LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಾಧುರಿ ದೀಕ್ಷಿತ್ ನಟನೆಯ ‘ಮಾ ಬೆಹೆನ್’ ಇಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್: ಯಾವ ಸಮಯಕ್ಕೆ ಪ್ರಸಾರ?

ಬಾಲಿವುಡ್ ಎವರ್‌ಗ್ರೀನ್ ನಟಿ ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಬಹುನಿರೀಕ್ಷಿತ ಹಿಂದಿ ಡಾರ್ಕ್ ಕಾಮಿಡಿ ಥ್ರಿಲ್ಲರ್ ಸಿನಿಮಾ ‘ಮಾ ಬೆಹೆನ್’ ಇಂದು ಒಟಿಟಿ ಅಂಗಳಕ್ಕೆ ಲಗ್ಗೆ ಇಡಲು ಸಜ್ಜಾಗಿದೆ. ‘ತುಮ್ಹಾರಿ ಸುಲು’ ಮತ್ತು ‘ಜಲ್ಸಾ’ ದಂತಹ ವಿಮರ್ಶಾತ್ಮಕವಾಗಿ ಪ್ರಶಂಸಿಸಲ್ಪಟ್ಟ ಚಿತ್ರಗಳನ್ನು ನೀಡಿದ ಸುರೇಶ್ ತ್ರಿವೇಣಿ ಈ ಸಿನಿಮಾವನ್ನು ನಿರ್ದೇಶಿಸಿದ್ದು, ವಿಭಿನ್ನ ಪ್ರಚಾರದ ಮೂಲಕ ಈಗಾಗಲೇ ಸಿನಿಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಸಾಮಾನ್ಯವಾಗಿ ನೆಟ್‌ಫ್ಲಿಕ್ಸ್ ಸಂಸ್ಥೆಯು ತನ್ನ ಭಾರತೀಯ ಒರಿಜಿನಲ್ ಸಿನಿಮಾಗಳನ್ನು ಮಧ್ಯರಾತ್ರಿಯೇ ಸ್ಟ್ರೀಮಿಂಗ್ ಮಾಡುತ್ತದೆ. ಆದರೆ ಈ ಚಿತ್ರದ ವಿಷಯದಲ್ಲಿ ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್ ವಿಭಿನ್ನ ಬಿಡುಗಡೆ ತಂತ್ರವನ್ನು ಅಳವಡಿಸಿಕೊಂಡಿದೆ. ಅದರಂತೆ ‘ಮಾ ಬೆಹೆನ್’ ಸಿನಿಮಾ ಇಂದು ಮಧ್ಯಾಹ್ನ 12:30 ರಿಂದ ಅಧಿಕೃತವಾಗಿ ಸ್ಟ್ರೀಮಿಂಗ್ ಆರಂಭಿಸಲಿದೆ.

ಈ ಕ್ರೈಮ್ ಕಾಮಿಡಿ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅವರೊಂದಿಗೆ ಪ್ರಸ್ತುತ ಚಿತ್ರರಂಗದ ತಾರಾ ಜೋಶ್ ಆಗಿರುವ ತೃಪ್ತಿ ದಿಮ್ರಿ, ಜನಪ್ರಿಯ ಸೋಶಿಯಲ್ ಮೀಡಿಯಾ ಸ್ಟಾರ್ ಧರ್ನಾ ದುರ್ಗಾ ಮತ್ತು ಖ್ಯಾತ ನಟ ರವಿ ಕಿಶನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಈ ಚಿತ್ರದ ಕಥೆಯು ತಾಯಿ ಮತ್ತು ಆಕೆಯ ಹೆಣ್ಣುಮಕ್ಕಳ ಸುತ್ತ ಸುತ್ತುತ್ತದೆ. ಅತಿಯಾದ ಕುತೂಹಲ ಹೊಂದಿರುವ ತಮ್ಮ ನೆರೆಹೊರೆಯವರಿಂದ ದೊಡ್ಡ ರಹಸ್ಯವೊಂದನ್ನು ಮುಚ್ಚಿಡಲು ಈ ಮಹಿಳೆಯರು ಪಡುವ ಹರಸಾಹಸ ಮತ್ತು ಅದರಿಂದ ಸೃಷ್ಟಿಯಾಗುವ ಹಾಸ್ಯದ ಸನ್ನಿವೇಶಗಳೇ ಚಿತ್ರದ ಮುಖ್ಯ ಜೀವಾಳವಾಗಿದೆ. ಈ ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ನಮ್ಮ ವೆಬ್‌ಸೈಟ್ ಅನ್ನು ಗಮನಿಸುತ್ತಿರಿ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!