LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೊಹರಂ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಹರಿದ ನೆತ್ತರು: ಗಂಡು ಮಗು ಹುಟ್ಟಿದ್ದಕ್ಕೆ ಪಾರ್ಟಿ ಕೇಳಿದ ಗೆಳೆಯನನ್ನೇ ಕೊಂದ ಸ್ನೇಹಿತ

ಬೆಳಗಾವಿ: ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡು ಮಗು ಹುಟ್ಟಿದ್ದಕ್ಕೆ ಪಾರ್ಟಿ ಕೇಳಿದ ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಘಟನೆ ನಡೆದಿದೆ.

ವಣ್ಣೂರ ಗ್ರಾಮದ ಹನುಮಂತಪ್ಪ ಇಟಗಿ ಕೊಲೆಯಾದ ವ್ಯಕ್ತಿ: ಗೆಳೆಯ ಹನುಮಂತನನ್ನು ಕೊಲೆ ಮಾಡಿ ಆರೋಪಿ ವಿಶ್ವನಾಥ್ ಪರಾರಿಯಾಗಿದ್ದ. ಮೊಹರಂ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ನೆತ್ತರು ಹರಿದಿದೆ.

ಗಂಡು ಮಗು ಜನಿಸಿದ್ದಕ್ಕೆ ಸ್ನೇಹಿತ ಹನುಮಂತಪ್ಪ ಇಟಗಿ ಪಾರ್ಟಿ ಕೇಳಿದ್ದ. ಮದ್ಯದ ಅಮಲಿನಲ್ಲಿ ಗ್ರಾಮದ ಕಟ್ಟೆಯ ಮೇಲೆ ಕುಳಿತು ಇಬ್ಬರೂ ಹರಟೆ ಹೊಡೆಯುತ್ತಿದ್ದರು. ಪಾರ್ಟಿ ಕೊಡಿಸುವ ವಿಚಾರಕ್ಕೆ ಸ್ನೇಹಿತರ ನಡುವೆ ಮಾತುಕತೆ ನಡೆದಿತ್ತು. ಈ ವೇಳೆ ವಿಶ್ವನಾಥನ ಕಣ್ಣಿಗೆ ಹನುಮಂತಪ್ಪನ ಬೆರಳು ರಭಸವಾಗಿ ತಾಗಿದೆ. ಇದೇ ಸಿಟ್ಟಿನಿಂದ ಹನುಮಂತಪ್ಪನ ತಲೆಗೆ ವಿಶ್ವನಾಥ್ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಬಿದ್ದು ಹನುಮಂತಪ್ಪ ಮೃತಪಟ್ಟಿದ್ದಾನೆ. ವಿಶ್ವನಾಥ್ ನನ್ನು ಪೊಲೀಸರು ಬಂಧಿಸಿದ್ದಾರೆ. ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಬಿಡದಿ ಟೌನ್ ಶಿಪ್ ವಿರೋಧಿ ಹೋರಾಟ ರಾಜ್ಯವ್ಯಾಪಿ ರೈತ ಚಳವಳಿಯಾಗಿ ರೂಪಿಸಲು HDK ಮಾಸ್ಟರ್ ಪ್ಲ್ಯಾನ್ಮಾದಕ ವಸ್ತು ವಿರುದ್ಧ ಸಮರ: ಸಾಗಾಣೆ, ಬಳಕೆ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ದಿಟ್ಟ ಕ್ರಮಮಕ್ಕಳಿಗಾಗಿ ಹೆಲ್ತಿ ಅಂಡ್ ಟೇಸ್ಟಿ ಬ್ರೇಕ್‌ಫಾಸ್ಟ್: ಸುಲಭವಾಗಿ ಮಾಡಿ ರಾಗಿ ಚಾಕೊಲೇಟ್ ಪ್ಯಾನ್‌ಕೇಕ್ಯುಕೆಯಲ್ಲಿ ಓದುತ್ತಿದ್ದ ತೆಲಂಗಾಣದ ವಿದ್ಯಾರ್ಥಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ ಬೆನ್ನಲ್ಲೇ ನಿಗೂಢ ಸಾವುಧರ್ಮಗುರು ಸಲಹೆಯಂತೆ RSS ನೋಂದಣಿ ಮಾಡಿದರೆ ಆರೋಪಗಳಿಂದ ಮುಕ್ತವಾಗಬಹುದು: ಪ್ರಿಯಾಂಕ್ ಖರ್ಗೆLPG ಗ್ಯಾಸ್ ಸಿಲಿಂಡರ್ ಸಬ್ಸಿಡಿ ತ್ಯಜಿಸಿದ ರೀತಿಯಲ್ಲೇ ರಾಜ್ಯದಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ‘ಗಿವ್ ಇಟ್ ಅಪ್’ಗೆ ಚಿಂತನೆಮೊಹರಂ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಹರಿದ ನೆತ್ತರು: ಗಂಡು ಮಗು ಹುಟ್ಟಿದ್ದಕ್ಕೆ ಪಾರ್ಟಿ ಕೇಳಿದ ಗೆಳೆಯನನ್ನೇ ಕೊಂದ ಸ್ನೇಹಿತಸೀಶೆಲ್ಸ್ ಪ್ರವಾಸದಲ್ಲಿ ವಿಶ್ವದ ಅತ್ಯಂತ ಹಿರಿಯ ಜೀವಿ 194 ವರ್ಷದ ಜೋನಾಥನ್ ಆಮೆ ವೀಕ್ಷಿಸಿದ ಪ್ರಧಾನಿ ಮೋದಿರಾಜ್ಯದ ಬಸ್ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನತೆಯ ಹೃದಯ‌ಸಿಂಹಾಸನ ಶಾಶ್ವತ: ಸಿದ್ಧರಾಮಯ್ಯ