LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾಕ್ರೋಚ್ ಜನತಾ ಪಾರ್ಟಿ ಬೆಂಬಲಿಸಿದ ನಟ ಪ್ರಕಾಶ್ ರಾಜ್: ಪವನ್ ಕಲ್ಯಾಣ್ ತಿರುಗೇಟು

ಬೆಂಗಳೂರು: ಇತ್ತೀಚೆಗೆ ಆರಂಭವಾಗಿ, ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಕಾಕ್ರೋಚ್ ಜನತಾ ಪಾರ್ಟಿ ಸಾರ್ವಜನಿಕರಿಂದ ಮಾತ್ರವಲ್ಲ ಸೆಲೆಬ್ರಿಟಿಗಳು, ಪ್ರಮುಖ ನಾಯಕರಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್ ರಾಜ್ ಕಾಕ್ರೋಚ್ ಜನತಾ ಪಾರ್ಟಿಯನ್ನು ಬೆಂಬಲಿಸಿದ್ದಾರೆ. ಆದರೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪವನ್ ಕಲ್ಯಾಣ್ ಈ ಚಳವಳಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ಸಂಘಟನೆ ಮತ್ತು ಇದನ್ನು ಬೆಂಬಲಿಸುವವರು ದೇಶವನ್ನು ಒಡೆಯುವ ಮತ್ತು ಭಾರತದ ಸಮಗ್ರತೆಯನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಪ್ರಕಾಶ್ ರಾಜ್ ಅವರು ಕಾಕ್ರೋಚ್ ಜನತಾ ಪಾರ್ಟಿ ಯನ್ನು ಬೆಂಬಲಿಸಿದ ಬೆನ್ನಲ್ಲೇ ಈ ಹೇಳಿಕೆ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.

ದೆಹಲಿಯಲ್ಲಿ ನಡೆದ ಜನಸೇನಾ ಪಕ್ಷದ (JSP) ಸಭೆಯಲ್ಲಿ ಮಾತನಾಡಿದ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಇತ್ತೀಚೆಗೆ ನೀವು ಈ ಜಿರಳೆಗಳ (ಕಾಕ್ರೋಚ್) ಬಗ್ಗೆ ಕೇಳಿರಬಹುದು. ಒಂದು ಸಣ್ಣ ಇರುವೆ ಕೂಡ ದೊಡ್ಡ ಹಾವನ್ನು ಕೊಲ್ಲಬಲ್ಲದು ಎಂದಿದ್ದಾರೆ.

ದೇಶದ ರಾಜಕಾರಣದ ಆಳ ಗೊತ್ತಿಲ್ಲದ ಕೆಲವು ಸಂಕುಚಿತ ಮನಸ್ಸಿನ ಜನರು, ದೇಶವನ್ನು ಒಡೆಯುವ ಆಲೋಚನೆಗಳ ಮೂಲಕ ಭಾರತದ ಸಮಗ್ರತೆಯನ್ನು ಹಾಳು ಮಾಡಲು ನೋಡುತ್ತಿದ್ದಾರೆ. ನಾವು ಇಂತಹ ಆಲೋಚನೆಗಳಿಗೆ ಬಲಿಯಾಗಬಾರದು. ಸಣ್ಣ ಬುದ್ಧಿಯ ಕೋಟ್ಯಂತರ ಜನರು ಒಂದಾದರೆ ಅದರ ಪ್ರಭಾವ ದೊಡ್ಡದಾಗಿರುತ್ತದೆ, ಅದು ಒಳ್ಳೆಯದಕ್ಕಾದರೂ ಆಗಬಹುದು ಅಥವಾ ಕೆಟ್ಟದ್ದಕ್ಕಾದರೂ ಆಗಬಹುದು. ಹಾಗಾಗಿ ನಾವು ಇದರ ವಿರುದ್ಧ ಹೋರಾಡಬೇಕೇ ಹೊರತು, ಇದರಲ್ಲಿ ಭಾಗಿಯಾಗಬಾರದು ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಸುದ್ದಿಸಂಸ್ಥೆ ಎಎನ್‌ಐ’ ಜೊತೆ ಮಾತನಾಡಿದ್ದ ಅವರು, ಅವರಿಗೆ ಯಾಕೆ ಇಷ್ಟೊಂದು ಕೋಪ ಇದೆಯೋ ಗೊತ್ತಿಲ್ಲ. ಜಿರಳೆಗಳು ಯಾವಾಗಲೂ ಚರಂಡಿಯಲ್ಲೇ ಇರುತ್ತವೆ. ಅಂದರೆ ಬಹುಶಃ ಅವರ ನೋವು ಏನೆಂದು ನನಗೆ ಅರ್ಥವಾಗುತ್ತದೆ ಎಂದು ಲೇವಡಿ ಮಾಡಿದ್ದರು.

ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪ್ರಕಾಶ್ ರಾಜ್, ಪ್ರತಿಭಟನೆ ಮಾಡುವವರನ್ನು ನೀವು ಪಾಕಿಸ್ತಾನಿಗಳು ಎಂದರೂ ನಮಗೆ ಭಯವಿಲ್ಲ, ಭಯೋತ್ಪಾದಕರು ಎಂದರೂ ಹೆದರುವುದಿಲ್ಲ, ಜಿರಳೆಗಳು (ಕಾಕ್ರೋಚ್) ಎಂದು ಕರೆದರೂ ನಾವು ಭಯ ವಿಚಲಿರತಾಗುವುದಿಲ್ಲ. ಜನರಿಂದ ಆಯ್ಕೆಯಾದ ನಾಯಕರು ತಮ್ಮ ಕೆಲಸವನ್ನು ಸರಿಯಾಗಿ ಮಾಡಬೇಕು. ನೀವು ರಾಜಕೀಯ ಮಾಡುವುದನ್ನು ಬಿಟ್ಟು ನಮಗೆ ಕೆಲಸ ಕೊಡಿ. ಈ ದೇಶದ ಯುವಕರು ತಮ್ಮ ಹಕ್ಕಿಗಾಗಿ ಹೋರಾಡಲು ನಿರ್ಧರಿಸಿದ್ದಾರೆ ಎಂದು ಗುಡುಗಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಕಲ್ಯಾಣ ಕರ್ನಾಟಕ ಜನತೆಗೆ ಗುಡ್ ನ್ಯೂಸ್: KKRTC ಗೆ 400 ಹೊಸ ಬಸ್ ಮಂಜೂರುಮನೆಗಳ್ಳತನ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರು ವಶಕ್ಕೆ: ಲಕ್ಷಾಂತರ ರೂ. ಮೌಲ್ಯದ ಆಭರಣ ವಶಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ BNP ಅಭ್ಯರ್ಥಿ ಮಿರ್ಜಾ ಫಖ್ರುಲ್ ಇಸ್ಲಾಂ ಅಲಂಗೀರ್ ಆಯ್ಕೆBREAKING: ಲಡಾಖ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಕೇಂದ್ರ ನಿರ್ಧಾರ: ಅಮಿತ್ ಶಾ ಘೋಷಣೆಅನುಮತಿ ಇಲ್ಲದೆ ಸಚಿವ ಕೃಷ್ಣ ಬೈರೇಗೌಡರ ಪೋಸ್ಟರ್ ಅಂಟಿಸಿದ್ದ ವ್ಯಕ್ತಿ ವಿರುದ್ಧ ಕೇಸ್ ದಾಖಲುಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿKPME ಉಲ್ಲಂಘನೆ: ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ದಂಡ, ಪರವಾನಗಿ ರದ್ದುಮೋದಿ ದೇವರಿಗೆ ಪೂಜೆ: ಭಕ್ತರಿಂದ ‘ಜೈ ಜೈ ಮೋದಿ, ಹರ್ ಹರ್ ಮೋದಿ’ ಘೋಷಣೆ; ದೆಹಲಿ ಪ್ರೆಸ್ ಕ್ಲಬ್‌ನಲ್ಲಿ ‘ಮೋದಿ ಚಾಲೀಸಾ’ ಕಾರ್ಯಕ್ರಮ!ತಪ್ಪಾಯ್ತು ಕ್ಷಮಿಸಿಬಿಡಿ: ರಸ್ತೆ ಮುಚ್ಚಿದ್ದಕ್ಕೆ ಭಾರತೀಯ ಸೇನೆಗೆ ‘ನಾನು GenZ’ ಎಚ್ಚರಿಕೆ ನೀಡಿದ್ದ ಯುವತಿಯಿಂದ ಕ್ಷಮೆಯಾಚನೆಲೋಕಸಭಾ ಕ್ಷೇತ್ರ ಹೆಚ್ಚಳ ಮಾಡಬಾರದು; 1971ರ ಜನಸಂಖ್ಯೆ ಆಧಾರವನ್ನು ಗೌರವಿಸಬೇಕು ಸಿಎಂ ಡಿ.ಕೆ.ಶಿವಕುಮಾರ್ ಮನವಿ