LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕರುಣಾನಿಧಿಗೆ ತನ್ನ ಹಿಂದೆ ನಿಂತಿರುವ ಹುಡುಗ ಮುಂದೆ ತನ್ನ ಡಿಎಂಕೆ ಪಕ್ಷ ನಾಶ ಮಾಡ್ತಾನೆ ಎಂಬ ಐಡಿಯಾ ಇರಲಿಲ್ಲ; ತಲೆಕೆಟ್ಟ ಟ್ವೀಟ್ ಮಾಡಿದ ರಾಮ್‌ಗೋಪಾಲ್ ವರ್ಮಾ

ಮೊನ್ನೆಯಷ್ಟೇ ( ಮೇ 4 ) ಪ್ರಕಟವಾದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶದಲ್ಲಿ ತಮಿಳುನಾಡು ಫಲಿತಾಂಶ ಭಾರೀ ಚರ್ಚೆಗೆ ಕಾರಣವಾಗಿದೆ.

ಅಧಿಕಾರದಲ್ಲಿದ್ದ ಡಿಎಂಕೆ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದೆ ಎಂದು ಹಲವಾರು ಸಮೀಕ್ಷೆಗಳು ಊಹಿಸಿದ್ದವು ಹಾಗೂ ಸ್ವತಃ ಡಿಎಂಕೆ ಸಹ ಮತ್ತೊಮ್ಮೆ ಸರ್ಕಾರ ಎಂದು ವಿಶ್ವಾಸ ವ್ಯಕ್ತಪಡಿಸಿತ್ತು.

ಆದರೆ ಫಲಿತಾಂಶ ಆ ಲೆಕ್ಕಾಚಾರಗಳನ್ನೆಲ್ಲ ಉಲ್ಟಾ ಮಾಡಿದೆ. ವಿಜಯ್ ನೇತೃತ್ವದ ಹೊಸ ಪಕ್ಷ ಟಿವಿಕೆ 108 ಸೀಟುಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಡಿಎಂಕೆ 59 ಸೀಟುಗಳಿಗೆ ತೃಪ್ತಿಪಟ್ಟುಕೊಂಡಿದ್ದು, ಅಧಿಕಾರ ಕಳೆದುಕೊಂಡಿದೆ. ಹೀಗೆ ದಶಕಗಳ ಇತಿಹಾಸವಿರುವ ಪಕ್ಷವನ್ನು ಎರಡು ವರ್ಷಗಳ ಹಿಂದೆ ಸ್ಥಾಪನೆಗೊಂಡ ಪಕ್ಷ ಸೋಲಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿದ್ದು, ಇದರ ಕುರಿತು ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಟ್ವೀಟ್ ಮಾಡಿ ಚರ್ಚೆ ಹುಟ್ಟುಹಾಕಿದ್ದಾರೆ.

ಯಾವುದಾದರೊಂದು ವೈರಲ್ ವಿಷಯದ ಬಗ್ಗೆ ತನ್ನದೇ ಶೈಲಿಯಲ್ಲಿ ಟ್ವೀಟ್ ಮಾಡುವ ವರ್ಮಾ ಈ ಬಾರಿ ಕರುಣಾನಿಧಿ ಜತೆ ವಿಜಯ್ ಇರುವ ಫೋಟೊ ಹಂಚಿಕೊಂಡು ಡಿಎಂಕೆ ಪಕ್ಷ ನಾಶವಾಯಿತು ಎಂದಿದ್ದಾರೆ.

ಈ ಹಿಂದಿನ ಕಾರ್ಯಕ್ರಮವೊಂದರ ಫೋಟೊ ಇದಾಗಿದ್ದು, ಇದರಲ್ಲಿ ಕರುಣಾನಿಧಿ ರಿಬ್ಬನ್ ಕಟ್ ಮಾಡುತ್ತಿದ್ದಾರೆ. ಇವರ ಹಿಂದೆ ಬಾಲ್ಯದ ವಿಜಯ್ ಸಹ ಇದ್ದಾರೆ. ಈ ಫೋಟೊ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ ‘ಕರುಣಾನಿಧಿಗೆ ತನ್ನ ಬೆನ್ನ ಹಿಂದೆ ನಿಂತಿರುವ ಹುಡುಗ ಒಂದು ದಿನ ತನ್ನ ಪಕ್ಷವನ್ನು ನಾಶ ಮಾಡುತ್ತಾನೆ ಎಂದು ಕನಸನ್ನೂ ಕಂಡಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ರಾಜಕೀಯದಲ್ಲಿ ಏಳು ಬೀಳು ಸಹಜ. ಇಂತಹ ಸೋಲುಗಳನ್ನು ಡಿಎಂಕೆ ಅನುಭವಿಸಿದೆ. ಕೇವಲ ಒಂದು ಸೋಲನ್ನು ಪಕ್ಷದ ನಾಶ ಎಂದರೆ ಹೇಗೆ, ತಲೆಯಲ್ಲಿ ಬುದ್ದಿ ಇಲ್ಲದೇ ನಾಶ ಎಂಬ ಪದ ಬಳಸಬೇಡಿ, ಆ ಪಕ್ಷಕ್ಕೆ ಪುಟಿದೇಳುವುದು ಚೆನ್ನಾಗಿ ತಿಳಿದಿದೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಆಡಳಿತ ಪಕ್ಷದಲ್ಲಿ ಕೂರುವ ಡಿಎಂಕೆಗಿಂತ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ಡಿಎಂಕೆ ಇನ್ನೂ ಅಪಾಯಕಾರಿ ಅದಕ್ಕೆ ಟಿವಿಕೆ ಸಿದ್ಧವಾಗಲಿ ಎಂದು ಎಚ್ಚರಿಕೆ ನೀಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?