LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮನೆಯಲ್ಲೇ ಮಾಡಿ ಢಾಬಾ ಸ್ಟೈಲ್ ಈರುಳ್ಳಿ ಪರಾಟಾ: ಕ್ರಿಸ್ಪಿಯಾಗಿ ಬರಲು ಇಲ್ಲಿದೆ ಸಿಂಪಲ್ ಟಿಪ್ಸ್

ಬಿಸಿಬಿಸಿಯಾದ ಈರುಳ್ಳಿ ಪರಾಟಾ ಜೊತೆಗೆ ಸ್ವಲ್ಪ ಬೆಣ್ಣೆ, ಮೊಸರು ಅಥವಾ ಖಾರದ ಉಪ್ಪಿನಕಾಯಿ ಇದ್ದರೆ ಅದರ ಮಜಾವೇ ಬೇರೆ. ತಲೆಮಾರುಗಳಿಂದಲೂ ಭಾರತೀಯರ ಮನೆಗಳಲ್ಲಿ ಹಾಗೂ ಹೆದ್ದಾರಿ ಬದಿಯ ಡಾಬಾಗಳಲ್ಲಿ ಎಲ್ಲರ ಮೆಚ್ಚಿನ ಆಹಾರವಾಗಿರುವ ಈ ಪರಾಟಾ, ತನ್ನ ವಿಶಿಷ್ಟ ರುಚಿಯಿಂದಲೇ ಹೆಸರುವಾಸಿಯಾಗಿದೆ. ಮೃದುವಾದ ಗೋಧಿ ಹಿಟ್ಟು ಮತ್ತು ಮಸಾಲೆಯುಕ್ತ ಈರುಳ್ಳಿ ಮಿಶ್ರಣದ ಕಾಂಬಿನೇಷನ್ ಅದ್ಭುತ ರುಚಿ ನೀಡುತ್ತದೆ. ಮುಂಜಾನೆಯ ಉಪಾಹಾರ, ಮಧ್ಯಾಹ್ನ ಅಥವಾ ರಾತ್ರಿಯ ಊಟ ಹೀಗೆ ಯಾವುದೇ ಸಮಯದಲ್ಲೂ ಸವಿಯಬಹುದಾದ ಈ ಪರಾಟಾ, ತನ್ನ ಗರಿಗರಿಯಾದ ಗೋಲ್ಡನ್ ಲೇಯರ್‌ನಿಂದ ನಾಲಿಗೆಯಲ್ಲಿ ನೀರೂರಿಸುತ್ತದೆ. ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳನ್ನು ಬಳಸಿ, ಅತ್ಯಂತ ರುಚಿಕರವಾದ ಡಾಬಾ ಶೈಲಿಯ ಈರುಳ್ಳಿ ಪರಾಟಾವನ್ನು ಮನೆಯಲ್ಲೇ ಹೇಗೆ ಮಾಡಬಹುದು ಎಂಬುದನ್ನು ಇಲ್ಲಿ ತಿಳಿಯೋಣ.

ಪರ್ಫೆಕ್ಟ್ ಈರುಳ್ಳಿ ಪರಾಟಾ ಮಾಡಲು ಇಲ್ಲಿದೆ ಕಿವಿಮಾತು

  • ಚಿಕ್ಕದಾಗಿ ಹೆಚ್ಚಿದ ಈರುಳ್ಳಿ: ಪರಾಟಾ ಲಟ್ಟಿಸುವಾಗ ಹಿಟ್ಟು ಹರಿದು ಹೋಗಬಾರದು ಎಂದರೆ ಈರುಳ್ಳಿಯನ್ನು ಸಾಧ್ಯವಾದಷ್ಟು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಇದರಿಂದ ಈರುಳ್ಳಿ ಪರಾಟಾದ ಎಲ್ಲ ಭಾಗಕ್ಕೂ ಸಮನಾಗಿ ಹರಡಿಕೊಳ್ಳುತ್ತದೆ.
  • ನೀರು ಬಿಡದಂತೆ ಎಚ್ಚರವಹಿಸಿ: ಈರುಳ್ಳಿಗೆ ಮೊದಲೇ ಉಪ್ಪು ಹಾಕಬೇಡಿ. ಏಕೆಂದರೆ ಉಪ್ಪು ಹಾಕಿದ ತಕ್ಷಣ ಈರುಳ್ಳಿ ನೀರು ಬಿಡಲು ಆರಂಭಿಸುತ್ತದೆ. ಇದರಿಂದ ಪರಾಟಾ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಹಿಟ್ಟಿನೊಳಗೆ ಈರುಳ್ಳಿ ತುಂಬುವ ಕೆಲವೇ ಕ್ಷಣಗಳ ಮುಂಚೆ ಉಪ್ಪು ಸೇರಿಸಿ.
  • ಮೃದುವಾದ ಹಿಟ್ಟು: ಪರಾಟಾ ಮಾಡಲು ಕದಡುವ ಹಿಟ್ಟು ಮೃದುವಾಗಿರಬೇಕು. ಹಿಟ್ಟು ಸಾಫ್ಟ್ ಆಗಿದ್ದರೆ ಲಟ್ಟಿಸುವಾಗ ಹರಿದು ಹೋಗುವುದಿಲ್ಲ ಮತ್ತು ಈರುಳ್ಳಿ ಮಿಶ್ರಣವನ್ನು ಸುಲಭವಾಗಿ ತುಂಬಬಹುದು.
  • ಹಗುರವಾಗಿ ಲಟ್ಟಿಸಿ: ಈರುಳ್ಳಿ ಮಿಶ್ರಣವನ್ನು ಹಿಟ್ಟಿನೊಳಗೆ ತುಂಬಿ ಮುಚ್ಚಿದ ನಂತರ, ಲಟ್ಟಣಿಗೆಯಿಂದ ಜೋರಾಗಿ ಒತ್ತದೆ ಹಗುರವಾಗಿ ಲಟ್ಟಿಸಬೇಕು. ಇದರಿಂದ ಹೂರಣ ಹೊರಗೆ ಬರುವುದಿಲ್ಲ.
  • ಮಧ್ಯಮ ಉರಿಯಲ್ಲಿ ಬೇಯಿಸಿ: ಪರಾಟಾವನ್ನು ಯಾವಾಗಲೂ ಮಧ್ಯಮ ಉರಿಯಲ್ಲಿ ತುಪ್ಪ ಅಥವಾ ಬೆಣ್ಣೆ ಹಾಕಿ ಬೇಯಿಸಬೇಕು. ಇದರಿಂದ ಪರಾಟಾ ಒಳಗಿನಿಂದ ಚೆನ್ನಾಗಿ ಬೆಂದು, ಹೊರಭಾಗ ಗರಿಗರಿಯಾಗುತ್ತದೆ.

ಈರುಳ್ಳಿ ಪರಾಟಾ ಮಾಡಲು ಬೇಕಾಗುವ ಪದಾರ್ಥಗಳು

  • ಗೋಧಿ ಹಿಟ್ಟು – 2 ಕಪ್
  • ಈರುಳ್ಳಿ – 2 (ಸಣ್ಣದಾಗಿ ಹೆಚ್ಚಿದ್ದು)
  • ಹಸಿಮೆಣಸಿನಕಾಯಿ – 2 (ಸಣ್ಣದಾಗಿ ಹೆಚ್ಚಿದ್ದು)
  • ಕೊತ್ತಂಬರಿ ಸೊಪ್ಪು – 2 ಚಮಚ
  • ಅಚ್ಚಖಾರದ ಪುಡಿ – 1 ಚಮಚ
  • ಜೀರಿಗೆ ಪುಡಿ – 1 ಚಮಚ (ಹುರಿದದ್ದು)
  • ಗರಂ ಮಸಾಲಾ – ಅರ್ಧ ಚಮಚ
  • ಎಣ್ಣೆ – 1 ಚಮಚ (ಹಿಟ್ಟು ಕದಡಲು)
  • ರುಚಿಗೆ ತಕ್ಕಷ್ಟು ಉಪ್ಪು
  • ಬೇಯಿಸಲು ತುಪ್ಪ ಅಥವಾ ಬೆಣ್ಣೆ

ತಯಾರಿಸುವ ವಿಧಾನ

ಮೊದಲ ಹಂತ: ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಎಣ್ಣೆ ಮತ್ತು ಸ್ವಲ್ಪ ಉಪ್ಪು ಸೇರಿಸಿ, ಅಗತ್ಯವಿರುವಷ್ಟು ನೀರು ಹಾಕಿ ಮೃದುವಾಗಿ ಕಲಸಿಕೊಳ್ಳಿ. ನಂತರ ಇದನ್ನು 15 ನಿಮಿಷಗಳ ಕಾಲ ನೆನೆಯಲು ಬಿಡಿ.

ಎರಡನೇ ಹಂತ: ಮತ್ತೊಂದು ಪಾತ್ರೆಯಲ್ಲಿ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಅಚ್ಚಖಾರದ ಪುಡಿ, ಹುರಿದ ಜೀರಿಗೆ ಪುಡಿ, ಗರಂ ಮಸಾಲಾ ಮತ್ತು ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಮೂರನೇ ಹಂತ: ಕಲಸಿಟ್ಟ ಹಿಟ್ಟಿನಿಂದ ಮಧ್ಯಮ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. ಒಂದು ಉಂಡೆಯನ್ನು ತೆಗೆದುಕೊಂಡು ಸಣ್ಣ ಪೂರಿಯ ಗಾತ್ರಕ್ಕೆ ಲಟ್ಟಿಸಿ, ಅದರ ಮಧ್ಯದಲ್ಲಿ ಸಿದ್ಧಪಡಿಸಿದ ಈರುಳ್ಳಿ ಮಿಶ್ರಣವನ್ನು ಇಡಿ.

ನಾಲ್ಕನೇ ಹಂತ: ಹಿಟ್ಟಿನ ಅಂಚುಗಳನ್ನು ಒಟ್ಟಿಗೆ ಸೇರಿಸಿ ಹೂರಣ ಹೊರಬರದಂತೆ ಚೆನ್ನಾಗಿ ಮುಚ್ಚಿ. ನಂತರ ಇದನ್ನು ಕೈಯಿಂದ ಸ್ವಲ್ಪ ಒತ್ತಿ, ಒಣ ಹಿಟ್ಟು ಸವರಿಕೊಂಡು ಮಧ್ಯಮ ಗಾತ್ರದ ಪರಾಟಾ ಆಕಾರಕ್ಕೆ ಹಗುರವಾಗಿ ಲಟ್ಟಿಸಿಕೊಳ್ಳಿ.

ಐದನೇ ಹಂತ: ಕಾದ ಹೆಂಚಿನ ಮೇಲೆ ಲಟ್ಟಿಸಿದ ಪರಾಟಾವನ್ನು ಹಾಕಿ. ಎರಡು ಕಡೆ ತಿರುಗಿಸಿ ಹಾಕುತ್ತಾ, ತುಪ್ಪ ಅಥವಾ ಬೆಣ್ಣೆಯನ್ನು ಸವರಿ ಎರಡೂ ಬದಿಗಳು ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬಂದು ಗರಿಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಸರಿಯಾಗಿ ಬೇಯಿಸಿ.

ಈಗ ಬಿಸಿಬಿಸಿಯಾದ ಢಾಬಾ ಶೈಲಿಯ ಈರುಳ್ಳಿ ಪರಾಟಾ ಸವಿಯಲು ಸಿದ್ಧ. ಇದನ್ನು ತಾಜಾ ಮೊಸರು, ಉಪ್ಪಿನಕಾಯಿ ಅಥವಾ ಮಸಾಲಾ ಚಹಾದೊಂದಿಗೆ ಸವಿದರೆ ಹಳ್ಳಿ ಶೈಲಿಯ ಸಾಂಪ್ರದಾಯಿಕ ಅಡುಗೆಯ ಅನುಭವ ಸಿಗುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿ