LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BSNL ಗ್ರಾಹಕರಿಗೆ ಬಂಪರ್ ಆಫರ್..! ಅತಿ ಕಡಿಮೆ ರೀಚಾರ್ಜ್‌ಗೆ 380 ದಿನಗಳ ವ್ಯಾಲಿಡಿಟಿ; ಬೆಲೆ ಕೇಳಿದ್ರೆ ಶಾಕ್!

 ಬೆಂಗಳೂರು: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ BSNL ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಕೇವಲ ₹2,399 ರೀಚಾರ್ಜ್‌ಗೆ ಬರೋಬ್ಬರಿ 380 ದಿನಗಳ ವ್ಯಾಲಿಡಿಟಿ ನೀಡಲಾಗುತ್ತಿದ್ದು, ಇದರೊಂದಿಗೆ ಪ್ರತಿದಿನ 2GB ಡೇಟಾ, ಅನಿಯಮಿತ ಕರೆ ಹಾಗೂ 100 SMS ಸೌಲಭ್ಯವೂ ಸಿಗಲಿದೆ. ಅಷ್ಟೇ ಅಲ್ಲ, ಈ ಆಫರ್‌ನಲ್ಲಿ ಒಟ್ಟು 760GB ಡೇಟಾ ಪಡೆಯಬಹುದಾಗಿದೆ. ಆದರೆ ಈ ವಿಶೇಷ ಆಫರ್ ಅಕ್ಟೋಬರ್ 15ರವರೆಗೆ ಮಾತ್ರ ಲಭ್ಯವಿರಲಿದೆ.

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹಲವು ಆಕರ್ಷಕ ರೀಚಾರ್ಜ್ ಪ್ಲಾನ್‌ಗಳನ್ನು ನೀಡುತ್ತಿದೆ. ಸಾಮಾನ್ಯವಾಗಿ 365 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್‌ಗೆ ಇದೀಗ ಹೆಚ್ಚುವರಿ 15 ದಿನಗಳ ವ್ಯಾಲಿಡಿಟಿಯನ್ನು ನೀಡಲಾಗುತ್ತಿದೆ. ಇದರಿಂದ ಒಟ್ಟು ವ್ಯಾಲಿಡಿಟಿ 380 ದಿನಗಳಿಗೆ ಏರಿಕೆಯಾಗಿದೆ.

BSNL ₹2,399 ಪ್ಲಾನ್

BSNL ಒಂದು ವರ್ಷದ ಅವಧಿಗೆ ₹2,399 ಬೆಲೆಯಲ್ಲಿ ಈ ಪ್ರೀಪೇಯ್ಡ್ ಪ್ಲಾನ್‌ ಅನ್ನು ನೀಡುತ್ತಿದೆ. ಸಾಮಾನ್ಯವಾಗಿ ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ. ಆದರೆ ಸೀಮಿತ ಅವಧಿಯ ಆಫರ್‌ನಡಿ ಹೆಚ್ಚುವರಿಯಾಗಿ 15 ದಿನಗಳ ವ್ಯಾಲಿಡಿಟಿ ನೀಡಲಾಗುತ್ತಿದ್ದು, ಒಟ್ಟು ವ್ಯಾಲಿಡಿಟಿ 380 ದಿನಗಳಿಗೆ ತಲುಪಿದೆ.

₹2,399 ಬೆಲೆಯಲ್ಲಿ 380 ದಿನಗಳ ವ್ಯಾಲಿಡಿಟಿ ಲೆಕ್ಕ ಹಾಕಿದರೆ, ದಿನಕ್ಕೆ ಸರಾಸರಿ ₹6.31 ವೆಚ್ಚವಾಗುತ್ತದೆ.

30GB ಹೆಚ್ಚುವರಿ ಡೇಟಾ

ವ್ಯಾಲಿಡಿಟಿಯನ್ನು ಮಾತ್ರವಲ್ಲದೆ, ಈ ಪ್ಲಾನ್‌ನಲ್ಲಿ ಲಭ್ಯವಾಗುವ ಡೇಟಾವನ್ನೂ ಹೆಚ್ಚಿಸಲಾಗಿದೆ. ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಸಿಗಲಿದೆ.380 ದಿನಗಳ ವ್ಯಾಲಿಡಿಟಿಗೆ ಪ್ರತಿದಿನ 2GB ಲೆಕ್ಕದಲ್ಲಿ ಒಟ್ಟು 760GB ಡೇಟಾ ಲಭ್ಯವಾಗುತ್ತದೆ. ಸಾಮಾನ್ಯ 365 ದಿನಗಳ ಅವಧಿಯಲ್ಲಿ ಸಿಗುತ್ತಿದ್ದ 730GBಗೆ ಹೋಲಿಸಿದರೆ ಇದು 30GB ಹೆಚ್ಚುವರಿ ಡೇಟಾ ಆಗಿದೆ.

ಅನಿಯಮಿತ ಕರೆ, ದಿನಕ್ಕೆ 100 SMS

ಈ ಪ್ಲಾನ್‌ನಲ್ಲಿ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ವಾಯ್ಸ್ ಕಾಲಿಂಗ್ ಸೌಲಭ್ಯವೂ ಇದೆ. ಅಂದರೆ ಯಾವುದೇ ನೆಟ್‌ವರ್ಕ್‌ಗೆ ಬೇಕಾದಷ್ಟು ಕರೆ ಮಾಡಬಹುದು.ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಿಗುತ್ತದೆ. 380 ದಿನಗಳ ಅವಧಿಯಲ್ಲಿ ಒಟ್ಟು 38,000 SMS ಕಳುಹಿಸಬಹುದಾಗಿದೆ.

ಅಕ್ಟೋಬರ್ 15ರೊಳಗೆ ರೀಚಾರ್ಜ್ ಮಾಡಬೇಕು

ಇದು ಸೀಮಿತ ಅವಧಿಯ ಆಫರ್ ಆಗಿದೆ. BSNL ತನ್ನ X (ಹಿಂದಿನ ಟ್ವಿಟರ್) ಪೋಸ್ಟ್‌ನಲ್ಲಿ ಈ ಆಫರ್‌ ಕುರಿತು ಮಾಹಿತಿ ನೀಡಿದೆ. ಅಕ್ಟೋಬರ್ 1ರಿಂದ ಅಕ್ಟೋಬರ್ 15ರವರೆಗೆ ಈ ಆಫರ್ ಲಭ್ಯವಿರುತ್ತದೆ.

ಅಂದರೆ ಹೆಚ್ಚುವರಿ 15 ದಿನಗಳ ವ್ಯಾಲಿಡಿಟಿ ಪಡೆಯಲು ಗ್ರಾಹಕರು ಅಕ್ಟೋಬರ್ 15ರೊಳಗೆ ₹2,399 ರೀಚಾರ್ಜ್ ಮಾಡಿಕೊಳ್ಳಬೇಕು. ಈ ಅವಧಿ ಮುಗಿದ ಬಳಿಕ ಪ್ಲಾನ್ ಮತ್ತೆ ಸಾಮಾನ್ಯ 365 ದಿನಗಳ ವ್ಯಾಲಿಡಿಟಿಗೆ ಮರಳಲಿದೆ.

ಈ ಆಫರ್ ಕುರಿತು ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ತಮ್ಮ ಸಮೀಪದ BSNL ಕಚೇರಿ, BSNL ಅಧಿಕೃತ ವೆಬ್‌ಸೈಟ್ ಅಥವಾ BSNL Self-Care ಆ್ಯಪ್‌ ಅನ್ನು ಸಂಪರ್ಕಿಸಬಹುದು. ಅಲ್ಲದೆ 1800-180-1503 ಸಂಖ್ಯೆಗೆ ಕರೆ ಮಾಡುವ ಮೂಲಕವೂ ಮಾಹಿತಿ ಪಡೆಯಬಹುದು.

 

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!