LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಾನವೀಯತೆ ಇನ್ನೂ ಜೀವಂತ ! ಡೆಲಿವರಿ ಸಿಬ್ಬಂದಿಗಾಗಿ ನೀರಿನ ವ್ಯವಸ್ಥೆ ಮಾಡಿದ ಮಹಿಳೆ; ವಿಡಿಯೋ ವೈರಲ್.!

ಬೇಸಿಗೆ ಬಂದರೆ ಉರಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ನಾವು ಮನೆಯೊಳಗೆ ಎಸಿ, ಫ್ಯಾನ್‌ಗಳ ಸೌಲಭ್ಯದಲ್ಲಿ ಆರಾಮವಾಗಿ ಇರುತ್ತೇವೆ. ಆದರೆ ನಮ್ಮ ಆಹಾರ, ದಿನಸಿ ಹಾಗೂ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಡೆಲಿವರಿ ಸಿಬ್ಬಂದಿ ಮಾತ್ರ ಬಿಸಿಲಿನ ತಾಪವನ್ನೂ ಲೆಕ್ಕಿಸದೇ ನಗರದೆಲ್ಲೆಡೆ ಬೈಕ್‌ನಲ್ಲಿ ಸಂಚರಿಸುತ್ತಿರುತ್ತಾರೆ. ಸ್ವಿಗ್ಗಿ, ಝೊಮಾಟೊ, ಜೆಪ್ಟೋ, ಬ್ಲಿಂಕಿಟ್, ಅಮೆಜಾನ್ ಸೇರಿದಂತೆ ಹಲವು ಸಂಸ್ಥೆಗಳ ಡೆಲಿವರಿ ಏಜೆಂಟ್‌ಗಳ ಕಷ್ಟ ಹೇಳತೀರದು.

ಇಂತಹ ಡೆಲಿವರಿ ಸಿಬ್ಬಂದಿಯ ಶ್ರಮವನ್ನು ಮನಗಂಡ ಮಹಿಳೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಆಕೆ ಮಾಡಿದ ಕೆಲಸ ದೊಡ್ಡದೇನೂ ಅಲ್ಲ. ತನ್ನ ಮನೆಯ ಹೊರಗೆ ಒಂದು ಸಣ್ಣ ಸ್ಟೂಲ್ ಇಟ್ಟು, ಅದರ ಮೇಲೆ ತಂಪು ನೀರಿನ ಬಾಟಲಿಗಳು ಹಾಗೂ ಒಂದು ಸ್ಟೀಲ್ ಗ್ಲಾಸ್ ಇಟ್ಟಿದ್ದಾಳೆ.

ಇದು ಸಣ್ಣ ಕೆಲಸವೆನಿಸಿದರೂ, ಉರಿ ಬಿಸಿಲಿನಲ್ಲಿ ಸಿಗುವ ಒಂದು ಗ್ಲಾಸ್ ನೀರು ಅಮೃತದಂತೆಯೇ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ.

ವೈರಲ್ ವಿಡಿಯೋದಲ್ಲೇನಿದೆ?

ಈ ಮನಮುಟ್ಟುವ ವಿಡಿಯೋವನ್ನು @thoughtfully_designed ಎಂಬ ಇನ್‌ಸ್ಟಾಗ್ರಾಂ ಖಾತೆ ಹಂಚಿಕೊಂಡಿದೆ.

ವಿಡಿಯೋದಲ್ಲಿ ಮಹಿಳೆ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಮನೆಯ ಹೊರಗೆ ಇಟ್ಟಿರುವ ಖಾಲಿ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಅವುಗಳನ್ನು ಶುದ್ಧ ಕುಡಿಯುವ ನೀರಿನಿಂದ ತುಂಬಿ ಮತ್ತೆ ಅಲ್ಲಿಯೇ ಇಡುತ್ತಿರುವುದು ಕಾಣಿಸುತ್ತದೆ.

ಸ್ಟೂಲ್ ಮೇಲಿರುವ ಫಲಕದಲ್ಲಿ ಹೀಗೆ ಬರೆಯಲಾಗಿದೆ:

“ನೀರು – ಸ್ವಿಗ್ಗಿ, ಝೊಮಾಟೊ, ಜೆಪ್ಟೋ, ಬ್ಲಿಂಕಿಟ್, ಇನ್‌ಸ್ಟಾಮಾರ್ಟ್, ಅಮೆಜಾನ್, ಮಿಂತ್ರಾ ಹಾಗೂ ಡೆಲಿವರಿ ಸಿಬ್ಬಂದಿಗಾಗಿ.”

ಡೆಲಿವರಿ ಸಿಬ್ಬಂದಿಗೆ ಸುಲಭವಾಗಿ ಅರ್ಥವಾಗುವಂತೆ ಈ ಸಂದೇಶವನ್ನು ಹಲವು ಭಾಷೆಗಳಲ್ಲಿ ಬರೆಯಲಾಗಿದೆ. ಕಳೆದ ಎರಡು ವರ್ಷಗಳಿಂದ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಆಕೆ ಈ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದು, “ಈ ದಿನಗಳಲ್ಲಿ ಬಿಸಿಲು ಹೆಚ್ಚಾಗಿದೆ. ಪ್ರತಿದಿನ ಬಾಟಲಿಗಳು ಖಾಲಿಯಾಗುತ್ತಿವೆ” ಎಂದು ವಿಡಿಯೋದಲ್ಲಿ ಉಲ್ಲೇಖಿಸಿದ್ದಾಳೆ.

“ದಯೆ ದೊಡ್ಡ ಬದಲಾವಣೆಯನ್ನು ತರಬಲ್ಲದು”

ವಿಡಿಯೋ ಹಂಚಿಕೊಂಡ ಮಹಿಳೆ, “ದಯೆ ಮತ್ತು ಕರುಣೆ ದೊಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ. ನಿಮ್ಮ ಮನೆಗೆ ಪ್ರತಿದಿನ ಡೆಲಿವರಿ ಸಿಬ್ಬಂದಿ ಅಥವಾ ಕೆಲಸಗಾರರು ಬರುತ್ತಿದ್ದರೆ, ದಯವಿಟ್ಟು ಅವರಿಗಾಗಿ ಸ್ವಲ್ಪ ನೀರನ್ನು ಇಡಿ. ಹೊರಗಿನ ಬಿಸಿಲು ತುಂಬಾ ತೀವ್ರವಾಗಿದೆ” ಎಂದು ಬರೆದುಕೊಂಡಿದ್ದಾರೆ.

ಇಂದಿನ ದಿನಗಳಲ್ಲಿ ನಮ್ಮ ಆರ್ಡರ್ ಕೆಲವೇ ನಿಮಿಷ ತಡವಾದರೂ ನಾವು ಡೆಲಿವರಿ ಸಿಬ್ಬಂದಿಯ ಮೇಲೆ ಅಸಹನೆ ತೋರಿಸುತ್ತೇವೆ. ಆದರೆ ಅವರು ಎದುರಿಸುವ ಕಷ್ಟಗಳನ್ನು ಯೋಚಿಸುವವರು ಕಡಿಮೆ. ಇಂತಹ ಸಂದರ್ಭದಲ್ಲಿ ಈ ಮಹಿಳೆಯ ಕಾರ್ಯ ಎಲ್ಲರಿಗೂ ಉತ್ತಮ ಸಂದೇಶ ನೀಡಿದೆ.

ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ

ವಿಡಿಯೋ ವೈರಲ್ ಆದ ಬಳಿಕ ಸಾವಿರಾರು ಮಂದಿ ಮಹಿಳೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅನೇಕರು, “ನಿಮ್ಮ ಈ ಸಣ್ಣ ಕೆಲಸ ನಮಗೆ ಸ್ಫೂರ್ತಿ ನೀಡಿದೆ. ಇಂದಿನಿಂದ ನಮ್ಮ ಮನೆಯ ಮುಂದೆ ಕೂಡ ನೀರಿನ ಬಾಟಲಿ ಇಡುತ್ತೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನೊಬ್ಬರು, “ನಮ್ಮ ತಂದೆ-ತಾಯಿ ಬೇಸಿಗೆಯಲ್ಲಿ ಫ್ರಿಜ್‌ನಲ್ಲಿ ಜ್ಯೂಸ್ ಪ್ಯಾಕ್‌ಗಳನ್ನು ಇಟ್ಟು, ಮನೆಗೆ ಬರುವ ಡೆಲಿವರಿ ಸಿಬ್ಬಂದಿ ಹಾಗೂ ಕಸ ಸಂಗ್ರಹಿಸುವವರಿಗೆ ನೀಡುತ್ತಾರೆ” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸಹಾಯ ಮಾಡಲು ಕೋಟಿ ರೂಪಾಯಿಗಳ ಅಗತ್ಯವಿಲ್ಲ; ಒಳ್ಳೆಯ ಮನಸ್ಸಿದ್ದರೆ ಸಾಕು ಎಂಬುದನ್ನು ಈ ಮಹಿಳೆ ಸಾಬೀತುಪಡಿಸಿದ್ದಾರೆ. ನಮ್ಮ ಮನೆಗೆ ಬರುವ ಪ್ರತಿಯೊಬ್ಬ ಡೆಲಿವರಿ ಸಿಬ್ಬಂದಿಯೂ ಒಬ್ಬ ಮನುಷ್ಯ ಎಂಬುದನ್ನು ನಾವು ನೆನಪಿಡಬೇಕು. ಇನ್ನು ಮುಂದೆ ಅವರಿಗೆ ಕೇವಲ ರೇಟಿಂಗ್ ಅಥವಾ ಟಿಪ್ ನೀಡುವುದಷ್ಟೇ ಅಲ್ಲ, ಪ್ರೀತಿಯಿಂದ ಒಂದು ಗ್ಲಾಸ್ ನೀರು ನೀಡೋಣ. ಅವರ ಮುಖದಲ್ಲಿನ ನಗು ಯಾವುದೇ ಅಮೂಲ್ಯ ವಸ್ತುವಿಗಿಂತ ಮೌಲ್ಯಯುತವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶ