ಬೆಂಗಳೂರು: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಟ್ಟ 40 ವರ್ಷ ವಯೋಮಿತಿ ದಾಟಿದ ಸರ್ಕಾರಿ ನೌಕರರು ವಾರ್ಷಿಕ ವೈದ್ಯಕೀಯ ತಪಾಸಣೆ ಯೋಜನೆಯಡಿ ವರ್ಷದಲ್ಲಿ ಒಂದು ಬಾರಿ ನಗದು ರಹಿತ ವೈದ್ಯಕೀಯ ತಪಾಸಣೆ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಮಧುಮೇಹ, ರಕ್ತದೊತ್ತಡ ಸೇರಿದಂತೆ ಸಾಮಾನ್ಯ ಪರೀಕ್ಷೆ, ನೇತ್ರ ತಪಾಸಣೆ, ಶ್ವಾಸಕೋಶ, ಹೃದಯ, ಕರುಳು, ಕಿಡ್ನಿ ದಂತ, ENT, ಕ್ಯಾನ್ಸರ್ ಸೇರಿ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದು.ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಆಸ್ಪತ್ರೆ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ನೊಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ತಪಾಸಣೆ ಮಾಡಿಸಿಕೊಳ್ಳಬೇಕಿದೆ.
ಒಂದೇ ಸಂಸ್ಥೆಯಲ್ಲಿ ಒಂದೇ ಕ್ಲೇಮ್ ನಲ್ಲಿ ಪರೀಕ್ಷೆಗೆ ಒಳಪಡಬೇಕು. ಇದಕ್ಕಾಗಿ ಸರ್ಕಾರ ನಿಗದಿಪಡಿಸಿದ ವಾರ್ಷಿಕ ವೈದ್ಯಕೀಯ ದರ ಪುರುಷರಿಗೆ 2000 ರೂ., ಮಹಿಳೆಯರಿಗೆ 2,200 ರೂ. ಮಿತಿಗೆ ಒಳಪಟ್ಟು ಮಂಜೂರಾತಿ ನೀಡುವಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗೆ ಸೂಚಿಸಲಾಗಿದೆ.