿರಂತರ ಒತ್ತಡ ಮತ್ತು ಚಿಂತೆಯಿಂದ ಹೊರಬರಲು ೨೦ ವರ್ಷಗಳ ಗೃಹ ಸಾಲಕ್ಕಿಂತ ತಮಗೆ ಮಾನಸಿಕ ನೆಮ್ಮದಿ ಮುಖ್ಯವೆನಿಸಿತು ಎಂದು ಅವರು ಹೇಳಿದ್ದಾರೆ.

ಅಂತಿಮವಾಗಿ ಆ ಮನೆಯನ್ನು ಮಾರಿ ೧೨೬೨ ಸಿಸಿ ಸಾಮರ್ಥ್ಯದ ಡುಕಾಟಿ ಬೈಕ್ ಖರೀದಿಸಿದ ಸುಭಾಷ್, ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ರೌಂಡ್ಸ್ ಹೊಡೆಯುವಾಗ ಸಿಗುವ ಸಂತಸ ವರ್ಣಿಸಲಸಲಸಾಧ್ಯ ಎಂದಿದ್ದಾರೆ. ರಸ್ತೆಯಲ್ಲಿ ಸಿಕ್ಕ ಹಿರಿಯ ನಾಗರಿಕರೊಬ್ಬರು ಮತ್ತು ಬೈಕ್ ಪ್ರೇಮಿಯೊಬ್ಬರಿಗೆ ತಮ್ಮ ಬೈಕ್ ಓಡಿಸಲು ಅವಕಾಶ ನೀಡಿದ ಅನುಭವವನ್ನು ಹಂಚಿಕೊಂಡಿರುವ ಅವರು, ಬಯಸಿದ ಕನಸುಗಳನ್ನು ಈಡೇರಿಸಿಕೊಳ್ಳಲು ವಯಸ್ಸಾಗುವವರೆಗೆ ಕಾಯುವುದು ಬುದ್ಧಿವಂತಿಕೆಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುಭಾಷ್ ಅವರ ಈ ಪೋಸ್ಟ್ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಜೀವನ ಎಂದರೆ ಕ್ಷಣಗಳನ್ನು ಆನಂದಿಸುವುದು ಮತ್ತು ಮನಸ್ಸಿಗೆ ಸಂತೋಷ ನೀಡುವ ವಿಷಯಗಳಲ್ಲಿ ಹೂಡಿಕೆ ಮಾಡುವುದು ಎಂದು ಹಲವರು ಕಮೆಂಟ್ ಮಾಡಿದ್ದಾರೆ.

“>

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!