LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆನ್ನಿನ ಮೇಲಿನ ಗಣೇಶನ ಟ್ಯಾಟೂ ವಿವಾದ “ಟ್ಯಾಟೂ ಹಾಕೋಕು ನಿಮ್ಮ ಪರ್ಮಿಷನ್ ಬೇಕಾ?” ಅಂತ ಟ್ರೋಲರ್ಸ್‌ಗೆ ಕಿಚ್ಚನ ಮಗಳು ಸಾನ್ವಿ ಸುದೀಪ್ ಫುಲ್ ಫೈರ್

ಬೆಂಗಳೂರು: ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಅವರ ಪುತ್ರಿ, ಉದಯೋನ್ಮುಖ ಗಾಯಕಿ ಸಾನ್ವಿ ಸುದೀಪ್ (Sanvi Sudeep) ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ತಮಗೆ ಟ್ರೋಲ್ ಮಾಡಿದ ನೆಟ್ಟಿಗರ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ ತಮ್ಮ ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡ ವಿಚಾರ ಹಾಗೂ ತಂದೆಯನ್ನು ಓಲ್ಡ್ ಮ್ಯಾನ್ ಎಂದು ಕರೆದಿದ್ದಕ್ಕೆ ತಗಾದೆ ತೆಗೆದಿದ್ದ ಟ್ರೋಲರ್ಸ್‌ಗಳಿಗೆ ಸಾನ್ವಿ ತಮ್ಮ ನಡೆಯನ್ನು ಭರ್ಜರಿಯಾಗಿ ಸಮರ್ಥಿಸಿಕೊಂಡು ಬಿಗ್ ಶಾಕ್ ನೀಡಿದ್ದಾರೆ.ತಮ್ಮ ಖಾಸಗಿ ಬದುಕಿನ ವಿಚಾರಕ್ಕೆ ಮೂಗು ತೂರಿಸಿ ವಿಕೃತ ಆನಂದ ಪಡುತ್ತಿದ್ದ ಟ್ರೋಲರ್ಸ್‌ಗಳ ಬೆಂಡೆತ್ತಿದ ಕಿಚ್ಚನ ಮಗಳು ಸಾನ್ವಿ ಸುದೀಪ್ ಬಿಚ್ಚಿಟ್ಟಿರುವ ಆಕ್ರೋಶದ ಮಾಹಿತಿ ಇಲ್ಲಿದೆ

“ಟ್ಯಾಟೂ ಹಾಕೋಕು ನಿಮ್ಮ ಪರ್ಮಿಷನ್ ಬೇಕಾ?” – ಸಾನ್ವಿ ಖಡಕ್ ಪ್ರಶ್ನೆ

ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿತ್ತು. ಇದಕ್ಕೆ ನೇರವಾಗಿ ಟ್ರೋಲರ್ಸ್ ತಲೆಗೆ ಹೊಡೆದಂತೆ ಉತ್ತರಿಸಿರುವ ಸಾನ್ವಿ, “ನಿಮ್ಮಿಂದ ಪರ್ಮಿಷನ್ ತೆಗೆದುಕೊಂಡು ನನ್ನ ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳಬೇಕಾ? ನನ್ನ ಪ್ರತಿ ನಿರ್ಧಾರಕ್ಕೂ ನಿಮ್ಮ ಅನುಮತಿ ಪಡೆಯಬೇಕಾ?” ಎಂದು ನೆಟ್ಟಿಗರನ್ನ ತರಾಟೆಗೆ ತಗೊಂಡಿದ್ದಾರೆ

“ನೀವೇನೇ ಕಾಮೆಂಟ್ ಮಾಡಿದರೂ ನಾನು ಕೇರ್ ಮಾಡಲ್ಲ. ಆದರೆ ನನ್ನೊಬ್ಬಳ ಬಗ್ಗೆ ಟ್ರೋಲ್ ಮಾಡಲು ಅದೆಷ್ಟು ಎನರ್ಜಿ ವೇಸ್ಟ್ ಮಾಡುತ್ತಿದ್ದೀರಲ್ಲಾ, ಅದು ಶೋಚನೀಯ” ಎಂದು ಟೀಕಾಕಾರರ ಮುಖಭಂಗ ಮಾಡಿದ್ದಾರೆ

“ನನ್ನ ಪಾಲಿಗೆ ಅವರು ಯಾವತ್ತೂ ಓಲ್ಡ್ ಮ್ಯಾನ್

ಕೆಲ ದಿನಗಳ ಹಿಂದೆ ಸಾನ್ವಿ ತಮ್ಮ ತಂದೆ ಸುದೀಪ್ ಅವರನ್ನು ಓಲ್ಡ್ ಮ್ಯಾನ್ ಎಂದು ಕರೆದಿದ್ದಕ್ಕೆ ಒಂದಿಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಗಲಾಟೆ ಎಬ್ಬಿಸಿದ್ದರು ಅದಕ್ಕೂ ಖಡಕ್ ಆಗಿ ಉತ್ತರಿಸಿರುವ ಸಾನ್ವಿ, “ನಾನು ಸುದೀಪ್ ಮಗಳು. ನನ್ನ ಪಾಲಿಗೆ ಅವರು ಯಾವತ್ತೂ ಓಲ್ಡ್ ಮ್ಯಾನ್ ಆಗಿರುತ್ತಾರೆ. ದ್ವೇಷಿಸಲು ನಿಮಗೊಂದು ಸಣ್ಣ ಕಾರಣ ಸಿಕ್ಕರೂ ಸಾಕಾಗುತ್ತದೆ. ಹೀಗೆ ಸಮಯ ವ್ಯರ್ಥ ಮಾಡುವ ಬದಲು ಒಳ್ಳೆ ಕೆಲಸಗಳಿಗೆ ನಿಮ್ಮ ಸಮಯ ವಿನಿಯೋಗಿಸಿ” ಎಂದು ಕ್ಲಾಸ್ ತಗೊಂಡಿದ್ದಾರೆ .

“ತೆರೆಯ ಹಿಂದೆ ಅವಿತು ಕುಳಿತು ಮಾತನಾಡುವ ಹೇಡಿಗಳು – ಭಾವುಕರಾದ ಕಿಚ್ಚನ ಮಗಳು

ತಮ್ಮ ಬದುಕಿನ ಕಷ್ಟಗಳನ್ನ ಬಿಚ್ಚಿಡುತ್ತಾ ಸಾನ್ವಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ:

https://www.instagram.com/p/DWint7aGjLF/?utm_source=ig_web_copy_link&igsh=NTc4MTIwNjQ2YQ==

ಅಪ್ಪನ ಬರ್ತ್‌ಡೇಗೂ ಬರಕ್ಕಾಗಲ್ಲ: “ನಿಮ್ಮ ಟ್ರೋಲ್ ಮತ್ತು ಕಿರುಕುಳದಿಂದಾಗಿ ನಮಗೆ ಅಪ್ಪನ ಹುಟ್ಟುಹಬ್ಬ ಆಚರಿಸಲು ಅಥವಾ ನಮ್ಮ ಆಪ್ತರ ಕೊನೆಯ ಕ್ಷಣಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಕುಟುಂಬವನ್ನು ನಿಮ್ಮ ಮನರಂಜನೆಗೆ ಬಳಸಿಕೊಂಡಿದ್ದೀರಿ” ಎಂದು ಬೇಸರ ಹೊರಹಾಕಿದ್ದಾರೆ

ಫೋಟೋ ಕೇಳೋರು ನೀವೇ ತಾನೇ?: “ನೀವ್ಯಾರು ಅಂತ ನನಗೆ ಗೊತ್ತಿಲ್ಲ ಅನ್ಕೋಬೇಡಿ. ತೆರೆಯ ಹಿಂದೆ ಹೇಡಿಗಳ ರೀತಿ ಅವಿತು ಕುಳಿತು ಮಾತನಾಡುವ ನೀವೇ ಅನೇಕ ಬಾರಿ ನನ್ನನ್ನು ಭೇಟಿಯಾಗಿ ನಮ್ಮ ಜೊತೆ ಫೋಟೋ ತೆಗಿಸಿಕೊಳ್ಳಲು ಕೇಳ್ತೀರಿ, ಸೋ ಸ್ಯಾಡ್” ಎಂದು ಕಾಲೆಳೆದಿದ್ದಾರೆ

ಸಾಧನೆ ಬಗ್ಗೆ ಟೀಕಿಸುವವರಿಗೆ ಉತ್ತರ: “ನಾನು ಇನ್ನೂ ಏನನ್ನೂ ಸಾಧಿಸಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ, ಆದರೆ ಅನಾಮಧೇಯ ಪ್ರೊಫೈಲ್‌ಗಳ ಹಿಂದೆ ಅಡಗಿಕೊಳ್ಳುವವರಿಗಿಂತ ನಾನು ಪ್ರಾೂಮಾಣಿಕವಾಗಿದ್ದೇನೆ” ಎಂದಿದ್ದಾರೆ

ಗಾಯಕಿಯಾಗಿ ಸಿನಿಮಾ ರಂಗದಲ್ಲಿ ಸಾನ್ವಿ ಕ್ರೇಜ್

ಯಾರು ಏನೇ ಟ್ರೋಲ್ ಮಾಡಿದ್ರೂ ಸಾನ್ವಿ ಸುದೀಪ್ ತಮ್ಮ ಗಾಯನದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗುತ್ತಿದ್ದಾರೆ.

ಹಿಟ್ ಸಾಂಗ್ಸ್: ‘ಮಾರ್ಕ್’ ಚಿತ್ರದ ‘ಮಸ್ತ್ ಮಲೈಕಾ’ ಸಾಂಗ್ ಹಾಡಿ ಮೋಡಿ ಮಾಡಿದ್ದ ಸಾನ್ವಿ, ಇದೀಗ ‘ಮ್ಯಾಂಗೋ ಪಚ್ಚ’ ಚಿತ್ರದ ‘ಅರಗಿಣಿಯೇ’ ಹಾಡಿಗೂ ದನಿಯಾಗಿದ್ದಾರೆ

ನಟನೆಗೆ ಎಂಟ್ರಿ?: ನಿಧಾನವಾಗಿ ಒಂದೊಂದೇ ಅವಕಾಶಗಳು ಹುಡುಕಿ ಬರುತ್ತಿದ್ದು, ಸಾನ್ವಿ ಶೀಘ್ರದಲ್ಲೇ ಬೆಳ್ಳಿಪರದೆ ಮೇಲೆ ನಟಿಯಾಗಿ ಚಿತ್ರರಂಗ ಪ್ರವೇಶಿಸುವ ಸಾಧ್ಯತೆಯೂ ದಟ್ಟವಾಗಿದೆ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!