LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕರಾವಳಿ ಪ್ರದೇಶಗಳಲ್ಲಿ HCL ಫೌಂಡೇಶನ್‌ನ ಬೃಹತ್ ಸ್ವಚ್ಛತಾ ಅಭಿಯಾನ

ಬೆಂಗಳೂರು: ಎಚ್‌ಸಿಎಲ್‌ಟೆಕ್‌ನ ಭಾರತದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿರುವ ಎಚ್‌ಸಿಎಲ್ ಫೌಂಡೇಶನ್, ಕರ್ನಾಟಕ ಸೇರಿದಂತೆ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 50 ಕರಾವಳಿ ಪ್ರದೇಶಗಳಲ್ಲಿ ನಡೆಸಿದ ಬೃಹತ್ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಎಚ್‌ಸಿಎಲ್ ಗ್ರೂಪ್‌ನ 50ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 11ರಂದು ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್, ಪೀಪಲ್ಸ್ ಆಕ್ಷನ್ ಫಾರ್ ಡೆವಲಪ್‌ಮೆಂಟ್, ಡೆವಲಪ್‌ಮೆಂಟ್ ರಿಸರ್ಚ್ ಕಮ್ಯುನಿಕೇಷನ್ ಅಂಡ್ ಸರ್ವೀಸಸ್ ಸೆಂಟರ್, ಸ್ಪಂದನ್, ರೀಫ್‌ವಾಚ್ ಮರೈನ್ ಕನ್ಸರ್ವೇಷನ್, ಪ್ಲಾನ್@ಅರ್ಥ್, ಅನಿಮಲ್ ವಾರಿಯರ್ಸ್ ಕನ್ಸರ್ವೇಷನ್ ಸೊಸೈಟಿ ಹಾಗೂ ಪ್ಲಾನ್ ಫೌಂಡೇಶನ್ ಸಹಯೋಗದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಅಂಗವಾಗಿ ಕುಂದಾಪುರ, ಕೊಚ್ಚಿ, ರಾಮನಾಥಪುರಂ, ತೂತುಕುಡಿ, ಒಂಗೋಲ್, ಪಶ್ಚಿಮ ಬಂಗಾಳದ ದಕ್ಷಿಣ ಮತ್ತು ಉತ್ತರ 24 ಪರಗಣ ಹಾಗೂ ಪುರಿಯಲ್ಲಿ ಬೀದಿ ನಾಟಕ, ಮರಳು ಶಿಲ್ಪ ಮತ್ತು ಸಮುದ್ರ ತ್ಯಾಜ್ಯ ಪ್ರದರ್ಶನ ಸೇರಿದಂತೆ ಜಾಗೃತಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಯಿತು.

news_1790057058_0_910.webp

ಅಭಿಯಾನದಲ್ಲಿ 7,000ಕ್ಕೂ ಹೆಚ್ಚು ಸ್ವಯಂಸೇವಕರು ಮತ್ತು ಸ್ಥಳೀಯ ಸಮುದಾಯದ ಸದಸ್ಯರು ಭಾಗವಹಿಸಿದ್ದು, ಕರಾವಳಿ ಪರಿಸರದಿಂದ 54,000 ಕೆ.ಜಿಗೂ ಹೆಚ್ಚು ಸಮುದ್ರ ತ್ಯಾಜ್ಯವನ್ನು ಸಂಗ್ರಹಿಸಿ ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಲಾಗಿದೆ.

“ಆರೋಗ್ಯಕರ ಸಾಗರಗಳು ಮತ್ತು ಸ್ವಚ್ಛ ಕರಾವಳಿಗಳು ಪರಿಸರ ಸಮತೋಲನ, ಜೀವನೋಪಾಯ ಮತ್ತು ಸಮುದಾಯದ ಯೋಗಕ್ಷೇಮಕ್ಕೆ ಅತ್ಯಂತ ಮುಖ್ಯ. ಕರಾವಳಿ ಪರಿಸರದ ರಕ್ಷಣೆಗೆ ಎಲ್ಲ ಪಾಲುದಾರರ ನಿರಂತರ ಭಾಗವಹಿಸುವಿಕೆ ಅಗತ್ಯ,” ಎಂದು ಎಚ್‌ಸಿಎಲ್ ಫೌಂಡೇಶನ್ ನಿರ್ದೇಶಕಿ ಡಾ. ನಿಧಿ ಪುಂಧೀರ್ ಹೇಳಿದರು.

ಕರಾವಳಿ ಮತ್ತು ಸಮುದ್ರ ಸಂರಕ್ಷಣಾ ಕಾರ್ಯಕ್ರಮದಡಿ ಎಚ್‌ಸಿಎಲ್ ಫೌಂಡೇಶನ್ ಹಾಗೂ ಅದರ ಪಾಲುದಾರರು ಇದುವರೆಗೆ 8,29,610 ಕೆ.ಜಿ.ಗೂ ಹೆಚ್ಚು ಘೋಸ್ಟ್ ನೆಟ್‌ಗಳು ಮತ್ತು ಸಮುದ್ರ ತ್ಯಾಜ್ಯವನ್ನು ತೆರವುಗೊಳಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!