LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘ವಾಟ್ಸಾಪ್‌’ನಲ್ಲೇ ಕೆಲವೇ ಸೆಕೆಂಡುಗಳಲ್ಲಿ ‘ಆಧಾರ್ ಕಾರ್ಡ್’ ಡೌನ್‌ಲೋಡ್ ಮಾಡಬಹುದು..! ಇಲ್ಲಿದೆ ಹಂತ-ಹಂತದ ಮಾಹಿತಿ

ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಅಗತ್ಯವಾದ ಗುರುತಿನ ದಾಖಲೆ. ಇದರಿಲ್ಲದೆ ದೇಶದಲ್ಲಿ ಅನೇಕ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಪಡೆಯಲು ಸಾಧ್ಯವಿಲ್ಲ. ಸರ್ಕಾರದ ವಿವಿಧ ಯೋಜನೆಗಳು, ಸಬ್ಸಿಡಿಗಳು, ರಿಯಾಯಿತಿಗಳ ಲಾಭ ಪಡೆಯಲು ಆಧಾರ್ ಕಡ್ಡಾಯವಾಗಿದೆ. ಅಲ್ಲದೆ, ವಿವಿಧ ಸೇವೆಗಳಿಗಾಗಿ ಗುರುತಿನ ದೃಢೀಕರಣ ದಾಖಲೆಯಾಗಿ ಸಹ ಇದನ್ನು ಬಳಸಲಾಗುತ್ತದೆ.

ಭಾರತದಲ್ಲಿ ಅತ್ಯಂತ ಪ್ರಮುಖ ಗುರುತಿನ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಒಂದಾಗಿದೆ. ಸರ್ಕಾರಿ ಸೇವೆಗಳು, ಬ್ಯಾಂಕಿಂಗ್ ವ್ಯವಹಾರಗಳು, ಹಣಕಾಸು ಚಟುವಟಿಕೆಗಳು ಹಾಗೂ ದಿನನಿತ್ಯದ ಗುರುತಿನ ಪರಿಶೀಲನೆಗೆ ಇದು ಅವಶ್ಯಕ. ಹೀಗಾಗಿ ಆಧಾರ್ ಕಾರ್ಡ್ ಅನ್ನು ಯಾವಾಗಲೂ ನಮ್ಮೊಂದಿಗೆ ಇಟ್ಟುಕೊಳ್ಳುವುದು ಮುಖ್ಯ. ಆದರೆ ಕೆಲವೊಮ್ಮೆ ಆಧಾರ್ ಕಾರ್ಡ್ ಮನೆಯಲ್ಲಿ ಮರೆತುಬಿಡುವುದು ಅಥವಾ ಮೊಬೈಲ್‌ನಲ್ಲಿ ಅದರ ಡಿಜಿಟಲ್ ಪ್ರತಿ ಇಲ್ಲದಿರುವ ಪರಿಸ್ಥಿತಿ ಎದುರಾಗಬಹುದು.

ಇಂತಹ ಸಂದರ್ಭದಲ್ಲಿ ಪೋರ್ಟಲ್ ಅಥವಾ ಡಿಜಿಲಾಕರ್ ಆ್ಯಪ್ ತೆರೆಯುವ ಅಗತ್ಯವೂ ಇಲ್ಲ. ಕೇಂದ್ರ ಸರ್ಕಾರದ ಅಧಿಕೃತ MyGov Helpdesk ವಾಟ್ಸಾಪ್ ಚಾಟ್‌ಬಾಟ್ ಬಳಸಿ ಕೆಲವೇ ಕ್ಷಣಗಳಲ್ಲಿ ವಾಟ್ಸಾಪ್‌ನಲ್ಲೇ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಈ ಸೌಲಭ್ಯದಿಂದ ಯಾವುದೇ ಹೆಚ್ಚುವರಿ ಆ್ಯಪ್ ಇನ್‌ಸ್ಟಾಲ್ ಮಾಡದೆ ಸುರಕ್ಷಿತವಾಗಿ ಆಧಾರ್ ಸೇರಿದಂತೆ ಇತರೆ ಪ್ರಮುಖ ದಾಖಲೆಗಳನ್ನೂ ಪಡೆಯಬಹುದು.

ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಬೇಕಾಗುವವು

  • ಆಧಾರ್‌ಗೆ ಲಿಂಕ್ ಆಗಿರುವ ನೋಂದಾಯಿತ ಮೊಬೈಲ್ ಸಂಖ್ಯೆ
  • ಸಕ್ರಿಯ ಡಿಜಿಲಾಕರ್ (DigiLocker) ಖಾತೆ
  • ನಿಮ್ಮ ಮೊಬೈಲ್‌ನಲ್ಲಿ MyGov Helpdesk ವಾಟ್ಸಾಪ್ ಸಂಖ್ಯೆ 9013151515 ಸೇವ್ ಮಾಡಿರಬೇಕು.

ವಾಟ್ಸಾಪ್ ಮೂಲಕ ಆಧಾರ್ ಡೌನ್‌ಲೋಡ್ ಮಾಡುವ ವಿಧಾನ

  • ಮೊದಲು 9013151515 ಸಂಖ್ಯೆಯನ್ನು MyGov Helpdesk ಹೆಸರಿನಲ್ಲಿ ಸೇವ್ ಮಾಡಿ.
  • ವಾಟ್ಸಾಪ್ ತೆರೆಯಿರಿ ಮತ್ತು ಈ ಸಂಖ್ಯೆಗೆ ಚಾಟ್ ಆರಂಭಿಸಿ.
  • “ನಮಸ್ತೆ” ಅಥವಾ “Hi” ಎಂದು ಸಂದೇಶ ಕಳುಹಿಸಿ.
  • ನಂತರ “DigiLocker Services” ಆಯ್ಕೆಯನ್ನು ಆರಿಸಿ.
  • ನಿಮಗೆ ಈಗಾಗಲೇ DigiLocker ಖಾತೆ ಇದ್ದರೆ ಮುಂದುವರಿಯಿರಿ. ಇಲ್ಲದಿದ್ದರೆ ಮೊದಲು ಖಾತೆ ತೆರೆಯಿರಿ.
  • ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.
  • ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ದಾಖಲಿಸಿ.
  • ಪರಿಶೀಲನೆ ಪೂರ್ಣಗೊಂಡ ಬಳಿಕ ಚಾಟ್‌ಬಾಟ್ ನಿಮ್ಮ DigiLocker ಖಾತೆಯಲ್ಲಿರುವ ದಾಖಲೆಗಳ ಪಟ್ಟಿಯನ್ನು ತೋರಿಸುತ್ತದೆ.
  • ಪಟ್ಟಿಯಿಂದ ಆಧಾರ್ ಕಾರ್ಡ್ ಆಯ್ಕೆಯನ್ನು ಆರಿಸಿ.
  • ನಂತರ ನಿಮ್ಮ ಆಧಾರ್ ಕಾರ್ಡ್ PDF ರೂಪದಲ್ಲಿ ವಾಟ್ಸಾಪ್ ಚಾಟ್‌ಗೆ ಬರುತ್ತದೆ.
  • PDF ಅನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯವಿದ್ದಾಗ ಬಳಸಬಹುದು.
Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಕಲ್ಯಾಣ ಕರ್ನಾಟಕ ಜನತೆಗೆ ಗುಡ್ ನ್ಯೂಸ್: KKRTC ಗೆ 400 ಹೊಸ ಬಸ್ ಮಂಜೂರುಮನೆಗಳ್ಳತನ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರು ವಶಕ್ಕೆ: ಲಕ್ಷಾಂತರ ರೂ. ಮೌಲ್ಯದ ಆಭರಣ ವಶಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ BNP ಅಭ್ಯರ್ಥಿ ಮಿರ್ಜಾ ಫಖ್ರುಲ್ ಇಸ್ಲಾಂ ಅಲಂಗೀರ್ ಆಯ್ಕೆBREAKING: ಲಡಾಖ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಕೇಂದ್ರ ನಿರ್ಧಾರ: ಅಮಿತ್ ಶಾ ಘೋಷಣೆಅನುಮತಿ ಇಲ್ಲದೆ ಸಚಿವ ಕೃಷ್ಣ ಬೈರೇಗೌಡರ ಪೋಸ್ಟರ್ ಅಂಟಿಸಿದ್ದ ವ್ಯಕ್ತಿ ವಿರುದ್ಧ ಕೇಸ್ ದಾಖಲುಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿKPME ಉಲ್ಲಂಘನೆ: ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ದಂಡ, ಪರವಾನಗಿ ರದ್ದುಮೋದಿ ದೇವರಿಗೆ ಪೂಜೆ: ಭಕ್ತರಿಂದ ‘ಜೈ ಜೈ ಮೋದಿ, ಹರ್ ಹರ್ ಮೋದಿ’ ಘೋಷಣೆ; ದೆಹಲಿ ಪ್ರೆಸ್ ಕ್ಲಬ್‌ನಲ್ಲಿ ‘ಮೋದಿ ಚಾಲೀಸಾ’ ಕಾರ್ಯಕ್ರಮ!ತಪ್ಪಾಯ್ತು ಕ್ಷಮಿಸಿಬಿಡಿ: ರಸ್ತೆ ಮುಚ್ಚಿದ್ದಕ್ಕೆ ಭಾರತೀಯ ಸೇನೆಗೆ ‘ನಾನು GenZ’ ಎಚ್ಚರಿಕೆ ನೀಡಿದ್ದ ಯುವತಿಯಿಂದ ಕ್ಷಮೆಯಾಚನೆಲೋಕಸಭಾ ಕ್ಷೇತ್ರ ಹೆಚ್ಚಳ ಮಾಡಬಾರದು; 1971ರ ಜನಸಂಖ್ಯೆ ಆಧಾರವನ್ನು ಗೌರವಿಸಬೇಕು ಸಿಎಂ ಡಿ.ಕೆ.ಶಿವಕುಮಾರ್ ಮನವಿ