ನವದೆಹಲಿ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆ ತಡೆಯಲು ಕೇಂದ್ರ ಸರ್ಕಾರ ಹೇರಿದ್ದ ಒಂದು ವಾರದ ತಾತ್ಕಾಲಿಕ ನಿಷೇಧ ಮುಕ್ತಾಯವಾಗಿದ್ದು, ಭಾರತದಲ್ಲಿ ಟೆಲಿಗ್ರಾಂ ಸೇವೆಗಳು ಮಂಗಳವಾರದಿಂದ ಪುನರಾರಂಭಗೊಂಡಿದೆ.
ಗೂಗಲ್ ಪ್ಲೇ ಸ್ಟೋರ್ ನಲ್ಲಿ, ಆಪಲ್ ಆ್ಯಪ್ ಸ್ಟೋರ್ ಗಳಲ್ಲಿ ಈ ಮೆಸೇಜಿಂಗ್ ಆ್ಯಪ್ ಡೌನ್ಲೋಡ್ ಮಾಡಲು ಲಭ್ಯವಿದೆ/ ನೀಟ್ ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆಗೆ ಟೆಲಿಗ್ರಾಂ ಆಪ್ ಬಳಕೆ ಆರೋಪ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಂ ತಂತ್ರಾಂಶ ಬಳಕೆಯ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿತ್ತು.
ಮಂಗಳವಾರ ಕೇಂದ್ರ ಸರ್ಕಾರ ನಿಷೇಧ ಹಿಂಪಡೆದುಕೊಂಡಿದ್ದು, ಇದರೊಂದಿಗೆ ತಂತ್ರಾಂಶದ ಸೇವೆಗಳು ಪುನರಾರಂಭವಾಗಿದೆ. ಜೂನ್ 21ರಂದು ನೀಟ್ ಯುಜಿ ಮರು ಪರೀಕ್ಷೆ ನಡೆದಿದ್ದು, ಮುನ್ನೆಚ್ಚರಿಕೆ ಸುರಕ್ಷತಾ ಕ್ರಮವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಜೂನ್ 16 ರಿಂದ 22 ರವರೆಗೆ ಟೆಲಿಗ್ರಾಂ ಆ್ಯಪ್ ಅನ್ನು ದೇಶದಲ್ಲಿ ನಿರ್ಬಂಧಿಸಿದ್ದು, ನಿಷೇಧ ವಾಪಸ್ ಆದ ಹಿನ್ನೆಲೆಯಲ್ಲಿ ಪ್ರಸ್ತುತ ಟೆಲಿಗ್ರಾಂ ಆಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಾಗಿದೆ.