LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡ್ರಗ್ಸ್ ಪ್ರಕರಣ: ರಾಜಧಾನಿ ಬೆಂಗಳೂರಿಗೆ ಮೊದಲ ಸ್ಥಾನ; ಎರಡು ಮತ್ತು ಮೂರನೇ ಸ್ಥಾನದಲ್ಲಿ ಮಂಗಳೂರು ಹಾಗೂ ಶಿವಮೊಗ್ಗ

ಬೆಂಗಳೂರು: ರಾಜ್ಯದಲ್ಲಿ ಮಾದಕ ವಸ್ತುಗಳ ಸೇವನೆ-ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಡ್ರಗ್ಸ್ ದಂಧಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಆದರೆ ಆದರೆ ನಶೆ ಲೋಕದ ಕಬಂದಬಾಹು ಜಿಲ್ಲೆ ಜಿಲ್ಲೆಗಳಿಗೂ ವ್ಯಾಪಿಸಿದೆ.

ಕಳೆದ ಐದು ತಿಂಗಳಲ್ಲಿ ಪೊಲೀಸರು ನಡೆಸಿರುವ ಡ್ರಗ್ಸ್ ಕಾರ್ಯಾಚಾರಣೆ ಅಂಕಿ-ಅಂಶಗಳ ಪ್ರಕಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಮಾದಕವಸ್ತುಗಳು ಪತ್ತೆ ಹಾಗೂ ಕಾರ್ಯಾಚರಣೆ ನಡೆದಿದ್ದು ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಕಡಲ ನಗರಿ ಮಂಗಳೂರು ಎರಡನೇ ಸ್ಥಾನದಲ್ಲಿ ಹಾಗೂ ಶಿವಮೊಗ್ಗ ಮೂರನೇ ಸ್ಥಾನದಲ್ಲಿದೆ.

​2026ರ ಜನವರಿಯಲ್ಲಿ ಅತಿ ಹೆಚ್ಚು ಮಾಅದಕ ವಸ್ತುಗಳ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ 841 ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮೈಸೂರು 93 ಮತ್ತು ಕರ್ನಾಟಕ ರೈಲ್ವೆ ಪೊಲೀಸ್ 63 ವ್ಯಾಪ್ತಿಯಲ್ಲಿ ಗಮನಾರ್ಹ ಪ್ರಕರಣಗಳು ದಾಖಲಾಗಿವೆ. ದಾವಣಗೆರೆಯಲ್ಲಿ 37 ಪ್ರಕರಣಗಳು ಪತ್ತೆಯಾಗಿವೆ.

​ಫೆಬ್ರುವರಿಯಲ್ಲಿ ಪ್ರಕರಣಗಳ ಸಂಖ್ಯೆ ಬೆಂಗಳೂರು ನಗರದಲ್ಲಿ 441 ಪ್ರಕರಣಗಳು ದಾಖಲಾಗಿವೆ. ಮಂಗಳೂರು 66 ಮತ್ತು ಶಿವಮೊಗ್ಗ 52 ನಂತರದ ಸ್ಥಾನದಲ್ಲಿವೆ.

ಮಾರ್ಚ್ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ 344 ಪ್ರಕರಣಗಳು ದಾಖಲಾಗಿವೆ. ಶಿವಮೊಗ್ಗದಲ್ಲಿ ಬರೋಬ್ಬರಿ 128 ಪ್ರಕರಣಗಳು ದಾಖಲಾಗಿವೆ. ಮಂಗಳೂರಿನಲ್ಲಿ 58 ಪ್ರಕರಣಗಳು ವರದಿಯಾಗಿವೆ.

​ಏಪ್ರಿಲ್‌ನಲ್ಲಿ ಬೆಂಗಳೂರು ನಗರದಲ್ಲಿ 373 ಪ್ರಕರಣಗಳು ದಾಖಲಾಗಿವೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 70 ಮತ್ತು ಶಿವಮೊಗ್ಗದಲ್ಲಿ 62 ಪ್ರಕರಣಗಳು ದಾಖಲಾಗಿವೆ.

ಮೇ ತಿಂಗಳಲ್ಲಿ ಬೆಂಗಳೂರು ನಗರ 352 ಕೇಸ್ ದಾಖಲು, ಮಂಗಳೂರು 89, ರಾಯಚೂರು 39 ಮತ್ತು ದಾವಣಗೆರೆ 29 ಪ್ರಕರಣಗಳು ದಾಖಲಾಗಿವೆ.
ಡ್ರಗ್ಸ್ ಪ್ರಕರಣದಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಐಟಿ ಹಬ್, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಮತ್ತು ಸಪ್ಲೈ ನೆಟ್‌ವರ್ಕ್ ದೊಡ್ಡದಾಗಿರುವುದರಿಂದ ಐದೂ ತಿಂಗಳುಗಳಲ್ಲೂ ಬೆಂಗಳೂರೇ ಮೊದಲ ಸ್ಥಾನದಲ್ಲಿದೆ. ಒಟ್ಟು 2,351 ಪ್ರಕರಣಗಳು ದಾಖಲಾಗಿವೆ. ಮಂಗಳೂರು ಎರಡನೇ ಸ್ಥಾನದಕ್ಲಿದೆ. ಶಿವಮೊಗ್ಗ ಮೂರನೇ ಸ್ಥಾನದಲ್ಲಿದೆ.

ಜನವರಿಯಲ್ಲಿ ಒಟ್ಟು 1,397 ಪ್ರಕರಣಗಳಿದ್ದದ್ದು, ಮೇ ತಿಂಗಳ ವೇಳೆಗೆ 813ಕ್ಕೆ ಕುಸಿದಿದೆ. ಇದು ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕಾರ್ಯಾಚರಣೆಗೆ ಸಾಕ್ಷಿಯಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
SHOCKING : ಬೆಂಗಳೂರಲ್ಲಿ ಕೇವಲ 600 ರೂಪಾಯಿಗೆ, ಗಾರೆ ಕೆಲಸ ಮಾಡ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ : ಹಂತಕ ಅರೆಸ್ಟ್!BIG NEWS : ಮೈಸೂರು ದಸರಾ ಸಂಭ್ರಮ: ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿರುವ ಸಿಎಂ ಡಿ.ಕೆ. ಶಿವಕುಮಾರ್ರಾಮಗಿರಿ ರೈಲ್ವೆ ನಿಲ್ದಾಣದಲ್ಲಿ ಬೆಳಗಾವಿ–ಮೈಸೂರು ರೈಲುಗಳ ತಾತ್ಕಾಲಿಕ ನಿಲುಗಡೆ ಅವಧಿ ವಿಸ್ತರಣೆBREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭ