LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫಿಟ್ ಆದರೂ ಕೊಹ್ಲಿ ತಂಡಕ್ಕೆ ಬೇಡ ಎಂದ ಆಯ್ಕೆಗಾರರು; ಸಚಿನ್ ದಾಖಲೆ ಉಳಿಸಲು ಎಲ್ಲರೂ ಬೇಕಂತಲೇ ನಡೆಸುತ್ತಿರುವ ಷಡ್ಯಂತ್ರ ಎಂದು ಕಿಡಿಕಾರಿದ ಫ್ಯಾನ್ಸ್!

ಇತ್ತೀಚೆಗಷ್ಟೆ ಯಶಸ್ವಿಯಾಗಿ ಮುಕ್ತಾಯವಾದ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಬಳಿಕ ಭಾರತದ ಕ್ರಿಕೆಟಿಗರು ಇದೀಗ ಅಂತಾರಾಷ್ಟ್ರೀಯ ಪಂದ್ಯಗಳತ್ತ ಮುಖ ಮಾಡಿದ್ದು, ಮೊದಲಿಗೆ ಅಫ್ಘಾನಿಸ್ತಾನದ ವಿರುದ್ಧ ಒಂದು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.

ಜೂನ್ 6ರಂದು ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡರೆ, ಜೂನ್ 13, 17 ಹಾಗೂ 20ರಂದು ಏಕದಿನ ಪಂದ್ಯಗಳು ಜರುಗಲಿವೆ. ಇನ್ನು ಈ ಪಂದ್ಯಗಳಿಗೆ ಈಗಾಗಲೇ ಭಾರತ ತಂಡ ಪ್ರಕಟವಾಗಿದ್ದು, ಎಲ್ಲರೂ ವಿರಾಟ್ ಕೊಹ್ಲಿಯನ್ನು ಹಲವು ದಿನಗಳ ಬಳಿಕ ಭಾರತದ ಜೆರ್ಸಿಯಲ್ಲಿ ನೋಡಲು ಕಾತರರಾಗಿದ್ದರು.

ಆದರೆ ಪ್ರಕಟವಾದ ತಂಡ ಕಂಡು ಕೊಹ್ಲಿ ಅಭಿಮಾನಿಗಳು ಬೇಸರಕ್ಕೊಳಗಾಗಿದ್ದು, ಕೊಹ್ಲಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಇತ್ತೀಚೆಗಷ್ಟೆ ಚೆನ್ನಾಗಿ ಐಪಿಎಲ್ ಆಡಿ ಮುಗಿಸಿದ ಕೊಹ್ಲಿಗೆ ತಂಡದಲ್ಲಿ ಅವಕಾಶ ಏಕೆ ನೀಡಿಲ್ಲ ಎಂದು ನಿರಾಸೆಗೊಳಗಾಗಿದ್ದಾರೆ. ಇನ್ನು ಇದಕ್ಕೆ ಕಾರಣ ಬಹಿರಂಗವಾಗಿದ್ದು, ಕೊಹ್ಲಿ ಐಪಿಎಲ್ ಫೈನಲ್ ಪಂದ್ಯದಲ್ಲಿ ಗಾಯಕ್ಕೊಳಗಾಗಿದ್ದಾರೆ ಎನ್ನಲಾಗಿದೆ.

ಈ ಗಾಯದ ಸಮಸ್ಯೆಯಿಂದ ಕೊಹ್ಲಿ ಎರಡು ವಾರ ವಿಶ್ರಾಂತಿ ಪಡೆದುಕೊಳ್ಳಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಹೀಗೆ ಎರಡು ವಾರ ವಿಶ್ರಾಂತಿ ಅಗತ್ಯವಿರುವ ಕೊಹ್ಲಿ 20ರಂದು ನಡೆಯಲಿರುವ ಕೊನೆಯ ಏಕದಿನ ಪಂದ್ಯದಷ್ಟರಲ್ಲಿ ಗಾಯದಿಂದ ಸುಧಾರಿಸಿಕೊಳ್ಳಲಿದ್ದಾರೆ ಎನ್ನಲಾದರೂ ಬಿಸಿಸಿಐ ಆಯ್ಕೆಗಾರರು ಆ ಪಂದ್ಯಕ್ಕೂ ಸಹ ಕೊಹ್ಲಿ ಬೇಡ, ಚೆನ್ನಾಗಿ ವಿಶ್ರಾಂತಿ ಪಡೆದು ಸುಧಾರಿಸಿಕೊಳ್ಳಲಿ ಎಂದು ಸಲಹೆ ನೀಡಿದೆ ಎಂದು ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ವರದಿ ಮಾಡಿದೆ.

ಈ ವರದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಬಿಸಿಸಿಐ ಬೇಕಂತಲೇ ಕೊಹ್ಲಿಯನ್ನು ಕಡೆಗಣಿಸುತ್ತಿದೆ ಎಂದಿದ್ದಾರೆ. ಇನ್ನೂ ಕೆಲ ಕೊಹ್ಲಿ ಅಭಿಮಾನಿಗಳು ಈ ವಿಶ್ರಾಂತಿ ಎಲ್ಲ ನಾಟಕ, ಕೊಹ್ಲಿ ಸಚಿನ್‌ರ 100 ಶತಕ ದಾಖಲೆಯನ್ನು ಮುರಿದುಬಿಡುತ್ತಾರೆ ಎಂಬ ಕಾರಣಕ್ಕೆ ವಿಶ್ರಾಂತಿ ನೀಡುವ ನಾಟಕ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಹಾಕಿದ್ದಾರೆ.

ಇನ್ನೂ ಕೆಲವರು ವಯಸ್ಸಾದ ಕೊಹ್ಲಿಯ ಅವಶ್ಯಕತೆ ತಂಡಕ್ಕಿಲ್ಲ, ಹೀಗಾಗಿ ಬೇಕಂತಲೇ ಫಿಟ್ ಆದರೂ ಕೊನೆಯ ಪಂದ್ಯಕ್ಕೂ ಸಹ ಕೊಹ್ಲಿಯನ್ನು ಆಯ್ಕೆಗಾರರು ಬೇಡ ಎನ್ನುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?