LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಈ ಅಕ್ಕ ಸಿಕ್ಕಿದ್ರೆ ಆರ್‌ಸಿಬಿ ಫ್ಯಾನ್ಸ್ ರೋಡಲ್ಲೇ ರೇಪ್ ಮಾಡ್ತಾರೆ: ಸನ್‌ರೈಸರ್ಸ್ ಬೆಂಬಲಿಸಿದ ಹುಡುಗಿಗೆ ಬೆದರಿಕೆ ಹಾಕಿದ ಕಾಮುಕ ಆರ್‌ಸಿಬಿ ಫ್ಯಾನ್ ಮೇಲೆ ಬಿತ್ತು ಕೇಸ್; ವಿಡಿಯೊ

ಸದ್ಯ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ನಾಳೆ ( ಮೇ 31 ) ನಡೆಯಲಿರುವ ಫೈನಲ್ ಪಂದ್ಯದ ಮೂಲಕ ತೆರೆ ಬೀಳಲಿದೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿವೆ.

ಇನ್ನು ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ ಆರ್‌ಸಿಬಿ ಜತೆ ಯಾವ ತಂಡ ಕಪ್‌ಗಾಗಿ ಅಂತಿಮ ಹೋರಾಟ ನಡೆಸಲಿದೆ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮೂಡಿತ್ತು. ಅದರಲ್ಲೂ ಪ್ಲೇಆಫ್‌ಗೆ ಲಗ್ಗೆ ಇಟ್ಟಿದ್ದ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಲವು ವರ್ಷಗಳ ಕಾಲ ಕಂಟಕವಾಗಿ ಕಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ಎಲಿಮಿನೇಟರ್ ಪಂದ್ಯದ ಫಲಿತಾಂಶಕ್ಕಾಗಿ ಪ್ಲೇಆಫ್‌ನಲ್ಲಿದ್ದ ಇತರೆ ತಂಡಗಳು ಕಾತರವಾಗಿ ಕಾಯುತ್ತಿದ್ದವು.

ಏಕೆಂದರೆ ಇತಿಹಾಸದಲ್ಲೇ ಎಲಿಮಿನೇಟರ್, ಕ್ವಾಲಿಫಯರ್ ಹಾಗೂ ಫೈನಲ್ ಗೆದ್ದ ಕಪ್ ಎತ್ತಿಹಿಡಿದ ಭಯಾನಕ ಇತಿಹಾಸವನ್ನು ಹೊಂದಿರುವ ತಂಡವಾದ ಕಾರಣ ಆ ಕುತೂಹಲಕಾರಿ ಭಯ ಸಹಜ. ಹೀಗೆ ಎದುರಾಳಿಗಳಲ್ಲಿ ಭಯ ಹುಟ್ಟಿಸಿದ್ದ ಸನ್ ರೈಸರ್ಸ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನ್ನು ಕಾಣುತ್ತಿದ್ದಂತೆ ರಾಜಸ್ಥಾನ್ ಮಾತ್ರವಲ್ಲ ಫೈನಲ್ ತಲುಪಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳೂ ಸಹ ಸಂಭ್ರಮಿಸಿದರು.

ನಿಜ ಹೇಳಬೇಕೆಂದರೆ ರಾಜಸ್ಥಾನ್ ಅಭಿಮಾನಿಗಳಿಗಿಂತ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆಯೇ ಹೆಚ್ಚಿತ್ತು. ಏಕೆಂದರೆ ಈ ಹಿಂದೆ ಹಲವಾರು ಬಾರಿ ಮಹತ್ವದ ಪಂದ್ಯಗಳಲ್ಲಿ ಆರ್‌ಸಿಬಿಗೆ ಸೋಲುಣಿಸಿ ಟೂರ್ನಿಯಿಂದ ಹೊರಹಾಕಿದ ಇತಿಹಾಸ ಹೈದರಾಬಾದ್‌ಗಿದೆ ಹಾಗೂ ಅದರ ಅರಿವು ಇತಿಹಾಸ ಬಲ್ಲ ಆರ್‌ಸಿಬಿ ಫ್ಯಾನ್ಸ್‌ಗಿದೆ.

ಇನ್ನು ಯಾವುದೇ ಆದರೂ ಅತಿಯಾದರೆ ಒಳ್ಳೆಯದಲ್ಲ ಎನ್ನುವ ಹಾಗೆ ಈ ವಿಷಯದಲ್ಲೂ ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಅಭಿಮಾನಿಗಳು ತೋರಿಸಲು ಹೋದ ವೈರತ್ವ ಅತಿಯಾಗಿದ್ದು, ಅಭಿಮಾನಿಯೊಬ್ಬನ ವಿರುದ್ಧ ಅತ್ಯಾಚಾರ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಹೌದು, ಈ ಬಾರಿಯ ಟೂರ್ನಿಯಲ್ಲಿ ಆರಂಭದಲ್ಲಿ ಕೆಟ್ಟ ಆರಂಭ ಪಡೆದುಕೊಂಡ ಸನ್‌ರೈಸರ್ಸ್ ಹೈದರಾಬಾದ್ ತಂಡ ಬಳಿಕ ಸಾಲು ಸಾಲು ಗೆಲುವು ಕಂಡು ಇತರೆ ತಂಡಗಳಿಗೆ ತಲೆ ನೋವಾಗಿ ಪರಿಣಮಿಸಿತು. ಇಂತಹ ಆಟಗಾರರಿರುವ ತಂಡ ಯಾವುದೇ ಕಾರಣಕ್ಕೂ ಪ್ಲೇಆಫ್ ತಲುಪುವುದಿಲ್ಲ ಎನ್ನುತ್ತಿದ್ದವರ ಬಾಯಿ ಮುಚ್ಚಿಸಿ ಯಶಸ್ವಿಯಾಗಿ ಪ್ಲೇಆಫ್ ತಲುಪಿತು.

ಹೀಗೆ ಪುಟಿದೆದ್ದಿದ್ದ ತನ್ನ ತಂಡವನ್ನು ಕಂಡು ತೆಲುಗು ಯುವತಿಯೊಬ್ಬಳು ತನ್ನ ತಂಡ ಈ ಬಾರಿ ಕಪ್ ಗೆಲ್ಲಲಿದೆ ಎಂದು ವಿಶ್ವಾಸದಿಂದ ಹೇಳಿಕೊಂಡಿದ್ದಳು. ಪ್ರತಿ ತಂಡದ ಅಭಿಮಾನಿಯಂತೆ ಈಕೆ ಸಹ ಬೇರೆ ತಂಡಗಳಿಗೆ ಸವಾಲನ್ನು ಹಾಕಿ ಹೈದರಾಬಾದ್ ಕಪ್ ಗೆಲ್ಲಲಿದೆ ಎಂದಿದ್ದಳು. ಮುಖ್ಯವಾಗಿ 2016ರಲ್ಲಿ ಆರ್‌ಸಿಬಿಗೆ ಹೀನಾಯ ಸೋಲುಣಿಸಿದ್ದನ್ನು ನೆನಪಿಸಿ ಅದೇ ರೀತಿ ಈ ಬಾರಿಯೂ ನಡೆಯಲಿದೆ, ಮುಂಬೈ, ಬೆಂಗಳೂರು ಯಾರು ಬರ್ತೀರ ಬನ್ನಿ, ಈ ಬಾರಿ ಕಪ್ ನಮ್ದೇ ಎಂದಿದ್ದಳು.

ಈ ವಿಡಿಯೊ ವೈರಲ್ ಆಗಿತ್ತು. ಸನ್ ರೈಸರ್ಸ್ ಫ್ಯಾನ್ಸ್ ಶೇರ್ ಮಾಡಿದ್ದರು. ಇದೇ ವಿಡಿಯೊವನ್ನು ಆರ್‌ಸಿಬಿ ಫ್ಯಾನ್ಸ್ ಎಲಿಮಿನೇಟರ್‌ನಲ್ಲಿ ಹೈದರಾಬಾದ್ ಸೋತು ಟೂರ್ನಿಯಿಂದ ಹೊರಬಿದ್ದ ಬಳಿಕ ಹಂಚಿಕೊಂಡು ಹೀಯಾಳಿಸಲು ಆರಂಭಿಸಿದರು. ಅದು ಟೀಕೆಯವರೆಗೆ ಮಾತ್ರ ಚೆನ್ನಾಗಿತ್ತು. ಸಂಜು ಎಂಬ ಆರ್‌ಸಿಬಿ ಫ್ಯಾನ್ ಈ ವಿಡಿಯೊವನ್ನು ಹಂಚಿಕೊಂಡು ‘ಈ ವಿಡಿಯೊ ನೋಡಿ. ಈ ವಿಡಿಯೊದಲ್ಲಿರುವ ಈ ಅಕ್ಕ ಏನಾದರೂ ಸಿಕ್ಕಿದರೆ ಸನ್‌ರೈಸರ್ಸ್ ಹೇಟರ್ಸ್ ಎತ್ತಿಕೊಂಡು ಹೋಗಿ ಅಲ್ಲ, ರಸ್ತೆಯಲ್ಲೇ ರೇಪ್ ಮಾಡಿಬಿಡ್ತಾರೆ’ ಎಂದು ಅನಕ್ಷರಸ್ಥನ ಹಾಗೆ ವಿಡಿಯೊ ಮಾಡಿದ್ದ.

ಹೀಗೆ ಸಾಮಾಜಿಕ ಜಾಲತಾಣದಲ್ಲಿ ರೇಪ್ ಬೆದರಿಕೆ ಹಾಕಿದ ಈ ಕಾಮುಕನ ವಿಡಿಯೊ ವೇಗವಾಗಿ ವೈರಲ್ ಆಯಿತು. ವಿಡಿಯೊ ವೈರಲ್ ಆಗುತ್ತಿದ್ದಂತೆ ಹಲವಾರು ಸನ್ ರೈಸರ್ಸ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಹಿಂಬಾಲಕರು ಈತನ ವಿರುದ್ಧ ಕಿಡಿಕಾರಿದರು. ಅಲ್ಲದೇ ಸೈಬರ್ ಕ್ರೈಮ್‌ನಲ್ಲಿ ದೂರು ಸಹ ದಾಖಲಾಗಿದೆ.

ಓರ್ವ ಯುವತಿ ತನ್ನ ತಂಡವನ್ನು ವಹಿಸಿಕೊಂಡು ಇತರೆ ತಂಡಗಳನ್ನು ಟ್ರೋಲ್ ಮಾಡಿದ್ದಕ್ಕೆ ರೇಪ್ ಮಾಡುತ್ತಾರೆ ಎನ್ನುವ ಮಟ್ಟಕ್ಕೆ ಆರ್‌ಸಿಬಿ ಹುಚ್ಚುತನ ತಲುಪಿದ್ದು, ಅಭಿಮಾನಿಗಳು ಅತಿರಕೇಕದ ವರ್ತನೆಯನ್ನು ಕಡಿಮೆ ಮಾಡಿಕೊಳ್ಳಬೇಕಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶ