LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶೂ ಬೇಕಿದ್ರೆ ಕಮ್ಮಿ ರೇಟ್‌ಗೆ ಕೊಡ್ತೀನಿ, ಆದ್ರೆ ಟೆಸ್ಟ್ ಆಡಲ್ಲ  ಕಮ್‌ಬ್ಯಾಕ್ ಪ್ರಶ್ನೆಗೆ ನಗುತ್ತಲೇ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ

ಬೆಂಗಳೂರು: ಟೆಸ್ಟ್ ಕ್ರಿಕೆಟ್‌ನಿಂದ ದಿಢೀರ್ ನಿವೃತ್ತಿ ಘೋಷಿಸಿ ಇಡೀ ವಿಶ್ವಕ್ಕೇ ಶಾಕ್ ಕೊಟ್ಟಿದ್ದ ಕಿಂಗ್ ವಿರಾಟ್ ಕೊಹ್ಲಿ (Virat Kohli), ಮತ್ತೆ ಟೆಸ್ಟ್ ಮೈದಾನಕ್ಕೆ ಮರಳುವಂತೆ ಒತ್ತಾಯಿಸುತ್ತಿದ್ದ ಕ್ರಿಕೆಟ್ ತಜ್ಞರು ಮತ್ತು ಕೋಟ್ಯಂತರ ಅಭಿಮಾನಿಗಳಿಗೆ ಕೊನೆಗೂ ತಮ್ಮ ಅತ್ಯಂತ ಸ್ಪಷ್ಟ ಮತ್ತು ಖಡಕ್ ನಿರ್ಧಾರವನ್ನು ಪ್ರಕಟಿಸಿದ್ದಾರೆ,ತಮ್ಮದೇ ಒನ್8 (one8) ಬ್ರ್ಯಾಂಡ್‌ನ ಹೊಸ ಶೂ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೊಹ್ಲಿ, ಕಮ್‌ಬ್ಯಾಕ್ ಬಗ್ಗೆ ಕೇಳಿದ ಪ್ರಶ್ನೆಗೆ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ನಗುತ್ತಲೇ ಶಾಕಿಂಗ್ ಉತ್ತರ ನೀಡಿದ್ದಾರೆ.

“ಬೇಕಿದ್ರೆ ಶೂ ತಗೊಳ್ಳಿ, ಆದ್ರೆ ನಾನು ಮತ್ತೆ ಟೆಸ್ಟ್ ಆಡಲ್ಲ

ಕಾರ್ಯಕ್ರಮದ ನಿರೂಪಕರು ಕೊಹ್ಲಿಗೆ, ಅಭಿಮಾನಿಗಳ ಆಸೆಯಂತೆ ನೀವು ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ಮರಳುವ ಬಗ್ಗೆ ಏನಾದರೂ ಯೋಚಿಸುತ್ತಿದ್ದೀರಾ? ಎಂದು ನೇರ ಪ್ರಶ್ನೆ ಹಾಕಿದರು. ಈ ವೇಳೆ ಮುಗುಳ್ನಕ್ಕ ವಿರಾಟ್, ಬೇಕಿದ್ದರೆ ನನ್ನ ಬ್ರ್ಯಾಂಡ್‌ನ ಹೊಸ ಶೂ ಅನ್ನು ನಿಮಗೆ ಕಡಿಮೆ ಬೆಲೆಗೆ ಕೊಡುತ್ತೇನೆ, ಅದನ್ನು ಮಾರಿ ನೀವು ಹೆಚ್ಚು ಲಾಭ ಮಾಡಿಕೊಳ್ಳಿ. ಆದರೆ ನಾನು ಮಾತ್ರ ಮತ್ತೆ ಟೆಸ್ಟ್ ಆಡಲ್ಲ ಯಾಕಂದ್ರೆ, ನಾನು ಆ ಚಾಪ್ಟರ್ ಅನ್ನು ಈಗಾಗಲೇ ಮುಗಿಸಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಟೆಸ್ಟ್ ಕರಿಯರ್‌ಗೆ ಸಂಪೂರ್ಣ ಬ್ರೇಕ್ ಬಿದ್ದಿರುವುದನ್ನು ಕನ್ಫರ್ಮ್ ಮಾಡಿದ್ದಾರೆ.

ಮೆಲ್ಬೋರ್ನ್‌ನ ಆ 1% ಮ್ಯಾಜಿಕ್ ನೆನೆದ ಕಿಂಗ್ ಕೊಹ್ಲಿ

ಇದೇ ಸಂವಾದದ ವೇಳೆ ಕೊಹ್ಲಿ, 2022ರ ಟಿ20 ವಿಶ್ವಕಪ್‌ನಲ್ಲಿ ಮೆಲ್ಬೋರ್ನ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದ ಆ ಐತಿಹಾಸಿಕ ಮತ್ತು ರೋಮಾಂಚನಕಾರಿ ಇನ್ನಿಂಗ್ಸ್ ಅನ್ನು ನೆನಪಿಸಿಕೊಂಡರು.

ನನ್ನ ಕ್ರಿಕೆಟ್ ಬದುಕಿನಲ್ಲಿ ಯಾವಾಗಲೂ ಎದ್ದು ಕಾಣುವ ಒಂದು ಘಟನೆ ಅಂದರೆ ಅದು ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯ. ನಾವು ಸೋಲುವ ಹಂತದಲ್ಲಿದ್ದಾಗ ಪಂದ್ಯ ಗೆಲ್ಲುವ ಸಾಧ್ಯತೆ ಕೇವಲ 3% ಮಾತ್ರ ಇದೆ ಎಂದು ನನಗೆ ನಂತರ ಲೈವ್ ಪ್ರೆಡಿಕ್ಷನ್ ಡೇಟಾ ತೋರಿಸಿದ್ದಾಗಿ ತಿಳಿಯಿತು. ಆದರೆ ಮೈದಾನದಲ್ಲಿದ್ದಾಗ ನಾನು ಎಂದಿಗೂ ಹಾಗೆ ಯೋಚಿಸಲಿಲ್ಲ. ಗೆಲ್ಲಲು ಕೇವಲ 1% ಅವಕಾಶ ಇದ್ದರೂ ಸಾಕು, ಕೊನೆಯ ಎಸೆತದವರೆಗೂ ಹೋರಾಡಬೇಕು ಎಂಬುದು ನನ್ನ ಮಂತ್ರವಾಗಿತ್ತು ಎಂದು ಕೊಹ್ಲಿ ತಮ್ಮ ಸಕ್ಸಸ್ ಸೀಕ್ರೆಟ್ ಬಿಚ್ಚಿಟ್ಟರು.

ಕೊಹ್ಲಿ ಟೆಸ್ಟ್ ಕರಿಯರ್: ಅರೆಬರೆ ಉಳಿದ 10 ಸಾವಿರ ರನ್ ಮೈಲುಗಲ್ಲು

2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ, ಭಾರತದ ಪರ ಹಲವು ದಾಖಲೆ ಬರೆದಿದ್ದಾರೆ:

ಒಟ್ಟು ಪಂದ್ಯಗಳು: 123

ಒಟ್ಟು ರನ್‌ಗಳು: 9,230 (ಸರಾಸರಿ: 46.85)

ಶತಕಗಳು: 30 ಅರ್ಧಶತಕಗಳು: 31

ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸುವ ಬಯಕೆ ಹೊಂದಿದ್ದ ಕೊಹ್ಲಿ, ಆ ಮೈಲುಗಲ್ಲು ತಲುಪುವ ಮುನ್ನವೇ ದಿಢೀರ್ ನಿವೃತ್ತಿ ಪ್ರಕಟಿಸಿದ್ದು ಕ್ರಿಕೆಟ್ ಜಗತ್ತನ್ನು ಇಂದಿಗೂ ಕಾಡುತ್ತಿದೆ.

ಭಾರತದ ನಂಬರ್ 1 ಟೆಸ್ಟ್ ಕ್ಯಾಪ್ಟನ್ ಕೊಹ್ಲಿ

ನಾಯಕತ್ವದ ವಿಚಾರಕ್ಕೆ ಬಂದರೆ ವಿರಾಟ್ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ಕ್ಯಾಪ್ಟನ್ ಆಗಿದ್ದಾರೆ. ಭಾರತದ ಇಬ್ಬರು ಶ್ರೇಷ್ಠ ನಾಯಕರಾದ ಧೋನಿ ಹಾಗೂ ಗಂಗೂಲಿಗಿಂತಲೂ ಕೊಹ್ಲಿ ಸಕ್ಸಸ್ ರೇಟ್ ಹೆಚ್ಚಿದೆ:

ವಿರಾಟ್ ಕೊಹ್ಲಿ: 68 ಟೆಸ್ಟ್‌ಗಳು 40 ಗೆಲುವು 17 ಸೋಲು

ಎಂ.ಎಸ್. ಧೋನಿ: 60 ಟೆಸ್ಟ್‌ಗಳು 27 ಗೆಲುವು

ಸೌರವ್ ಗಂಗೂಲಿ: 49 ಟೆಸ್ಟ್‌ಗಳು 21 ಗೆಲುವು

ವಿಶ್ವದಲ್ಲೇ 4ನೇ ಗರಿಷ್ಠ ಟೆಸ್ಟ್ ಗೆಲುವಿನ ನಾಯಕ:

ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ನಾಯಕರ ಪಟ್ಟಿಯಲ್ಲಿ ಕೊಹ್ಲಿ 4ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ (109 ಪಂದ್ಯಗಳಲ್ಲಿ 53 ಗೆಲುವು) ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (48 ಗೆಲುವು) ಹಾಗೂ ಸ್ಟೀವ್ ವಾ (41 ಗೆಲುವು) ಮುಂದಿನ ಸ್ಥಾನಗಳಲ್ಲಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?