LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆಸ್ಟ್ರೇಲಿಯಾಗೆ ಭಾರೀ ಮುಖಭಂಗ: ಪಾಕಿಸ್ತಾನದ ಬಳಿಕ ಬಾಂಗ್ಲಾದೇಶದ ವಿರುದ್ಧವೂ ಸರಣಿ ಸೋತು ಮುಖಭಂಗಕ್ಕೊಳಗಾದ ಹಾಲಿ ವಿಶ್ವಕಪ್ ಚಾಂಪಿಯನ್ಸ್!

ಇತ್ತೀಚೆಗಷ್ಟೆ ಪಾಕಿಸ್ತಾನದ ಪ್ರವಾಸ ಕೈಗೊಂಡು ಏಕದಿನ ಸರಣಿಯನ್ನು ಹೀನಾಯವಾಗಿ ಸೋತಿದ್ದ ಏಕದಿನ ಹಾಲಿ ವಿಶ್ವಕಪ್ ಚಾಂಪಿಯನ್ಸ್ ಆಸ್ಟ್ರೇಲಿಯನ್ನರು ಇದೀಗ ಬಾಂಗ್ಲಾದೇಶದ ವಿರುದ್ಧವೂ ಸಹ ಏಕದಿನ ಸರಣಿ ಸೋಲುವ ಮೂಲಕ ಭಾರೀ ಮುಖಭಂಗವನ್ನು ಅನುಭವಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು 1-2 ಅಂತರದಿಂದ ಸೋತಿದ್ದ ಆಸ್ಟ್ರೇಲಿಯಾ ಸದ್ಯ ಬಂಗ್ಲಾದೇಶದಲ್ಲಿ ಬೀಡುಬಿಟ್ಟಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತು ಸರಣಿ ಕೈಚೆಲ್ಲಿ ಮುಖಭಂಗಕ್ಕೊಳಗಾಗಿದೆ.

ಜೂನ್ 9ರಂದು ನಡೆದಿದ್ದ ಮೊದಲ ಪಂದ್ಯದಲ್ಲಿ 86 ರನ್‌ಗಳ ಹೀನಾಯ ಸೋಲುಂಡಿದ್ದ ಕಾಂಗರೂಗಳು ನಿನ್ನೆ ( ಜೂನ್ 11 ) ನಡೆದ ಎರಡನೇ ಪಂದ್ಯದಲ್ಲಿ 5 ವಿಕೆಟ್‌ಗಳ ಪರಾಭವ ಅನುಭವಿಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಳೆ ಬಂದ ಕಾರಣ 42 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 187 ರನ್‌ ದಾಖಲಿಸಿತು. ಮಳೆಯ ಕಾರಣ ಬಾಂಗ್ಲಾದೇಶಕ್ಕೆ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ 41 ಓವರ್‌ಗಳಲ್ಲಿ 192 ರನ್‌ ಬಾರಿಸಬೇಕಾಯಿತು. ಬಾಂಗ್ಲಾದೇಶ 35 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿ ಸರಣಿಯನ್ನು ವಶಪಡಿಸಿಕೊಂಡಿತು.

ಆಸ್ಟ್ರೇಲಿಯಾ ಇನ್ನಿಂಗ್ಸ್: ತಂಡದ ಪರ ಮ್ಯಾಥ್ಯೂ ಶಾರ್ಟ್, ಕೂಪರ್ ಕೊನೊಲ್ಲಿ ಹಾಗೂ ಮ್ಯಾಟ್ ರೆನ್ಷಾ ಮೂವರೂ ಸಹ ಡಕ್‌ಔಟ್ ಆಗುವ ಮೂಲಕ ತಂಡ ಯಾವುದೇ ಕಲೆಹಾಕದೇ ಮೂರು ವಿಕೆಟ್ ಕಳೆದುಕೊಂಡು ಅತಿಕೆಟ್ಟ ಆರಂಭ ಪಡೆದುಕೊಂಡಿತು. ಬೆನ್ನಲ್ಲೇ ಅಲೆಕ್ಸ್ ಕ್ಯಾರಿ 13, ಜೋಶ್ ಇಂಗ್ಲಿಸ್ 34ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ಇನ್ನುಳಿದಂತೆ ಕ್ಯಾಮರಾನ್ ಗ್ರೀನ್ 25 ರನ್ ಗಳಿಸಿದರೆ. ಮಾರ್ನಸ್ ಲ್ಯಾಬುಷೇನ್ ಅಜೇಯ 55 ಹಾಗೂ ಕ್ಷೇವಿಯರ್ ಬಾರ್ಟ್ಲೆಟ್ 52 ರನ್ ಬಾರಿಸಿ ತಂಡಕ್ಕೆ ಸುಧಾರಣೆ ತಂದರು. ಆಡಂ ಜಂಪಾ ಡಕ್‌ಔಟ್ ಹಾಗೂ ನಾಥನ್ ಎಲ್ಲಿಸ್ ಅಜೇಯ 2 ರನ್ ಗಳಿಸಿದರು.

ಬಾಂಗ್ಲಾದೇಶದ ಪರ ಟಸ್ಕಿನ್ ಅಹ್ಮದ್ ಹಾಗೂ ಮುಸ್ತಫಿಜರ್ ರಹ್ಮಾನ್ ತಲಾ ಮೂರು ವಿಕೆಟ್ ಪಡೆದರೆ, ತನ್ವಿರ್ ಇಸ್ಲಾಂ ಎರಡು ವಿಕೆಟ್ ಪಡೆದರು.

ಬಾಂಗ್ಲಾದೇಶ ಇನ್ನಿಂಗ್ಸ್: ತಂಡದ ಪರ ತನ್ಜಿದ್ ಹಸನ್ ತಮಿಮ್ ಡಕ್‌ಔಟ್, ಸೌಮ್ಯ ಸರ್ಕಾರ್ 42, ನಜ್ಮುಲ್ ಹೊಸೈನ್ ಶಾಂಟೊ 41, ಲಿಟನ್ ದಾಸ್ 21, ಮೊಸದೆಕ್ ಹೊಸೈನ್ 15, ಮೆಹೆದಿ ಹಸನ್ ಅಜೇಯ 22 ಹಾಗೂ ತೌಹಿದ್ ಹೃದಯ್‌ ಅಜೇಯ 40 ರನ್ ಗಳಿಸಿದರು.

ಆಸ್ಟ್ರೇಲಿಯಾ ಪರ ಕ್ಷೇವಿಯರ್ ಬಾರ್ಟ್ಲೆಟ್, ರಿಲೆ ಮೆರೆಡಿತ್, ಆಡಂ ಜಂಪಾ, ಮ್ಯಾಟ್ ರೆನ್ಷಾ ಹಾಗೂ ಕ್ಯಾಮರಾನ್ ಗ್ರೀನ್ ತಲಾ ಒಂದೊಂದು ವಿಕೆಟ್ ಪಡೆದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?