LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಈದ್ ಅಲ್-ಅಧಾ ಹಬ್ಬಕ್ಕೆ ಡೊನಾಲ್ಡ್ ಟ್ರಂಪ್ ಎಮ್ಮೆ ಬಲಿಕೊಡಲು ಮುಂದಾದ ಮಾಲೀಕ

ಢಾಕಾ: ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಅಪರೂಪದ ಡೊನಾಲ್ಡ್ ಟ್ರಂಪ್ ಎಮ್ಮೆಯನ್ನು ಮಾಲೀಕ ಬಲಿ ಕೊಡಲು ಮುಂದಾಗಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೇಶ ವಿನ್ಯಾಸವನ್ನು ಹೋಲುವ ಎಮ್ಮೆಯನ್ನು ಮುಂಬರುವ ಈದ್ ಅಲ್-ಅಧಾ ಹಬ್ಬದಂದು ಬಲಿಕೊಡಲಾಗುತ್ತದೆ ಎಂದು ತಿಳಿದುಬಂದಿದೆ.

ಬಾಂಗ್ಲಾದೇಶದ ರಾಜಧಾನಿ ಢಾಕಾ ಬಳಿಯ ನಾರಾಯಣಗಂಜ್‌ನ ಜಮೀನೊಂದರಲ್ಲಿ ಸಾಕಲಾಗಿರುವ, ಅಪರೂಪದ ಟ್ರಂಪ್ ಕೇಶರಾಶಿಯನ್ನೇ ಹೋಲುವ ವಿಶಿಷ್ಟ ಹೊಂಬಣ್ಣದ ಕೇಶವಿನ್ಯಾಸ ಹೊಮ್ದಿರುವ ಈ ಎಮ್ಮೆ ಡೊನಾಲ್ಡ್ ಟ್ರಂಪ್ ಎಮ್ಮೆ ಎಂದೇ ಖ್ಯಾತಿ ಪಡೆದಿದೆ. ಈದ್ ಅಲ್-ಅಧಾ ಹಬ್ಬದಂದು ಈ ಎಮ್ಮೆಯನ್ನು ಬಲಿಕೊಡಲಾಗುತ್ತಿದ್ದು, ಈಗಾಗಲೇ ಅದನ್ನು ಮಾರಾಟ ಮಾಡಲಾಗಿದೆ ಎನ್ನಲಾಗಿದೆ.

ಡೊನಾಲ್ಡ್ ಟ್ರಂಪ್ ಎಮ್ಮೆ ವೈಶಿಷ್ಟ್ಯ:
ಸುಮಾರು 700 ಕೆಜಿ ತೂಕದ, ನಾಲ್ಕು ವರ್ಷದ ಈ ಎಮ್ಮೆ ಮೆಲನಿನ್ ಕೊರತೆಯಿಂದಾಗಿ ಬಿಳಿ ಚರ್ಮವನ್ನು ಹೊಂದಿರುವ ಅತ್ಯಂತ ಅಪರೂಪದ ‘ಆಲ್ಬಿನೋ’ ತಳಿಗೆ ಸೇರಿದ್ದಾಗಿದೆ. ಇದರ ಹಣೆಯ ಮೇಲೆ ಬೀಳುವ ಹೊಂಬಣ್ಣದ ಕೂದಲಿನ ಗೊಂಚಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಿಗ್ನೇಚರ್ ಕೇಶವಿನ್ಯಾಸವನ್ನು ಹೋಲುತ್ತದೆ. ಈ ವಿಶಿಷ್ಟ ಕೂದಲನ್ನು ಗಮನಿಸಿದ ಮಾಲೀಕ ಜಿಯಾವುದ್ದೀನ್ ಮೃಧಾ ಅವರ ಕಿರಿಯ ಸಹೋದರ, ಇದಕ್ಕೆ ಡೊನಾಲ್ಡ್ ಟ್ರಂಪ್ ಎಂಬ ಅಡ್ಡಹೆಸರನ್ನು ಇಟ್ಟಿದ್ದರು.

ಕಳೆದ ಕೆಲವು ವಾರಗಳಿಂದ ಈ ಅಪರೂಪದ ಎಮ್ಮೆಯೊಂದಿಗೆ ಸೆಲ್ಫಿ ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಲು ದೂರದ ಜಿಲ್ಲೆಗಳಿಂದ ಪ್ರತಿದಿನ ನೂರಾರು ಜನರು ಜಮೀನಿಗೆ ಭೇಟಿ ನೀಡುತ್ತಿದ್ದರು. ಅದರಲ್ಲೂ ಈ ವಿಶಿಷ್ಟ ಎಮ್ಮೆಯನ್ನು ನೋಡಲು ಮಕ್ಕಳು ಜಮೀನಿಗೆ ಹೋಗುವ ದಾರಿಯಲ್ಲಿ ಕಿಕ್ಕಿರಿದು ತುಂಬಿರುತ್ತಿದ್ದರು.

ಅತ್ಯಂತ ಸೌಮ್ಯ ಮತ್ತು ಶಾಂತ ಸ್ವಭಾವದ ಈ ಎಮ್ಮೆಯ ಆರೋಗ್ಯಕ್ಕಾಗಿ ದಿನಕ್ಕೆ ನಾಲ್ಕು ಬಾರಿ ಸ್ನಾನ ಹಾಗೂ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನಿರಂತರ ಜನಸಂದಣಿಯ ಒತ್ತಡದಿಂದಾಗಿ ಅದು ತೂಕ ಇಳಿಸಿಕೊಂಡಿದ್ದರಿಂದ, ಕೊನೆಯ ದಿನಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು.

ಬರುವ ಜೂನ್ ತಿಂಗಳ ಕೊನೆಯಲ್ಲಿ ಬಾಂಗ್ಲಾದೇಶದಲ್ಲಿ ಈದ್ ಅಲ್-ಅಧಾ ಹಬ್ಬ ನಡೆಯಲಿದ್ದು, ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಲಕ್ಷಾಂತರ ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ನಾನು ನನ್ನ ಪ್ರೀತಿಯ ಡೊನಾಲ್ಡ್ ಟ್ರಂಪ್ ಎಮ್ಮೆಯನ್ನು ತುಂಬಾ ಮಿಸ್ ಮಾಡಿಕೊಳ್ಳಲಿದ್ದೇನೆ, ಆದರೆ ಪ್ರೀತಿಯ ವಸ್ತುವನ್ನು ತ್ಯಾಗ ಮಾಡುವುದೇ ಈದ್ ಹಬ್ಬದ ಮೂಲ ಆಶಯವಾಗಿದೆ ಎಂದು ಮಾಲೀಕ ಜಿಯಾವುದ್ದೀನ್ ಮೃಧಾ ಭಾವುಕರಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ಇಂತಹ ವಿಶಿಷ್ಟ ಮತ್ತು ದೈತ್ಯ ಪ್ರಾಣಿಗಳು ಹಬ್ಬದ ಸಮಯದಲ್ಲಿ ವೈರಲ್ ಆಗುವುದು ಹಾಗೂ ಸೆಲೆಬ್ರಿಟಿಗಳ ಹಾಗೂ ಖ್ಯಾತನಾಮರ ಹೆಸರು ಪಡೆಯುವುದು ಟ್ರೆಂಡ್ ಆಗಿ ಪರಿಣಮಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?