ರಾಂಚಿ: ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಾದ ಶಾಲೆಯಲ್ಲೇ ಪುಟ್ಟ ಕಂದಮ್ಮಗಳ ಮೇಲೆ ಪ್ರಾಂಶುಪಾಲನೊಬ್ಬ ಕ್ರೂರವಾಗಿ ದೈಹಿಕ ಹಲ್ಲೆ ನಡೆಸಿರುವ ತಲೆತಗ್ಗಿಸುವ ಮತ್ತು ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಜಾರ್ಖಂಡ್‌ನ ಪಲಾಮು ಜಿಲ್ಲೆಯ ಜಾಪ್ಲಾದಲ್ಲಿರುವ ಪ್ರಸಿದ್ಧ ಲಕ್ಷ್ಮಿ ಶಿಶು ವಾಟಿಕಾ ಪ್ಲೇ ಸ್ಕೂಲ್’ನಲ್ಲಿ (Lakshmi Shishu Vatika Play School) ಈ ಘಟನೆ ನಡೆದಿದ್ದು, ಇದರ ರಹಸ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಲೆಯ ಪ್ರಾಂಶುಪಾಲ (Principal) ವಿದ್ಯಾರ್ಥಿಗಳನ್ನು, ಅದರಲ್ಲೂ ಮುಖ್ಯವಾಗಿ ಪುಟ್ಟ ಹೆಣ್ಣುಮಕ್ಕಳನ್ನು ಸಾಲಾಗಿ ನಿಲ್ಲಿಸಿ ತರಗತಿಯೊಳಗೆ ಒಬ್ಬರ ನಂತರ ಒಬ್ಬರಂತೆ ಕೆನ್ನೆಗೆ ಮನಬಂದಂತೆ ಬಾರಿಸುತ್ತಿರುವ ದೃಶ್ಯ ಕಂಡುಬಂದಿದೆ.
ಬಾಗಿಲಿನ ಹಿಂದಿನಿಂದ ರಹಸ್ಯವಾಗಿ ರೆಕಾರ್ಡ್ ಆಯ್ತು ಕ್ರೂರ ದೃಶ್ಯ
ಪ್ರಾಂಶುಪಾಲ ಶಶಿಕೇಶ್ ಕಶ್ಯಪ್ ಎಂಬಾತನೇ ಈ ಅಮಾನವೀಯ ಕೃತ್ಯ ಎಸಗಿದ ಆರೋಪಿ. ತರಗತಿಯೊಳಗೆ ಬೇರೆ ಶಿಕ್ಷಕರು ಅಥವಾ ಸಿಬ್ಬಂದಿ ಇರುವಾಗಲೇ ಈತ ವಿದ್ಯಾರ್ಥಿಗಳಿಗೆ ಕಪಾಳಮೋಕ್ಷ ಮಾಡಿದ್ದಾನೆ.
ಯಾಕೆ ಬರೆಸಿದೆ?”: ವಿಡಿಯೋದಲ್ಲಿ ಪ್ರಾಂಶುಪಾಲನು ಒಂದು ಪುಟ್ಟ ಮಗುವಿಗೆ ಭೀಕರವಾಗಿ ಕಪಾಳಮೋಕ್ಷ ಮಾಡುತ್ತಾ, “ಕಾಹೇ ಲಿಖ್ವಾಯೀ (ನೀನು ಅವರಿಂದ ಯಾಕೆ ಬರೆಸಿದೆ?)” ಎಂದು ಗದರಿಸಿ, ಬಳಿಕ ಆಕೆಯನ್ನು ಬಾತ್‌ರೂಮ್ ಬ್ರೇಕ್‌ಗೆ ಹೋಗುವಂತೆ ಹೇಳಿದ್ದಾನೆ.
ಮತ್ತೊಂದು ಮಗುವಿಗೆ ಶಿಕ್ಷೆ: ತಕ್ಷಣವೇ ಮತ್ತೊಂದು ಪುಟ್ಟ ಹೆಣ್ಣುಮಗಳ ಬಳಿ ಹೋಗಿ ಆಕೆಗೂ ಜೋರಾಗಿ ಹೊಡೆದಿದ್ದಾನೆ. “ಯಾಕೆ ಬರೆಯಲು ನಿನ್ನ ಅಕ್ಕನ ಸಹಾಯ ಪಡೆದೆ?” ಎಂದು ಪ್ರಶ್ನಿಸಿ, ಶಿಕ್ಷೆಯ ರೂಪದಲ್ಲಿ ಆ ಪುಟ್ಟ ಕಂದಮ್ಮನನ್ನು ತರಗತಿಯಿಂದ ಹೊರಗೆ ಹೋಗುವಂತೆ ಆರ್ಡರ್ ಮಾಡಿದ್ದಾನೆ.
ಮಕ್ಕಳ ಆರ್ತನಾದ: ಪ್ರಾಂಶುಪಾಲನ ಅಮಾನವೀಯ ಹೊಡೆತದ ರಭಸಕ್ಕೆ ತಡೆಯಲಾರದೆ ಪುಟ್ಟ ಮಕ್ಕಳು ತೀವ್ರವಾಗಿ ಅಳುತ್ತಿರುವುದು ಮತ್ತು ತೀವ್ರ ಆತಂಕಕ್ಕೆ ಒಳಗಾಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ರಹಸ್ಯ ಕ್ಯಾಮರಾದಲ್ಲಿ ಸೆರೆ: ಈ ದೃಶ್ಯವನ್ನು ಯಾರೋ ಒಬ್ಬರು ತರಗತಿಯ ಬಾಗಿಲಿನ ಹಿಂದಿನಿಂದ ಅತ್ಯಂತ ರಹಸ್ಯವಾಗಿ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ.
ಮಕ್ಕಳ ಆರ್ತನಾದ: ಪ್ರಾಂಶುಪಾಲನ ಅಮಾನವೀಯ ಹೊಡೆತದ ರಭಸಕ್ಕೆ ತಡೆಯಲಾರದೆ ಪುಟ್ಟ ಮಕ್ಕಳು ತೀವ್ರವಾಗಿ ಅಳುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಈ ವಿಡಿಯೋ ಹೊರಬರುತ್ತಿದ್ದಂತೆ ಇಡೀ ದೇಶಾದ್ಯಂತ ನೆಟ್ಟಿಗರು ಹಾಗೂ ಪೋಷಕರು ಈತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ಶಾಲೆಗಳು ಭಯ ಹುಟ್ಟಿಸುವ ಜಾಗ ಅಲ್ಲ – ನೆಟ್ಟಿಗರ ಆಕ್ರೋಶ
ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಯಾವುದೇ ರೀತಿಯ ದೈಹಿಕ ಶಿಕ್ಷೆ ನೀಡಬಾರದು ಎನ್ನುವ ಕಟ್ಟುನಿಟ್ಟಿನ ನಿಯಮಗಳಿದ್ದರೂ ಪ್ರಾಂಶುಪಾಲನೇ ಈ ರೀತಿ ವರ್ತಿಸಿರುವುದು ಪೋಷಕರನ್ನು ಆತಂಕಕ್ಕೆ ತಳ್ಳಿದೆ. ವಿಡಿಯೋ ನೋಡಿದ ಬಳಕೆದಾರರೊಬ್ಬರು, “ಶಾಲೆಗಳು ಮಗುವಿಗೆ ಸುರಕ್ಷಿತ, ಬೆಂಬಲ ಮತ್ತು ಗೌರವಾನ್ವಿತ ವಾತಾವರಣವನ್ನು ಒದಗಿಸಬೇಕೇ ಹೊರತು, ಈ ರೀತಿ ಮಕ್ಕಳಲ್ಲಿ ಭಯ ಹುಟ್ಟಿಸುವ ಜಾಗ ಆಗಬಾರದು” ಎಂದು ಕಿಡಿಕಾರಿದ್ದಾರೆ. ಸದ್ಯ ಸಾರ್ವಜನಿಕರು ಆರೋಪಿ ಪ್ರಾಂಶುಪಾಲನನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸಿ, ಜೈಲಿಗಟ್ಟಬೇಕು ಎಂದು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಈ ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಸಾರ್ವಜನಿಕರು ಮತ್ತು ನೆಟ್ಟಿಗರು, ಆರೋಪಿ ಪ್ರಾಂಶುಪಾಲನನ್ನು ತಕ್ಷಣವೇ ಅಮಾನತುಗೊಳಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ತರಗತಿ ಕೋಣೆ ಎಂಬುದು ಕಲಿಯುವ ಜಾಗವಾಗಿರಬೇಕೇ ಹೊರತು ಭಯ ಹುಟ್ಟಿಸುವ ಜಾಗವಲ್ಲ. ಹತಾಶೆಗೊಂಡ ವಯಸ್ಕರಿಗೆ ಮಕ್ಕಳು ಪಂಚಿಂಗ್ ಬ್ಯಾಗ್‌ಗಳಲ್ಲ ಎಂದು ಬರೆದುಕೊಂಡು, ಭಾರತೀಯ ಶಿಕ್ಷಣ ಇಲಾಖೆ (@EduMinOfIndia), ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ (@NCPCR_), ಪಲಾಮು ಡಿಸಿ (@DC_Palamu) ಹಾಗೂ ಜಾರ್ಖಂಡ್ ಪೊಲೀಸರಿಗೆ (@JharkhandPolice) ತುರ್ತು ಕ್ರಮ ಕೈಗೊಳ್ಳುವಂತೆ ಟ್ವಿಟರ್ (X) ನಲ್ಲಿ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.