LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೇಷನ್ ಕಾರ್ಡ್ ಬಳಕೆದಾರರಿಗೆ ಮಹತ್ವದ ಸುದ್ದಿ: ತಿದ್ದುಪಡಿಗೆ ಅವಕಾಶ ಹಾಗೂ e-KYC ಕುರಿತು ಆಹಾರ ಇಲಾಖೆ ಎಚ್ಚರಿಕೆ!

ಬೆಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿ (Ration Card) ಇ-ಕೆವೈಸಿ ಪ್ರಕ್ರಿಯೆ ಪ್ರಸ್ತುತ ಅತ್ಯಂತ ವೇಗವಾಗಿ ನಡೆಯುತ್ತಿದ್ದು, ನ್ಯಾಯಬೆಲೆ ಅಂಗಡಿಗಳ ಮುಂದೆ ಸಾರ್ವಜನಿಕರು ಸಾಲುಗಟ್ಟಿ ನಿಂತು ಇ-ಕೆವೈಸಿ ಮಾಡಿಸುತ್ತಿದ್ದಾರೆ. ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆಯ ನಡುವೆಯೇ ರಾಜ್ಯ ಸರ್ಕಾರವು ಇದೀಗ ರೇಷನ್ ಕಾರ್ಡ್ ತಿದ್ದುಪಡಿಗೂ ಅವಕಾಶ ಕಲ್ಪಿಸಿಕೊಟ್ಟಿದೆ. ಅರ್ಹ ಫಲಾನುಭವಿಗಳು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಅಗತ್ಯ ತಿದ್ದುಪಡಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಹೊಸ ರೇಷನ್ ಕಾರ್ಡ್‌ಗಳಿಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.

'ಮೇರಾ ರೇಷನ್' ಆಪ್ ಬಳಸಿ ಇ-ಕೆವೈಸಿ ಮಾಡುತ್ತಿದ್ದೀರಾ? ಆಹಾರ ಇಲಾಖೆಯ ಎಚ್ಚರಿಕೆ: ನ್ಯಾಯಬೆಲೆ ಅಂಗಡಿಗಳಲ್ಲಿನ ಸರ್ವರ್ ಸಮಸ್ಯೆ ಮತ್ತು ಸರತಿಯ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಹಲವರು ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳ ವಿಡಿಯೋಗಳನ್ನು ನೋಡಿ ಕೇಂದ್ರ ಸರ್ಕಾರದ 'ಮೇರಾ ರೇಷನ್‌' (Mera Ration) ಅಥವಾ 'Mera eKYC' ಮೊಬೈಲ್ ಆಪ್‌ಗಳ ಮೂಲಕ 'ಫೇಸ್ ಅಥೆಂಟಿಕೇಷನ್' ಬಳಸಿ ಮನೆಯಲ್ಲೇ ಇ-ಕೆವೈಸಿ ಮಾಡುತ್ತಿದ್ದಾರೆ. ಆದರೆ, ಈ ರೀತಿ ಆಪ್ ಮೂಲಕ ಮಾಡಲಾದ ಇ-ಕೆವೈಸಿ ರಾಜ್ಯ ಆಹಾರ ಇಲಾಖೆಯ ಅಧಿಕೃತ ಸರ್ವರ್‌ನಲ್ಲಿ ಮಾನ್ಯವಾಗುವುದಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸ್ಪಷ್ಟನೆ ನೀಡಿದೆ.

ಆಪ್ ಮೂಲಕ ಮಾಡಿದರೆ ಇ-ಕೆವೈಸಿ ಮಾನ್ಯವಾಗುವುದಿಲ್ಲ ಏಕೆ? ಕೇಂದ್ರ ಸರ್ಕಾರದ 'ಮೇರಾ ರೇಷನ್' ಆಪ್‌ಗೂ ಕರ್ನಾಟಕ ರಾಜ್ಯ ಆಹಾರ ಇಲಾಖೆಯ ಆಂತರಿಕ ಪೋರ್ಟಲ್‌ಗೂ (ahara.karnataka.gov.in) ನೇರ ಸಂಪರ್ಕವಿಲ್ಲ. ಆದ್ದರಿಂದ, ಆಪ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಿದರೂ ರಾಜ್ಯದ ಪೋರ್ಟಲ್‌ನಲ್ಲಿ 'ಇ-ಕೆವೈಸಿ ಅಪೂರ್ಣ' ಎಂದೇ ತೋರಿಸುತ್ತದೆ. ಆದ್ದರಿಂದ ಸಾರ್ವಜನಿಕರು ಇಂತಹ ಆಪ್‌ಗಳನ್ನು ಬಳಸಿ ಗೊಂದಲಕ್ಕೊಳಗಾಗಬೇಡಿ ಹಾಗೂ ಅಧಿಕೃತವಾಗಿ ನ್ಯಾಯಬೆಲೆ ಅಂಗಡಿಗಳಲ್ಲೇ ಇ-ಕೆವೈಸಿ ಪೂರ್ಣಗೊಳಿಸುವಂತೆ ಇಲಾಖೆ ಸೂಚಿಸಿದೆ.

ರೇಷನ್ ಕಾರ್ಡ್‌ನಲ್ಲಿ ಏನೆಲ್ಲಾ ತಿದ್ದುಪಡಿ ಮಾಡಿಸಬಹುದು? ಪ್ರಸ್ತುತ ನೀಡಲಾಗಿರುವ ಅವಕಾಶದಲ್ಲಿ ರೇಷನ್ ಕಾರ್ಡ್‌ದಾರರು ಹೆಸರು ತಿದ್ದುಪಡಿ, ಹೊಸ ಸದಸ್ಯರ ಹೆಸರು ಸೇರ್ಪಡೆ, ಹೆಸರು ತೆಗೆದುಹಾಕುವಿಕೆ, ವಿಳಾಸ ಬದಲಾವಣೆ, ಕುಟುಂಬದ ಮುಖ್ಯಸ್ಥರ ಬದಲಾವಣೆ, ನ್ಯಾಯಬೆಲೆ ಅಂಗಡಿ ಬದಲಾವಣೆ ಹಾಗೂ ಫೋಟೋ ಬದಲಾವಣೆ ಸೇರಿದಂತೆ ಪ್ರಮುಖ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದಾಗಿದೆ.

ತಿದ್ದುಪಡಿಗೆ ಅಗತ್ಯವಿರುವ ಪ್ರಮುಖ ದಾಖಲೆಗಳು: ತಿದ್ದುಪಡಿ ಕಾರ್ಯಗಳಿಗಾಗಿ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಪ್ರಸ್ತುತ ಇರುವ ರೇಷನ್ ಕಾರ್ಡ್, ಕುಟುಂಬದ ಜಂಟಿ ಫೋಟೋ, ವಿಳಾಸದ ಪುರಾವೆ (ವಿದ್ಯುತ್ ಬಿಲ್), ಮತ್ತು ಸದಸ್ಯರ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಸಣ್ಣ ಮಕ್ಕಳ ಹೆಸರು ಸೇರ್ಪಡೆ ಮಾಡುವುದಿದ್ದರೆ, ಮಗುವಿನ ಆಧಾರ್ ಕಾರ್ಡ್ ಜೊತೆಗೆ ಜನನ ಪ್ರಮಾಣ ಪತ್ರವನ್ನು (Birth Certificate) ಕಡ್ಡಾಯವಾಗಿ ಲಗತ್ತಿಸಬೇಕು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!