LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾನೇನಾದರೂ ಕೋಚ್ ಆಗಿದ್ದರೆ ಬೇರೆ ತಂಡದ ಆಟಗಾರನಿಗೆ ಹೊಡೆಯಲು ಹೋದ ವೈಭವ್ ಸೂರ್ಯವಂಶಿಯನ್ನು ತಂಡದಿಂದ ಆಚೆ ಹಾಕ್ತಿದ್ದೆ; ಕಿಡಿಕಾರಿದ ಹಿರಿಯ ಕ್ರಿಕೆಟಿಗ

ಜೂನ್ 15ರಂದು ಡಂಬುಲ್ಲಾ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಹಾಗೂ ಶ್ರೀಲಂಕಾ ಎ ತಂಡಗಳ ನಡುವಿನ ತ್ರಿಕೋನ ಸರಣಿಯ ನಾಲ್ಕನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡು ಸೂಪರ್ ಓವರ್ ನಡೆಯಿತು. ಈ ರೋಚಕ ಪಂದ್ಯದಲ್ಲಿ ಶ್ರೀಲಂಕಾ ಎ ತಂಡ ಗೆದ್ದುಬೀಗಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.2 ಓವರ್‌ಗಳಲ್ಲಿ 265 ರನ್‌ಗಳಿಗೆ ಆಲ್‌ಔಟ್ ಆಗಿ ಭಾರತ ತಂಡಕ್ಕೆ 266 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಶ್ರೀಲಂಕಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ಈ ಮೂಲಕ ಪಂದ್ಯ ಡ್ರಾ ಆಯಿತು.

ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಶ್ರೀಲಂಕಾ 16 ರನ್ ಬಾರಿಸಿ ಭಾರತಕ್ಕೆ 17 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಆದರೆ ಭಾರತ ಕೇವಲ 9 ರನ್ ಕಲೆಹಾಕಿ 7 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು.

ಲಂಕಾ ಸೂಪರ್ ಓವರ್‌ನಲ್ಲಿ ನೀಡಿದ ಗುರಿ ಬೆನ್ನಟ್ಟಿದ ಭಾರತದ ಪರ ಸೂರ್ಯನ್ಶ್ ಶೆಡ್ಗೆ ಹಾಗೂ ವೈಭವ್ ಸೂರ್ಯವಂಶಿ ಕಣಕ್ಕಿಳಿದರು. ಮೊದಲ ಎಸೆತಕ್ಕೆ ಎರಡು ರನ್ ಬಾರಿಸಿ ಎರಡನೇ ಎಸೆತ ನುಂಗಿದ ಶೆಡ್ಗೆ ಮೂರನೇ ಎಸೆತದಲ್ಲಿ ಒಂದು ರನ್ ಗಳಿಸಿದರು. ನಂತರ ವೈಭವ್ ಸೂರ್ಯವಂಶಿ ನಾಲ್ಕನೇ ಎಸೆತದಲ್ಲಿ ಎರಡು ರನ್, ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿ ಕೊನೆಯ ಎಸೆತದಲ್ಲಿ ರನ್ ಬಾರಿಸಲಾಗದೇ ಓವರ್ ಮುಗಿಸಿದರು.

ಹೀಗೆ ಪಂದ್ಯ ಸೋತು ಶೆಡ್ಗೆ ಹಾಗೂ ವೈಭವ್ ಪೆವಿಲಿಯನ್‌ನತ್ತ ಹೆಜ್ಜೆ ಹಾಕಲು ಮುಂದಾದಾಗ ಶ್ರೀಲಂಕಾ ಆಟಗಾರರು ಸಂಭ್ರಮಾಚರಣೆ ಮಾಡುತ್ತಿದ್ದರು. ಆ ಸಮಯದಲ್ಲಿ ಶ್ರೀಲಂಕಾದ ಆಟಗಾರ ಪ್ರಚೋದಿಸುವ ಮಾತುಗಳನ್ನಾಡಿದರು ಎಂಬ ಕಾರಣಕ್ಕೆ ವೈಭವ್ ಸೂರ್ಯವಂಶಿ ತಾಳ್ಮೆ ಕಳೆದುಕೊಂಡು ಆ ಆಟಗಾರನತ್ತ ಸಾಗಿ ಕೈನಿಂದ ತಳ್ಳಿ ಹಲ್ಲೆ ಯತ್ನ ಮಾಡಿದ್ದರು.

ಈ ಘಟನೆ ಕ್ರಿಕೆಟ್ ಲೋಕದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿತ್ತು. ವೈಭವ್ ಸೂರ್ಯವಂಶಿಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಹಲವಾರು ಮಂದಿ ಎದುರಾಳಿ ಆಟಗಾರರು ಏನೇ ಹೇಳಲಿ, ಅದಕ್ಕೆ ಕೈ ಎತ್ತುವ ಅಗತ್ಯವೇನಿದೆ, ಚಿಕ್ಕ ಹುಡುಗ ವೈಭವ್‌ಗೆ ಸರಿಯಾದ ಬುದ್ದಿವಾದದ ಅವಶ್ಯಕತೆ ಇದೆ ಎಂದಿದ್ದರು.

ಈ ಕುರಿತು ಸದ್ಯ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಟ್ವೀಟ್ ಮಾಡಿದ್ದು, ‘ನಾನೇನಾದರೂ ಭಾರತ ಎ ತಂಡದ ಕೋಚ್ ಅಥವಾ ಮ್ಯಾನೇಜರ್ ಆಗಿದ್ದರೆ ಇಂದು ಅಫ್ಘಾನಿಸ್ತಾನದ ವಿರುದ್ಧ ನಡೆಯುತ್ತಿರುವ ಪಂದ್ಯದಿಂದ ಆತನನ್ನು ಹೊರಹಾಕುತ್ತಿದ್ದೆ. ಎದುರಾಳಿಗಳು ಏನೇ ಪ್ರಚೋದನೆ ಮಾಡಲಿ, ಮೈದಾನದಲ್ಲಿ ಕೈ ಮಾಡಲು ಮುಂದಾಗುವುದು ಸರಿಯಲ್ಲ ಎಂಬುದು ಆತನಿಗೆ ಅರ್ಥವಾಗಲಿ ಎಂಬುದು ನನ್ನ ಉದ್ದೇಶ’ ಎಂದು ಬರೆದುಕೊಂಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಮೈಸೂರು ದಸರಾ ಸಂಭ್ರಮ: ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿರುವ ಸಿಎಂ ಡಿ.ಕೆ. ಶಿವಕುಮಾರ್ರಾಮಗಿರಿ ರೈಲ್ವೆ ನಿಲ್ದಾಣದಲ್ಲಿ ಬೆಳಗಾವಿ–ಮೈಸೂರು ರೈಲುಗಳ ತಾತ್ಕಾಲಿಕ ನಿಲುಗಡೆ ಅವಧಿ ವಿಸ್ತರಣೆBREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!