LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದೂರು ದಾಖಲಾಗುತ್ತಿದ್ದಂತೆ ಹೆದರಿ ಓಡಿದ ನಟ ಧನ್ವೀರ್ ಜತೆ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಬಂಧ ಇದೆ ಎಂದಿದ್ದ ‘ಜಲಗಾರ ಯೂನಿವರ್ಸಿಟಿ’!

ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಕಲಾವಿದರಿಗೆ ಹಾಗೂ ಅವರ ಕುಟುಂಬಗಳಿಗೆ ಕಿರುಕುಳ ನೀಡುವುದು ಹೊಸ ಸುದ್ದಿಯೇನಲ್ಲ. ಆದರೆ ಅದು ಇತ್ತೀಚೆಗಿನ ದಿನಗಳಲ್ಲಿ ತೀರ ವೈಯಕ್ತಿಕವಾಗುತ್ತಿದ್ದು, ಇಲ್ಲಸಲ್ಲದ ವಿಷಯಗಳನ್ನು ಹಾಕಿ ತೇಜೋವಧೆ ಮಾಡಲಾರಂಭಿಸಿದ್ದಾರೆ.

ನಿಮ್ಮ ಮೇಲಿನ ನಟನ ಪ್ರೀತಿ ಬೇರೆ ನಟನ ಮೇಲೆ ದ್ವೇಷವಾಗಿ ಪರಿವರ್ತನೆಯಾಗದಿರಲಿ ಎಂದು ಎಷ್ಟೇ ಹೇಳಿದರೂ ಕೇಳದ ಕೆಲ ಅನಕ್ಷರಸ್ಥ ಅಭಿಮಾನಿಗಳು ಹುಚ್ಚು ನೆತ್ತಿಗೇರಿ ಬಾಯಿಗೆ ಬಂದದ್ದನ್ನು ಬರೆದು ಪೋಸ್ಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡು ಕೊನೆಗೆ ಜೈಲು ಪಾಲಾಗಿದ್ದಾರೆ.

ಸದ್ಯ ಅಂತಹದ್ದೇ ಒಂದು ಘಟನೆ ನಡೆದಿದ್ದು, ಕಿಡಿಗೇಡಿಯೊಬ್ಬ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರನ್ನು ಬಾಯಿ ತುಂಬಾ ಅತ್ತಿಗೆ ಎಂದು ಕರೆಯುವ ನಟ ಧನ್ವೀರ್‌ಗೂ ಸಂಬಂಧ ಇದೆ ಎಂದು ಪೋಸ್ಟ್ ಹಂಚಿಕೊಂಡು ವಿವಾದ ಎಬ್ಬಿಸಿದ್ದಾನೆ.

ಎಕ್ಸ್ ವೇದಿಕೆಯಲ್ಲಿ ಜಲಗಾರ ಯೂನಿವರ್ಸಿಟಿ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಲವು ದಿನಗಳಿಂದ ದರ್ಶನ್ ಹಾಗೂ ಅವರ ಕುಟುಂಬದ ವಿರುದ್ಧ ಟ್ರೋಲ್ ಪೋಸ್ಟ್‌ಗಳನ್ನು ಹಾಕುತ್ತಾ ಬಂದಿದ್ದಾನೆ.

ಹೀಗೆ ದರ್ಶನ್ ವಿರುದ್ಧ ದ್ವೇಷ ಸಾಧಿಸುತ್ತಾ ಬಂದಿದ್ದ ಈತನ ಸಮಯ ಮುಗಿಯುವ ಹಂತಕ್ಕೆ ಬಂದಿದ್ದು, ಈತ ಇತ್ತೀಚೆಗಷ್ಟೆ ಇವರೇ ನೋಡಿ ಕ್ರಿಮಿನಲ್ ದರ್ಶನ್ ಹೆಂಡತಿ, ಗಂಡ ಜೈಲಿನಲ್ಲಿದ್ದರೆ ಈಕೆ ಬಾಯ್‌ಫ್ರೆಂಡ್ ಜತೆ ಸುತ್ತಾಟ ನಡೆಸುತ್ತಿದ್ದಾಳೆ ಎಂದು ಬರೆದುಕೊಂಡು ಅನೇಕ ಅಶ್ಲೀಲ ಪದಗಳನ್ನು ಬಳಸಿ ವಿಜಯಲಕ್ಷ್ಮಿ ಮಗನ ಕುರಿತೂ ಸಹ ವಿಕೃತಿ ಮೆರೆದಿದ್ದಾನೆ.

ಈ ಪೋಸ್ಟ್‌ನಲ್ಲಿ ವಿಜಯಲಕ್ಷ್ಮಿ ಧನ್ವೀರ್ ಜತೆ ತೆರಳಿ ದರ್ಶನ್ ಅಭಿನಯದ ಡೆವಿಲ್ ಚಿತ್ರವನ್ನು ವೀಕ್ಷಿಸಿದ್ದ ವಿಡಿಯೊವನ್ನು ಬಳಿಸಿಕೊಂಡು ಕೆಟ್ಟದಾಗಿ ಬರೆಯಲಾಗಿದ್ದು, ಕೊನೆಗೆ ವಿಜಯಲಕ್ಷ್ಮಿ ಅವರಿಗೆ ದೂರು ನೀಡಬೇಡಿ ಎಂದು ಹೇಳಿ ಎಂದು ಸಹ ವ್ಯಂಗ್ಯವಾಡಿದ್ದ.

ಅದಕ್ಕೆ ತಕ್ಕ ಹಾಗೆ ವಿಜಯಲಕ್ಷ್ಮಿ ದರ್ಶನ್ ದೂರು ನೀಡಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ಖಾತೆ ತೆರೆದಿದ್ದ ಕಿಡಿಗೇಡಿ ಆ ಖಾತೆಯನ್ನು ನಿಷ್ಕ್ರಿಯಗೊಳಿಸಿ ಹೆದರಿ ಓಡಿದ್ದಾನೆ. ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದು, ಈ ವಿಕೃತ ಮನಸ್ಥಿತಿ ಹೊಂದಿರುವ ವ್ಯಕ್ತಿ ಯಾರು ಎಂಬುದು ಶೀಘ್ರದಲ್ಲೇ ತಿಳಿದುಬರಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶ